ದೇಶದ ಜನರ ಕನಸು ಇಂದು ನನಸಾಗಿದೆ.

 

ಅಯೋಧ್ಯೆ: ಇಡೀ ದೇಶಕ್ಕೆ ದೇಶವೇ ಬಹುನಿರೀಕ್ಷೆಯಿಂದ ಎದುರು ನೋಡುತ್ತಿದ್ದ ಅಪರೂಪದ ಕನಸು ಇಂದು ಸಾಕಾರಗೊಂಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ಕಾರ್ಯಕ್ರಮ ಬುಧವಾರ ನಡೆಯಿತು.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೇದ ಮಂತ್ರ ಘೋಷಗಳ ನಡುವೆ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಮಾಡಿದರು. ಗರ್ಭಗುಡಿಯನ್ನು ಬೆಳ್ಳಿ ಇಟ್ಟಿಗೆಯಿಂದ ಪ್ರತಿಷ್ಟಾಪಿಸಲಾಯಿತು. ಐದು ನಕ್ಷತ್ರಾಕಾರದ ಬೆಳ್ಳಿ ಇಟ್ಟಿಗೆಗಳನ್ನು ಭೂಮಿ ಪೂಜೆಗೆ ಬಳಸಲಾಯಿತು. ಪವಿತ್ರ ನದಿಯ ನೀರಿನಿಂದ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು.ಒಂದೆಡೆ ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯುತ್ತಿದ್ದರೆ, ಮತ್ತೊಂದೆಡೆ ದೇಶಾದ್ಯಂತ ರಾಮಲಯದಲ್ಲಿ ಪ್ರಾರ್ಥನೆ ಮತ್ತು ಪೂಜೆಗಳು ಭಕ್ತಿಯಿಂದ ನಡೆದವು.ಈ ಸಮಾರಂಭದಲ್ಲಿ ರಾಜ್ಯಪಾಲ ಆನಂದಿಬೆನ್, ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ನಿತ್ಯ ಗೋಪಾಲ್ ದಾಸ್ ಮತ್ತು ಇತರರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ , “ಐದು ಶತಮಾನಗಳ ಕನಸು ಇಂದು ನನಸಾಗಿದೆ. ರಾಮ ಮಂದಿರದ ಭೂಮಿ ಪೂಜೆಯಲ್ಲಿ ಭಾಗವಹಿಸುವುದು ನಮ್ಮ ಅದೃಷ್ಟ. ನಾವು ದೇವಾಲಯಕ್ಕಾಗಿ ಹಲವಾರು ವರ್ಷಗಳಿಂದ ಎದುರು ನೋಡುತ್ತಿದ್ದೆವು. ಯಾವುದೇ ಅಹಿತಕರ ಘಟನೆ ನಡೆಯದೆ ಪ್ರಜಾಪ್ರಭುತ್ವ ಪ್ರಕಾರವೇ ಮತ್ತು ಶಾಂತಿಯುತವಾಗಿ ಎಷ್ಟೋ ಜನರ ತ್ಯಾಗದ ಫಲವಾಗಿ ಕನಸು ಸಾಕಾರಗೊಂಡಿದೆ. ಅಯೋಧ್ಯೆ ವಿಶ್ವದ ವಿಶಿಷ್ಟ ನಗರವಾಗಿ ರೂಪುಗೊಳ್ಳಲಿದೆ.ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿ, “ದೇಶದಾದ್ಯಂತ ದಶಕಗಳ ಕನಸು ನನಸಾದ ಸಂತೋಷ ಕಾಣುತ್ತಿದೆ. ಎಷ್ಟೋ ಜನರು ಎಷ್ಟೋ ತ್ಯಾಗಗಳನ್ನು ಮಾಡಿದ್ದಾರೆ. ಪ್ರಸ್ತುತ ಅವರೆಲ್ಲರೂ ಈ ವೇದಿಕೆಯಲ್ಲಿಲ್ಲದಿರಬಹುದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಬಹುದು. ರಾಮ ಜನ್ಮಭೂಮಿ ಹೋರಾಟದಲ್ಲಿ ಅಡ್ವಾಣಿಯ ಪಾತ್ರ ಅಮೂಲ್ಯ ಮತ್ತು ಅವರ್ಣನೀಯ.ರಾಮ ಮಂದಿರದ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿವೆ. ಇದಕ್ಕಾಗಿ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿವೆ. ಎಲ್ಲಾ ದ್ವೇಷ ಮತ್ತು ಪಾಪಗಳಿಂದ ದೂರವಾಗಿ, ನಾವೆಲ್ಲರೂ ಮಾನವ ಸಮಾಜಕ್ಕೂ ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ವಿಶ್ವಕ್ಕೆ ಮಾರ್ಗದರ್ಶನ ನೀಡಲು ಭವ್ಯವಾದ ರಾಮ ಮಂದಿರವನ್ನು ನಿರ್ಮಿಸಲಾಗುವುದು ‘ಎಂದು ಮೋಹನ್ ಭಾಗವತ್ ಹೇಳಿದರು.

[t4b-ticker]

You May Also Like

More From Author

+ There are no comments

Add yours