ರಾಜ್ಯ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಚುಕ್ಕಾಣಿ ಸಮೀಕ್ಷೆಗಳು ಏನು ಹೇಳತ್ತಿವಿ.

 

ಬೆಂಗಳೂರು,ಮೇ2- ಕರ್ನಾಟಕ ರಾಜ್ಯದಲ್ಲಿ ಈಗ ವಿಧಾನಸಭಾ ಚುನಾವಣಾ ಕಾವು ಏರ ತೊಡಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈ ಬಾರಿ ಸರ್ಕಾರ ನಮ್ಮದೇ ಎನ್ನುತ್ತಿವೆ. ಸಮೀಕ್ಷೆಗಳಂತೂ ಅತಂತ್ರ ವಿಧಾನಸಭೆಯ ಸುಳಿವು ನೀಡುತ್ತಿವೆ.

 

ಒಂದು ಸಮೀಕ್ಷೆ ಕಾಂಗ್ರೆಸ್‍ಗೆ ಸರಳ ಬಹುಮತ ಸಿಗಬಹುದು ಎನ್ನುತ್ತಿದ್ದರೆ, ಮತ್ತೊಂದು ಸಮೀಕ್ಷೆ ಬಿಜೆಪಿಗೆ ಜೈ ಎನ್ನುತ್ತಿದೆ.

ಆದರೆ ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಜೆಡಿಎಸ್‍ಗೆ ಅವಕಾಶ ಸಿಗುವ ಸಾಧ್ಯತೆಗಳತ್ತ ಬೊಟ್ಟು ಮಾಡುತ್ತಿವೆ.

ಈ ಹಂತದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಕರ್ನಾಟಕವನ್ನು ಕೈವಶ ಮಾಡಿಕೊಳ್ಳಲು ಹಲವು ತಂತ್ರಗಾರಿಕೆ ನಡೆಸುತ್ತಿದೆ. ರಾಜ್ಯದ ಚುನಾವಣಾ ಅಖಾಡದಲ್ಲಿ ಬಿಜೆಪಿ ಗೆಲುವಿಗೆ ಪೂರಕ ಆಗಬಲ್ಲ ಹಲವು ಸಂಗತಿಗಳು, ಬೆಳವಣಿಗೆಗಳು ಕಾಣ ಸಿಗುತ್ತಿವೆ.

ಆಡಳಿತಾರೂಢ ಬಿಜೆಪಿ ಜಾತಿ ಸಮೀಕರಣ ವಿಚಾರದಲ್ಲಿ ವಿರೋಧ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದಿದೆ. ರಾಜ್ಯದ ಬಹುಸಂಖ್ಯಾತ ಲಿಂಗಾಯತ ಮತಗಳನ್ನು ಸೆಳೆಯುವ ಮಹತ್ತರ ಜವಾಬ್ದಾರಿಯನ್ನು ಮಾಜಿ ಸಿಎಂ ಯಡಿಯೂರಪ್ಪ ತೆಗೆದುಕೊಂಡಿದ್ದಾರೆ.

ಬಿಜೆಪಿ ಈ ಬಾರಿ 52 ಹೊಸ ಮುಖಗಳಿಗೆ ಟಿಕೆಟ್ ನೀಡಿದೆ. 21 ಹಾಲಿ ಶಾಸಕರಿಗೇ ಟಿಕೆಟ್ ಕೊಟ್ಟಿಲ್ಲ. ಬಿಜೆಪಿ ಭದ್ರ ನೆಲೆ ಇರುವ ಕ್ಷೇತ್ರಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಹೊಸ ಮುಖಗಳ ಜೊತೆ ಪ್ರಯೋಗ ನಡೆಸಲು ಮುಂದಾಗಿದೆ. ಈ ಹಂತದಲ್ಲಿ ಬಂಡಾಯದ ಬಿಸಿ ತಟ್ಟಿದರೂ ಕೂಡ ಬಿಜೆಪಿ ಹಿಂದೆ ಸರಿದಿಲ್ಲ ಎಂಬುದು ಗಮನಾರ್ಹ ಸಂಗತಿ!

ಪ್ರಧಾನಿ ಮೋದಿ ಅವರ ರೋಡ್ ಶೋ ಹಾಗೂ ಸಮಾವೇಶಗಳಲ್ಲಿ ಸೇರುತ್ತಿರುವ ಜನ ಸಾಗರವನ್ನು ಗಮನಿಸಿದರೆ ಬಿಜೆಪಿ ಮತ್ತೊಂದು ಅವಗೆ ರಾಜ್ಯದಲ್ಲಿ ಅಕಾರ ಹಿಡಿಯಲು ಪ್ರಧಾನಿ ಮೋದಿ ಕಾರಣರಾಗಬಲ್ಲರೇ ಎಂಬ ಕುತೂಹಲ ಮೂಡಿದೆ.

ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗುವ ಕೆಲವೇ ದಿನಗಳ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರಥ್ಯದ ಸಚಿವ ಸಂಪುಟ ಒಂದು ಮಹತ್ವದ ತೀರ್ಮಾನ ಕೈಗೊಳ್ತು. ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಜಾತಿ ಮೀಸಲಾತಿಯನ್ನು ರದ್ದು ಮಾಡಿ ಅದನ್ನು ಒಕ್ಕಲಿಗರು ಹಾಗೂ ಲಿಂಗಾಯತರಿಗೆ ತಲಾ 2% ಹಂಚಿಕೆ ಮಾಡಿತು. ಇದಲ್ಲದೆ ದಲಿತ ಸಮುದಾಯದ ಒಳ ಮೀಸಲಾತಿಯಲ್ಲೂ

ಮಾರ್ಪಾಡು ಮಾಡಿತು. ಹೀಗಾಗಿ ಮೀಸಲಾತಿ ಹೆಚ್ಚಳದ ಲಾಭ ಪಡೆಯುವ ಸಮುದಾಯಗಳು ಬಿಜೆಪಿ ಕೈ ಹಿಡಿಯಬಹುದು ಎಂಬ ನಿರೀಕ್ಷೆ ಇದೆ.

ಇತ್ತ ವಿರೋಧ ಪಕ್ಷಗಳು ತಾವು ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮೀಸಲಾತಿ ವಾಪಸ್ ಕೊಡಿಸುತ್ತೇವೆ ಎನ್ನುತ್ತಿವೆ. ಇನ್ನೊಂದೆಡೆ ಒಳಮೀಸಲಾತಿ ಮಾರ್ಪಾಡಿನಿಂದ ಬಂಜರ ಹಾಗೂ ಭೋವಿ ಸಮುದಾಯಕ್ಕೆ ಅಸಮಾಧಾನವಾಗಿದೆ ಎಂಬ ಚರ್ಚೆಯೂ ಇದೆ. ಹೀಗಾಗಿ, ಮೀಸಲಾತಿ ವಿಚಾರ ಈ ಬಾರಿಯ ಚುನಾವಣಾ ಅಖಾಡದಲ್ಲಿ ಪ್ರಮುಖ ವಿಚಾರ ಆಗಿರುವುದಷ್ಟೇ ಅಲ್ಲ ಬಿಜೆಪಿಗೆ ಸಿಹಿ – ಕಹಿ ಫಲಿತಾಂಶ ಎರಡನ್ನೂ ನೀಡುವಷ್ಟು ಶಕ್ತವಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪಕ್ಕೆ ಹೋಲಿಕೆ ಮಾಡಿದ್ದರು. ನೆಕ್ಕಿದರೂ ಸತ್ತು ಹೋಗುತ್ತಾರೆ ಎಂದು ಲೇವಡಿ ಮಾಡಿದ್ದರು. ಖರ್ಗೆ ಅವರ ಈ ಹೇಳಿಕೆ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಲಾಭ ಆಗಬಹುದೆಂಬ ವಿಶ್ಲೇಷಣೆಗಳು ಇದೀಗ ಕೇಳಿ ಬರುತ್ತಿವೆ.

ಏಕೆಂದರೆ ಕಳೆದ ವರ್ಷ ನಡೆದ ಗುಜರಾತ್ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಪ್ರಧಾನಿ ಮೋದಿ ಅವರನ್ನು ಖರ್ಗೆ ಅವರು 10 ತಲೆ ರಾವಣನಿಗೆ ಹೋಲಿಕೆ ಮಾಡಿದ್ದರು. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿತ್ತು. ಗುಜರಾತ್ ಚುನಾವಣೆ ಮಾತ್ರವಲ್ಲ, ಈ ಹಿಂದಿನ ಹಲವು ಚುನಾವಣೆಗಳಲ್ಲಿ ಪ್ರಧಾನಿ ಮೋದಿ ವಿರುದ್ದ ಕಾಂಗ್ರೆಸ್ ನಾಯಕರು ಅವಹೇಳನಕಾರಿಯಾಗಿ ಹೇಳಿಕೆ ನೀಡಿದಾಗಲೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿದೆ.

