ಕನ್ನಡಿಗರ ಮನಸ್ಸು ಗೆದ್ದ ವಿರಾಟ್ ಪತ್ನಿ ಅನುಷ್ಕಾ ಶರ್ಮ

 

ಬಾಲಿವುಡ್ ಖ್ಯಾತ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯ. ತಮ್ಮ ಹಾಗೂ ಪತಿ ವಿರಾಟ್ ಕೊಹ್ಲಿಯ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ ಅವರು. ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ತಮ್ಮ ಅಭಿಮಾನಿಗಳೋಂದಿಗೆ ಸಂವಾದ ನಡೆಸುತ್ತಿರುತ್ತಾರೆ ಅನುಷ್ಕಾ ಶರ್ಮಾ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ಸಹ ನೀಡುತ್ತಿರುತ್ತಾರೆ.

ಇಂದು ಅನುಷ್ಕಾ ಶರ್ಮಾ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದು, ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ಸಂವಾದದಲ್ಲಿ ಅನುಷ್ಕಾ ಶರ್ಮಾ ನೀಡಿದ ಉತ್ತರ ಕನ್ನಡಿಗರ ಮನಸ್ಸು ಗೆದ್ದಿದೆ.

ಕನ್ನಡ ಮಾತನಾಡುತ್ತಾರಂತೆ ಅನುಷ್ಕಾ ಶರ್ಮಾ ಬೆಂಗಳೂರಿನ, ಕನ್ನಡಿಗ ಹುಡುಗಿಯರೇ ಕನ್ನಡ ಮಾತನಾಡಲು ಹಿಂದು-ಮುಂದು ನೋಡುತ್ತಿರುವ ಸಮಯದಲ್ಲಿ ಅನುಷ್ಕಾ ಶರ್ಮಾ ಗೆ ಕನ್ನಡ ಬರುತ್ತದೆ ಎಂದರೆ ಆಶ್ಚರ್ಯ ಪಡಲೇಬೇಕಲ್ಲವೆ. ಹೌದು, ಅನುಷ್ಕಾ ಶರ್ಮಾ ಗೆ ಕನ್ನಡ ಮಾತನಾಡಲು ಬರುತ್ತದೆಯಂತೆ.

ಸಸ್ಯಾಹಾರಿ ಆದ ಅನುಷ್ಕಾ ಶರ್ಮಾ

ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವ ಅನುಷ್ಕಾ ಶರ್ಮಾ, ತಾವು ಕಳೆದ ಐದು ವರ್ಷದಿಂದ ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಿ ಆಗಿರುವುದಾಗಿ ಹೇಳಿದ್ದಾರೆ. ಇದು ತಮ್ಮ ಜೀವನದ ಉತ್ತಮ ನಿರ್ಣಯಗಳಲ್ಲಿ ಒಂದು ಎಂದು ಸಹ ಹೇಳಿದ್ದಾರೆ.

[t4b-ticker]

You May Also Like

More From Author

+ There are no comments

Add yours