ಸವಾಲನ್ನು ಗೆದ್ದು ಯುವ ಉದ್ಯಮಿಯಾದ ವಾಲ್ಮೀಕಿ ಪುರಸ್ಕೃತ ಅರುಣ್

 

ಚಿತ್ರದುರ್ಗ :ಶ್ರೀ ಅಹೋಬಲ ಸ್ಟೀಲ್ಸ್ ಅಂಡ್ ಸಿಮೆಂಟ್ಸ್ ಮತ್ತು ಅಹೋಬಲ ಟಿವಿಎಸ್ ಮೂಲಕ ಇಂದು ಚಿತ್ರದುರ್ಗ (chitradurga ) ನಗರದ ಮನೆ ಮಾತಾಗಿರುವ ಮಾಲೀಕ ಅರುಣ್ ಕುಮಾರ್ ನಗರದಲ್ಲಿ ಬೆಳೆಯುತ್ತಿರುವ ಯುವ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ನೌಕರಿಯ ಬೆನ್ನು ಹತ್ತಿ ಹೋಗುವವರ ನಡುವೆ ಚಿಕ್ಕ ವಯಸ್ಸಿನಲ್ಲೇ ವ್ಯಾಪಾರ, ವಹಿವಾಟು ಎಂದು ಯೋಚಿಸಿ  ತೊಡಗಿಸಿಕೊಂಡು ಸಮಾಜದ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳಿಗೆ ಕೈ ಜೋಡಿಸಿಕೊಂಡು ಬಂದಿರುವ ಅರುಣ್ ಅವರಿಗೆ ಜಿಲ್ಲಾ ವಾಲ್ಮೀಕಿ ಪ್ರಶಸ್ತಿ ಲಭಿಸಿದೆ ಎಂದರೆ ತಪ್ಪಗಲಾರದು.  

ಇವರು ಮೂಲ ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ವ್ಯವಸಾಯದ ಕುಟುಂಬದ ಹಿನ್ನೆಲೆಯಿದ್ದರೂ. ಎಸ್ ಜೆಎಂ ಕಾಲೇಜಿನಲ್ಲಿ ಬಿಎ ಪದವಿ ಮುಗಿದ ನಂತರ ಪೂರ್ಣ ಪ್ರಮಾಣದಲ್ಲಿ ಬ್ಯುಸಿನೆಸ್ನಲ್ಲಿ ತೊಡಗಿಸಿಕೊಂಡರು.

ಚಿಕ್ಕಜಾಜೂರಿನಲ್ಲಿ ನಮ್ಮ ಮಾವನವರಾದ ಲಕ್ಷ್ಮಿಕಾಂತ್ ಭರವಸೆ ಪ್ರೋತ್ಸಾಹ ಇವರನ್ನು ಉದ್ಯಮಿಯಾಗಿ ಮಾಡಿತು. ವ್ಯಾಪಾರ, ವಹಿವಾಟಿನಲ್ಲಿ ತೊಡಗಿಸಿಕೊಂಡು ಹಂತ ಹಂತವಾಗಿ ಬೆಳೆಯುತ್ತ ಬಂದರು. ಸುಮಾರು 10 ವರ್ಷಗಳ ವರ್ಷದಿಂದ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ . ಎಂಟು ವರ್ಷಗಳ ಸ್ಟೀಲ್ ಅಂಡ್ ಸಿಮೆಂಟ್, ಈಗ ಒಂದುವರೆ ವರ್ಷದಿಂದ ಟಿವಿಎಸ್ ಶೋ ರೂಂ ಆರಂಭಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಪಡೆದರು.

ಕಳೆದ ತಿಂಗಳು ಹಿರಿಯೂರು ನಗರದಲ್ಲಿ ಮತ್ತೊಂದು ಟಿವಿಎಸ್ ಶೋ ರೂಂ ಬ್ರಾಂಚ್ ಆರಂಭಿಸಿದ ಅರುಣ್ ಕಷ್ಟಗಳ ಮೆಟ್ಟಿನಿಂತು ಯಶಸ್ಸು ಸಾಧಿಸಿಕೊಂಡು ಬಂದಲು ಜೆಪಿ ಸಿಮೆಂಟ್ಸ್ನಿಂದ 2016 ರಲ್ಲಿ ಚಿತ್ರದುರ್ಗದಲ್ಲಿ ಅತಿ ಹೆಚ್ಚು ಸೇಲ್ಸ್ನಲ್ಲಿ ಎರಡನೇ ಸ್ಥಾನ ಸಾಧಿಸಿದ್ದಕ್ಕೆ ಪುರಸ್ಕಾರ ನೀಡಿದ್ದರು.

2017 ರಿಂದ 2022 ರ ತನಕ ಅಲ್ಟ್ರಾಟೆಕ್ ಸೀಮೆಂಟ್ನಲ್ಲಿ ಜೋನಲ್ ಸೇಲ್ಸ್ನಲ್ಲಿ ನಂಬರ್ ಒನ್(ಟಾಪರ್) ಪುರಸ್ಕಾರ ಸಿಕ್ಕಿದೆ. ಎರಡು ಬಾರಿ ಟಿವಿಎಸ್ ಕಂಪನಿಯಲ್ಲಿ ಕರ್ನಾಟಕ 2 ರಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ವಾಲ್ಮೀಕಿ ಪುರಸ್ಕೃತ ಅರುಣ್ ಮಾತು

ನನಗೆ ಜಿಲ್ಲಾ ವಾಲ್ಮೀಕಿ ಪ್ರಶಸ್ತಿ ದೊರಕಿರುವುದು ಅತಿ ಚಿಕ್ಕ ವಯಸ್ಸಿನಲ್ಲಿ ನನಗೆ ದೊರೆತಿರುವ ದೊಡ್ಡ ಗೌರವವಾಗಿದ್ದು ಅತ್ಯಂತ ಸಂತೋಷ ತಂದಿದೆ. ಉದ್ಯಮದಲ್ಲಿ ಅನೇಕ ಬಾರಿ ನಂಬರ್ ಪ್ರಶಸ್ತಿಗಳು ಲಭಿಸಿದೆ. ಆದರೆ ಸಮಾಜದಿಂದ ಗೌರವಿಸುವ ಈ ಪ್ರಶಸ್ತಿ ನನಗೆ ಜೀವಮಾನದ ಒಂದು ಅಮೋಘ ಸಮಯವಾಗಿದೆ. ಮುಂದಿನ ದಿನದಲ್ಲಿ ಹೀಗೆ ನನ್ನ ಕರ‍್ಯ ನಡೆಯತ್ತಿದೆ. ಇದೇ ಸಂದರ್ಭದಲ್ಲಿ ಎಲ್ಲಾ ಸಮಾಜದವರು ನನ್ನ ಉದ್ಯಮಕ್ಕೆ ಬೆಂಬಲವಾಗಿ ನಿಂತಿದ್ದು ಅವರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಋಣಿಯಾಗಿರುತ್ತೇನೆ.

ಪಿ.ವಿ.ಅರುಣ್ ಕುಮಾರ್
ಮಾಲೀಕರು ಶ್ರೀ ಅಹೋಬಲ ಟಿವಿಎಸ್ ಮತ್ತು ಶ್ರೀ ಅಹೋಬಲ ಸ್ಟೀಲ್ ಅಂಡ್ ಸಿಮೆಂಟ್ ಚಿತ್ರದುರ್ಗ

[t4b-ticker]

You May Also Like

More From Author

+ There are no comments

Add yours