ಈ ನಡುವೆ ಸೋನಿಯಾ ಗಾಂಧಿ ಅವರನ್ನು ವಿಷ ಕನ್ಯೆ ಎಂದು ಲೇವಡಿ ಮಾಡಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ. ಇತ್ತ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ಅವರನ್ನು ನಾಲಾಯಕ್ ಎಂದು ಹೇಳಿದ ವಿಚಾರ ಕೂಡ ಚರ್ಚೆಗೆ ಗ್ರಾಸವಾಗಿದೆ.

ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಯಾದರೆ ಬಿಜೆಪಿ ಸರ್ಕಾರ ರೂಪಿಸಿದ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿ ಗೋ ರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ಹಾಗೂ ಮತಾಂತರ ನಿಷೇಧ ವಿಧೇಯಕಕ್ಕೂ ತಿದ್ದುಪಡಿ ತರುವುದಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಿಗೂ ತಿದ್ದಪಡಿ ತರುವುದಾಗಿ ಭರವಸೆ ನೀಡಿದ್ದು, ಮತೀಯವಾಗಿ ಸೂಕ್ಷ್ಮವಾಗಿರುವ ಗೋ ಹತ್ಯೆ ಹಾಗೂ ಮತಾಂತರ ನಿಷೇಧ ವಿದೇಯಕಗಳನ್ನು ವಾಪಸ್ ಪಡೆಯುತ್ತೇವೆ ಎಂಬ ಅವರ ನಿಲುವು ಬಿಜೆಪಿಗೆ ವರವಾಗಬಹುದು ಎಂಬ ಲೆಕ್ಕಾಚಾರಗಳಿವೆ. ಕಾಂಗ್ರೆಸ್ ನಾಯಕರ ಈ ನಿಲುವುಗಳು ಮತೀಯ ಧೃವೀಕರಣಕ್ಕೆ ಕಾರಣ ಆಗಬಹುದೇ ಎಂಬ ವಿಶ್ಲೇಷಣೆಗಳೂ ಇವೆ.

2022 ಸೆಪ್ಟೆಂಬರ್ 22ರಂದು ಕೇಂದ್ರ ಸರ್ಕಾರ ಪಿಎಫ್‍ಐ ಸಂಘಟನೆಗೆ ನಿಷೇಧ ಹೇರಿತ್ತು. ಪಿಎಫ್‍ಐ ಸಂಘಟನೆಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿತು. ಪಿಎಫ್‍ಐ ಸಂಘಟನೆಯ ರಾಜಕೀಯ ಮುಖವಾದ ಎಸ್‍ಡಿಪಿಐ ಇನ್ನೂ ಸಕ್ರಿಯವಾಗಿದೆ. ಆದರೆ ಪಕ್ಷದ ಮೂಲವಾದ ಪಿಎಫ್‍ಐ ವಿರುದ್ಧ ದೇಶಾದ್ಯಂತ ಕಾರ್ಯಾಚರಣೆ ನಡೆಸಲಾಗಿದೆ. ಕೇಂದ್ರದ ತನಿಖಾ ಏಜೆನ್ಸಿ ಎನ್‍ಐಎ ಈಗಾಗಲೇ ಲೆಕ್ಕವಿಲ್ಲದಷ್ಟು ಪಿಎಫ್‍ಐ ಕಾರ್ಯಕರ್ತರನ್ನು ಬಂಧಿಸಿದೆ.

ಕರ್ನಾಟಕ ಚುನಾವಣಾ ಪ್ರಚಾರ ಅಖಾಡದಲ್ಲಿ ಈ ವಿಚಾರ ಕೂಡಾ ಪ್ರಸ್ತಾಪವಾಗಿದೆ. ಬಿಜೆಪಿಗೆ ಮತ ನೀಡಿದರೆ ಈ ರೀತಿಯ ಸಮಾಜಘಾತುಕ ಸಂಘಟನೆಗಳ ಮೇಲೆ ನಿಯಂತ್ರಣ ಹೇರಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಿಜೆಪಿ ನಾಯಕರ ಈ ಮಾತುಗಳು ಕೋಮು ದಳ್ಳುರಿಗೆ ಕಾರಣವಾಗುವ ಸೂಕ್ಷ್ಮ ಪ್ರದೇಶಗಳಲ್ಲಿ ಬಿಜೆಪಿ ಪರ ಮತಗಳ ಧೃವೀಕರಣಕ್ಕೆ ಕಾರಣವಾಗಬಲ್ಲದು. ಕಮಲದ ಗೆಲುವಿಗೆ ಪೂರಕವಾಗಬಲ್ಲದು ಎಂದು ಸಮೀಕ್ಷೆ ಅಂದಾಜಿಸಿದೆ.
ಕರ್ನಾಟಕದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಾಗಿ ಹೇಳಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರಿಗೆ ಬೇರೆ ಬೇರೆ ಆಗಿರುವ ಕಾನೂನುಗಳನ್ನು ರದ್ದು ಮಾಡಿ ಎಲ್ಲರಿಗೂ ಏಕರೂಪದ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿತ್ತು.

ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ರೂಪಿಸಿರುವ ಪ್ರಣಾಳಿಕೆಯಲ್ಲೂ ಏಕರೂಪ ನಾಗರಿಕ ಸಂಹಿತೆ ವಿಚಾರ ಪ್ರಸ್ತಾಪವಾಗಿದೆ. ಈ ಮೂಲಕ ಬಿಜೆಪಿ ಚುನಾವಣೆ ಹೊತ್ತಲ್ಲಿ ತನ್ನ ಬತ್ತಳಿಕೆಯಲ್ಲಿ ಇದ್ದ ಪ್ರಬಲ ಅಸ್ತ್ರವನ್ನೇ ಪ್ರಯೋಗಿಸಿದೆ. ಜೊತೆಯಲ್ಲೇ ಎನ್‍ಆರ್‍ಸಿ ಜಾರಿ ವಿಚಾರವನ್ನೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದೆ.

ಬಿಜೆಪಿ ಮಿಷನ್ 150 ಗುರಿಯೊಂದಿಗೆ ಮುನ್ನುಗ್ಗು ತ್ತಿದೆ. ಆದರೆ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲ. ಮಿಷನ್ 150 ಗುರಿಯನ್ನು ಮುಟ್ಟಬೇಕೆಂದರೆ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ಕನಿಷ್ಟ 30 ಸ್ಥಾನಗಳನ್ನಾದರೂ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಈ ಹಂತದಲ್ಲಿ ಹಳೇ ಮೈಸೂರು ಭಾಗದ ಪ್ರಮುಖ ಅಭಿವೃದ್ದಿ ಯೋಜನೆಯಾದ ಬೆಂಗಳೂರು ಮೈಸೂರು ಎಕ್ಸ್‍ಪ್ರೆಸ್ ವೇ ಯೋಜನೆಯು ಬಿಜೆಪಿಗೆ ಬಲ ತುಂಬಬಹುದೇ ಎಂಬ ನಿರೀಕ್ಷೆ ಇದೆ.

ಈ ಮೂಲಕ ಆಡಳಿತ ವಿರೋ ಅಲೆಯನ್ನು ಹತ್ತಿಕ್ಕಲು ಕಮಲ ಪಾಳಯ ಇನ್ನಿಲ್ಲದ ಕಸರತ್ತು ನಡೆಸಿದೆ. ಹಾಗೆ ನೋಡಿದ್ರೆ ಗುಜರಾತ್‍ನಲ್ಲೂ ಬಿಜೆಪಿ ಇದೆ ತಂತ್ರಗಾರಿಕೆ ನಡೆಸಿತ್ತು. ಹಿಮಾಚಲ ಪ್ರದೇಶದಲ್ಲೂ ಇದೇ ರಣತಂತ್ರ ಜಾರಿ ಮಾಡಿತ್ತಾದರೂ ಗುಜರಾತ್ ರೀತಿ ಫಲಪ್ರದ ಆಗಲಿಲ್ಲ. ಆದರೆ, ರಾಜ್ಯದಲ್ಲಿ ಆಡಳಿತ ವಿರೋ ಅಲೆ ಹತ್ತಿಕ್ಕಲು ಹಾಗೂ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರವಾಗಿ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಿದೆ.

ಅದರಲ್ಲೂ ಕಾಂಗ್ರೆಸ್ ಪಕ್ಷವು ರಾಜ್ಯ ಬಿಜೆಪಿ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಆರೋಪಿಸುತ್ತಿದೆ. ಜೊತೆಯಲ್ಲೇ ಸಿಎಂ ಬೊಮ್ಮಾಯಿ ವಿರುದ್ದ ಪೇಸಿಎಂ ಅಭಿಯಾನವನ್ನೂ ಕಾಂಗ್ರೆಸ್ ನಡೆಸಿತ್ತು. ಆದರೆ ಚುನಾವಣಾ ಪ್ರಚಾರ ಅಖಾಡದಲ್ಲಿ ಮಾತ್ರ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನೇ ಬಿಜೆಪಿ ಪ್ರಮುಖವಾಗಿ ಬಿಂಬಿಸುತ್ತಿದೆ.

[t4b-ticker]

You May Also Like

More From Author

+ There are no comments

Add yours