ವಾಲ್ಮೀಕಿಯವರ ಆದರ್ಶಗಳು ನಾಯಕ ಸಮಾಜಕ್ಕೆ ದೊಡ್ಡ ಶಕ್ತಿ:ಟಿ.ರಘುಮೂರ್ತಿ

 

challakere:  ಮಹರ್ಷಿ ಶ್ರೀವಾಲ್ಮೀಕಿಯವರ (Valmiki)  ಆದರ್ಶಗಳು ನಾಯಕ ಸಮಾಜಕ್ಕೆ ಸದಾ ಪ್ರೇರಕ ಶಕ್ತಿಯಾಗಿವೆ. ಐದು ಸಾವಿರ ವರ್ಷಗಳ ಹಿಂದೆಯೇ ಸೌಹಾರ್ಧಿತ, ಸಮಾನತೆಯ ಬದುಕನ್ನು ಪ್ರತಿಪಾದಿಸಿದ ವಾಲ್ಮೀಕಿಯವರ ಚಿಂತನೆಗಳು ನಮಗೆ ಶಕ್ತಿ ನೀಡಿವೆ. ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ನಾಯಕ ಸಮುದಾಯ ಉತ್ತಮ ಸ್ಥಾನ ಪಡೆಯಬೇಕೆಂಬ ಸಂಕಲ್ಪ ಮಾಡೋಣವೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು, ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ, ತಾಲ್ಲೂಕು ಪಂಚಾಯಿತಿ ಹಾಗೂ ನಾಯಕ ಸಮುದಾಯದ ವಿವಿಧ ಸಂಘಟನೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಶ್ರೀವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಾರ್ಯಕ್ರಮಕ್ಕೂ ಮುನ್ನ ನಗರದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆಗೆ ಮಾರ್ಲಾಪಣೆ ಮಾಡುವ ಮೂಲಕ ಬೃಹತ್ ಮೆರವಣಿಗೆಗೆ ಅವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಬ್ಯಾಸಬೇಡರ ಪಡೆ, ಜಾನಪದ ಕಲಾತಂಡ, ಡೊಳ್ಳು ಕುಣಿತ, ಹಾಗೂ ಡಿಜೆ ಸೌಂಡ್‌ಗೆ ಯುವಕ, ಯುವತಿಯರು ಕುಣಿದರು. ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ರಾಜ್ಯದಲ್ಲಿ ಹೊಸ ಸರ್ಕಾರದ ಆಡಳಿತ ಪ್ರಾರಂಭವಾಗಿ ಐದು ತಿಂಗಳು ಕಳೆದಿದ್ದು, ಎಲ್ಲಾ ವರ್ಗಗಳಲ್ಲೂ ಸಮಾನತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ವಾಲ್ಮೀಕಿ ಗುರುಪೀಠ ಸ್ಥಾಪನೆಗೆ ಕಾರಣಕರ್ತರಾದ ದಿವಂಗತ ಮಾಜಿ ಸಚಿವ ತಿಪ್ಪೇಸ್ವಾಮಿಯರನ್ನು ನಾವು ಸದಾ ಸ್ಮರಿಸಬೇಕು. ಚಿತ್ರದುರ್ಗದ ಬೋರಪ್ಪನಾಯಕ ವಾಲ್ಮೀಕಿ ಪ್ರಶಸ್ತಿ ಪಡೆದ ಜಿಲ್ಲೆಯ ಮೊದಲ ವ್ಯಕ್ತಿಯಾಗಿದ್ದು, ಅಂತಹ ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ನಮ್ಮ ಜಿಲ್ಲೆಯ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ, ಮಾಜಿ ಸಂಸದ ಎನ್.ವೈ.ಹನುಮಂತಪ್ಪ ಸಹ ಈ ಬಾರಿಯ ವಾಲ್ಮೀಕಿ ಪ್ರಶಸ್ತಿ ಪಡೆಯುವ ಮೂಲಕ ಜನಾಂಗದ ಗೌರವವನ್ನು ಹೆಚ್ಚಿಸಿದ್ದಾರೆಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ರೇಹಾನ್ ಪಾಷ, ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಮಹಾನ್ ತಪಸ್ವಿ ಮಹರ್ಷಿ ವಾಲ್ಮೀಕಿಯವರ ಆದರ್ಶಗಳು ಎಲ್ಲಾ ವರ್ಗದ ಜನರಿಗೆ ಪ್ರೇರಕ ಶಕ್ತಿಯಾಗಬೇಕೆಂಬ ದೃಷ್ಠಿಯಿಂದ ಈ ಕಾರ್ಯವನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಬಾಗಲಕೋಟೆಯ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಟಿ.ವಿರೂಪಾಕ್ಷಿ, ಮರ, ಮರವೆಂದು ರಾಮನನ್ನೇ ಸಾಕ್ಷಾತ್ಕರಿಸಿಕೊಂಡ ಮಹರ್ಷಿ ವಾಲ್ಮೀಕಿಯವರು ಸಂಸ್ಕೃತದಲ್ಲೇ ರಾಮಾಯಣ ರಚಿಸಿದ ಶ್ರೇಷ್ಠರು. ಇಂತಹ ಮಹಾನೀಯರು ಸದಾ ಆದರ್ಶನೀಯರು ಎಂದರು. ಕಾರ್ಯಕ್ರಮ ಉದ್ದೇಶಿಸಿ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ, ಜಂಟಿ ಕೃಷಿ ನಿರ್ದೇಶಕ ಡಿ.ಮಂಜುನಾಥ, ನಗರಸಭಾ ಸದಸ್ಯೆ ಕವಿತಾಬೋರಯ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮುದಾಯದ ಮುಖಂಡರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಕ್ಕಳ ತಜ್ಞ ಡಾ.ತಿಪ್ಪೇಸ್ವಾಮಿ, ಶಿಕ್ಷಣ ಕ್ಷೇತ್ರದ ತಿಪ್ಪೇಸ್ವಾಮಿ, ಡಾ.ಪಾಪಣ್ಣ, ಓಬಾನಾಯಕ, ಪಿ.ಬೋರಯ್ಯ, ಎಚ್.ಗುರುಮೂರ್ತಿ, ರಂಗಪ್ಪ, ಗುಂಡಮ್ಮನವರನ್ನು ಸನ್ಮಾನಿಲಾಯಿತು.


ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ)ನಾಯಕ ಹಾಸ್ಟೆಲ್ ಕಮಿಟಿ ಅಧ್ಯಕ್ಷ ಎಚ್.ಎಂ.ಮಲ್ಲಪ್ಪನಾಯಕ, ಕಾರ್ಯದರ್ಶಿ ದುಗ್ಗಾವರ ತಿಪ್ಪೇಸ್ವಾಮಿ, ಚನ್ನಂಗಿರಂಗಸ್ವಾಮಿ, ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಬಿಜೆಪಿ ಮುಖಂಡರಾದ ಬಾಳೆಮಂಡಿರಾಮದಾಸ್, ಜಯಪಾಲಯ್ಯ, ಡಾ.ನಾಗೇಂದ್ರನಾಯಕ, ನಗರಸಭಾ ಸದಸ್ಯ ಎಸ್.ಜಯಣ್ಣ, ವೆಂಕಟೇಶ್, ರಮೇಶ್‌ಗೌಡ, ಕೆ.ವೀರಭದ್ರಪ್ಪ, ಚಳ್ಳಕೆರೆಯಪ್ಪ, ವಿರೂಪಾಕ್ಷಿ, ಸುಮಭರಮಣ್ಣ, ಸಿ.ಶ್ರೀನಿವಾಸ್, ಸುಜಾತಪ್ರಹ್ಲಾದ್, ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಟಿ.ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಸಿ.ನಾಗರಾಜು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಂ.ಟಿ.ಶಿವರಾಜು, ಪೌರಾಯುಕ್ತ ಸಿ.ಚಂದ್ರಪ್ಪ, ಡಿವೈಎಸ್ಪಿ ರಾಜಣ್ಣ, ವೃತ್ತ ನಿರೀಕ್ಷರಾದ ಕೆ.ಸಮೀವುಲ್ಲಾ, ಆರ್.ಎಫ್.ದೇಸಾಯಿ, ಇಒ ಶಶಿಧರ, ಮಹಿಳಾ ಸಂಘದ ಅಧ್ಯಕ್ಷೆ ಯಶೋಧಮ್ಮ, ಎಲ್‌ಐಸಿ ತಿಪ್ಪೇಸ್ವಾಮಿ, ಸೌಭಾಗ್ಯಮ್ಮ, ಬಿಸಿಎಂ ಅಧಿಕಾರಿ ದಿವಾಕರ, ಎಇಇ ಕಾವ್ಯ, ಪಶುವೈದ್ಯಾಧಿಕಾರಿ ರೇವಣ್ಣ, ಕೆ.ಸೂರನಾಯಕ, ಸುರೇಶ್, ಡಾ.ಡಿ.ಎನ್.ರಘುನಾಥ, ಜೆ.ರಘುವೀರನಾಯಕ, ಸಿ.ಟಿ.ಶ್ರೀನಿವಾಸ್, ಡಾ.ಲೋಕೇಶ್, ಸಿ.ಗುರುಸ್ವಾಮಿ, ಸಂದೀಪನಾಯಕ, ಪಿ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours