ನಾವು ಘೋಷಿಸಿದ ಐದು ಗ್ಯಾರೆಂಟಿ ಜಾರಿಗೆ ತರುತ್ತೇವೆ:ಮಾಜಿ ಸಿಎಂ ಸಿದ್ದರಾಮಯ್ಯ

 

ಬೆಂಗಳೂರು: ರಾಜ್ಯದ ಜನರು ಬದಲಾವಣೆಯನ್ನು ಬಯಸಿ, ಬಿಜೆಪಿ ದುರಾಡಳಿತಕ್ಕೆ ಬೇಸತ್ತು ನಮಗೆ ಸ್ಪಷ್ಟ ಬಹುಮತವನ್ನು ನೀಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಕೆಲಸ ಮಾಡುತ್ತೇವೆ. ಜನರ ನಂಬಿಕೆ ಹುಸಿ ಮಾಡುವುದಿಲ್ಲ. ನಾನು ಘೋಷಿಸಿದಂತ ಐದು ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಅನುಮೋದಿಸಿ, ಆದೇಶ ಹೊರಡಿಸಲಾಗುತ್ತದೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಘೋಷಿಸಿದರು.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇದು 7 ಕೋಟಿ ಕನ್ನಡಿಗರ ಗೆಲುವು. ಬರೀ ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ಗೆಲುವಷ್ಟೇ ಅಲ್ಲ, 7 ಕೋಟಿ ಕನ್ನಡಿಗರ ಗೆಲುವು. ಬಿಜೆಪಿ ಯಾವತ್ತೂ ಜನರ ಆಶೀರ್ವಾದ ಪಡೆದು ಅಧಿಕಾರ ನಡೆಸಲಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು. ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಆಗಿದೆಯೋ ಆ ಎಲ್ಲಾ ಸಂದರ್ಭಗಳಲ್ಲಿ ಕೂಡ, ಸುಭದ್ರ ಸರ್ಕಾರ ಕೊಡಲಿಕ್ಕೆ ಸಾಧ್ಯವಾಗಿಲ್ಲ ಎಂದರು.

ಜನರಿಗೆ ನಮ್ಮ ಆಡಳಿತದ ಬಗ್ಗೆ ಒಂದು ರೀತಿ ಗೌರವ ಬಂದಿತ್ತು. ಅದೇ ನೀವೆ ನೋಡಿ ಬಿಜೆಪಿ, ಕುಮಾರಸ್ವಾಮಿ ಯಾವಾಗ ಯಾವ ಇತ್ತು ಅವಾಗ ಸುಭದ್ರ ಸರ್ಕಾರವಿರಲಿಲ್ಲ. ಅದಕ್ಕಾಗಿ ಈ ರಾಜ್ಯದ ಜನರು ಒಂದು ಪಕ್ಷಕ್ಕೆ ಬಹುಮತ ಕೊಡುವುದಾಗಿದೆ. ಅದಕ್ಕೋಸ್ಕರ ಬದಲಾವಣೆಯನ್ನು ಬಯಸಿ ಇನ್ನೊಂದು ಅವಕಾಶವನ್ನು ಕಾಂಗ್ರೆಸ್ ಗೆ ಕೊಡೋಣ ಅಂತ ಹೇಳಿ ನಮಗೆ ಕೊಟ್ಟಿದ್ದಾರೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತೇವೆ. ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಸುತ್ತೇವೆ. ಕೊಟ್ಟ ಮಾತುಗಳನ್ನು ಈಡೇರಿಸುವಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿಯವರು ಕರ್ನಾಟಕ ರಾಜಕೀಯಕ್ಕೆ ಒಂದು ರೀತಿಯ ಕಳಂಕ ತಂದರು. ಅವರ ಭ್ರಷ್ಟಾಚಾರ, ದುರಾಡಳಿತ, ಏನೂ ಕೆಲಸ ಮಾಡದೆ ಇರುವುದು ಸೇರಿದಂತೆ ವಿವಿಧ ವಿಚಾರಗಳಿಗೆ ಜನರು ರೋಸಿ ಹೋಗಿದ್ದರು. ಎಲ್ಲ ರೀತಿಯ ಜನರು ಬದಲಾವಣೆ ಬಯಸಿ, ಕಾಂಗ್ರೆಸ್ ಪರವಾದ ಗಾಳಿ ಬೀಸಿ ನಾವು ಇವತ್ತು 136 ಸ್ಥಾನವನ್ನು ಗೆಲುವುದಕ್ಕೆ ಸಾಧ್ಯವಾಗಿದೆ ಎಂದರು.

ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಜಾತಿ, ಧರ್ಮದವರ ಮತಗಳು ಬಂದಿದ್ದಾವೆ. ಕಾಂಗ್ರೆಸ್ ಪಕ್ಷ ಒಂದು ಜಾತ್ಯಾತೀತ ಪಕ್ಷ ಎಂಬುದು ಸಾಭೀತಾಗಿದೆ. ಎಲ್ಲಾ ವರ್ಗದವರು ಮತ ಹಾಕಿದ್ದಾರೆ. ಅದರಿಂದ ನಮಗೆ ಏನೂ ಐದು ವರ್ಷಕೊಟ್ಟಿದ್ದಾರಲ್ಲ. ಆ ಅವಕಾಶವನ್ನು ಪ್ರಮುಖವಾಗಿ ಬಳಸಿಕೊಂಡು ಜನತೆಯ ಸೇವೆಯನ್ನು ಮಾಡುವ ಕೆಲಸ ಮಾಡುತ್ತೇವೆ. ಜನಪರವಾದಂತ ಆಡಳಿತವನ್ನು ನೀಡುತ್ತೇವೆ ಎಂದರು.

ನಾವು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವಲ್ಲ, ಆ ಗ್ಯಾರಂಟಿಗಳನ್ನು ಮೊದಲನೇ ಕ್ಯಾಬಿನೆಟ್ ನಲ್ಲಿಯೇ ಅವುಗಳಿಗೆ ಒಪ್ಪಿಗೆ ಕೊಟ್ಟು, ಆದೇಶ ಹೊರಡಿಸುತ್ತೇವೆ. ದೇಶವನ್ನು ಸಾಲಗಾರರನ್ನಾಗಿ ಮಾಡಿರುವುದೇ ನರೇಂದ್ರ ಮೋದಿಯವರು. ಹೀಗಿರುವಾಗ ನಾವು ನೀಡಿದಂತ ಗ್ಯಾರಂಟಿಗಳನ್ನು ಈಡೇರಿಸಲ್ಲ ಎಂದು ಹೇಳುತ್ತಿದ್ದಾರೆ. ನೀಡಿರುವಂತ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಹೇಳಿದರು.

ರಾಜ್ಯವನ್ನು, ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದವರು ಯಾರು.? ಯಾವುದೇ ಸಮಸ್ಯೆಗಳ ಬಗ್ಗೆ ಮೋದಿ ಮಾತನಾಡಿಲ್ಲ. ಅದಕ್ಕೆ ಅವರು ಎಷ್ಟು ಬಾರಿ ಬಂದರೂ ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ನಡೆಯುವುದಿಲ್ಲ ಎಂದಿದ್ದೆ. ಹಾಗೆ ಆಗಿದೆ. ಜನರು ನಮ್ಮ ಮೇಲೆ ನಂಬಿಕೆ ಇಟ್ಟು ನಮಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುವಂತೆ ಕೆಲಸ ಮಾಡುತ್ತೇವೆ ಎಂದರು.

[t4b-ticker]

You May Also Like

More From Author

+ There are no comments

Add yours