ವಾಲ್ಮೀಕಿ ಪುರಸ್ಕೃತ ಎಂ.ಎನ್.ಅಹೋಬಲಪತಿ ನಡೆದು ಬಂದಿದ್ದೆ ಹೋರಟಗಾರ ಹಾದಿಯಲ್ಲಿ 

 

ಜಿಲ್ಲಾ  ವಾಲ್ಮೀಕಿ ಪುರಸ್ಕೃತರಾದ ಎಂ.ಎನ್.ಅಹೋಬಲಪತಿ ನಡೆದು ಬಂದಿದ್ದೆ ಹೋರಟಗಾರ ಹಾದಿಯಲ್ಲಿ

ಪರಿಚಯ

ಎಂ.ಎನ್.ಅಹೋಬಲಪತಿ ಅವರು ಮೂಲತ: ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರಂಗಸಮುದ್ರ ಗ್ರಾಮದವರು. ಇವರು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರು ರಂಗಸಮುದ್ರದಲ್ಲಿ ಮುಗಿಸಿದರು. ನಂತರ ಪ್ರೌಡ ಶಾಲಾ ಶಿಕ್ಷಣವನ್ನು ತುಮಕೂರಿನ ನಗರದ ವಾಲ್ಮೀಕಿ (Valmiki) ರೆಸಿಡೆನ್ಸಿಯಲ್ ಶಾಲೆ ನಂತರ ಪಿ.ಯು.ಸಿ ಯನ್ನು ತಮ್ಮ ಹುಟ್ಟೂರು ಪಕ್ಕದಲ್ಲಿರುವ ಕ್ಯಾದಿಗುಂಟೆ ಗ್ರಾಮದಲ್ಲಿ ಮುಗಿಸಿದರು. ಕಷ್ಟಗಳ ನಡುವೆಯೇ ಹೆಚ್ಚಿನ ಅಭ್ಯಾಸ ಮಾಡಬೇಕು ಎಂಬ ಹಂಬಲದೊಂದಿಗೆ ಇವರು ಪದವಿ ಶಿಕ್ಷಣಕ್ಕಾಗಿ ಚಿತ್ರದುರ್ಗದ ಆರ್ಟ್ಸ್ ಕಾಲೇಜಿ ದಾಖಲಾಗಿ ಪದವಿ ಶಿಕ್ಷಣ ಪಡೆದರು‌.

ಭವಿಷ್ಯ ಪತ್ರಕರ್ತ ವೃತ್ತಿ ಆಯ್ಕೆಯನ್ನು ದೊಡ್ಡ ಸವಾಲು ಎಂಬ ತೊಂಬತ್ತರ ದಶಕದ ಮಧ್ಯಭಾಗದಿಂದ ಚಿತ್ರದುರ್ಗದ ಸುದ್ದಿಗಿಡುಗ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಆರಂಭಿಸಿದರು.1998 ರ ನಂತರ 2005 ರವರೆಗೆ ನೊಂದ ಸಮುದಾಯದ ಪ್ರತಿನಿಧಿಯಾಗಿ ಹೋರಾಟವನ್ನೇ ಉಸಿರಾಗಿಸಿಕೊಂಡು ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡು ಮೊದಲೇ ಹೋರಟ ಗುಣದ ಮುನ್ಸೂಚನೆ ಅವರ ಚಟುವಟಿಕೆಯಲ್ಲಿ ಇದ್ದಿದ್ದು ಇವರನ್ನು ಹೋರಾಟಗಾರ ಯುವ ಪತ್ರಕರ್ತ ಎಂ. ಎನ್ ಅಹೋಬಲಪತಿ ಎಂಬ ಮಾತುಗಳು ಆ ಕಾಲದಲ್ಲಿ ಕೇಳಿಬರುತ್ತಿತ್ತು.

ಇವರು ಚಿತ್ರದುರ್ಗ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಹೋರಾಡಿದರು ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದ ಮಕ್ಕಳು ಹಾಸ್ಟೆಲ್ ಗಳಲ್ಲಿ ತಿಂಡಿ ಹೋರಾಟ ಮಾಡಿ ಆ ಹೋರಾಟದಲ್ಲಿ ಯಶಸ್ವಿಯಾದರು ಆ ಹೋರಾಟದ ಫಲವಾಗಿ ಎಲ್ಲಾ ಹಾಸ್ಟೆಲ್ ಗಳಲ್ಲಿ ಬೆಳಗಿನ ಉಪಹಾರ ಜಾರಿಯಾಯಿತು.
ನೂರಾರು ವಿದ್ಯಾರ್ಥಿಗಳನ್ನ ಜನಪರ ಚಳುವಳಿಗಳಲ್ಲಿ ಭಾಗವಹಿಸುವಂತೆ ಪ್ರೇರೇಪಸಿದರು.

ಹಾಸ್ಟೆಲ್ ಮಕ್ಕಳ ತಿಂಡಿ ಮತ್ತು ಸೌಲಭ್ಯಗಳ ವಿಚಾರಕ್ಕೆ ಬೀದಿಗಿಳಿದು ಹಲವು ಸವಾಲುಗಳನ್ನು ಎದುರಿಸಿದ ಇವರು ವಿದ್ಯಾರ್ಥಿ ದೆಸೆಯಿಂದಲೆ ಹೋರಾಟವನ್ನ ಮೈಗೂಡಿಸಿಕೊಂಡು ಬೆಳೆದರು.

ಇವರಲ್ಲಿ ಹಡಗಿದ್ದ ಹೋರಟದ ಮನೋಭಾವಕ್ಕೆ ಸಾಕ್ಷಿ ಎಂಬಂತೆ ರಾಜ್ಯದ ನಾನಾ ಜಿಲ್ಲೆಗಳ ಹೋರಾಟಗಳಲ್ಲಿ ಭಾಗವಹಿಸಿ ಗುರುತಿಸಿಕೊಂಡವರು.

ಹೋರಟದ ಹಾದಿ

ಬೆಂಗಳೂರು, ಚಿಕ್ಕಮಗಳೂರು ಚಿತ್ರದುರ್ಗದಲ್ಲಿ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಇವರು ಹೋರಾಟಗಾರರ ಕೊಂಡಿಯಾಗಿ ಬೆಳೆದು ನಿಂತರು. ಅಷ್ಟೆಯಲ್ಲದೆ ಚಿನ್ನದ ಗಣಿ ಕಾರ್ಮಿಕರು ಹೋರಾಟ, ಬೆಂಗಳೂರು ಮೈಸೂರ್ ಇಂಫ್ರಾಸ್ಟ್ರಕ್ಚರ್ ಕಾರಿಡಾರ್, ಆದಿವಾಸಿ ಗಿರಿಜನ ಹೋರಾಟ, ಕೋಮು ಸೌಹಾರ್ದ ಚಟುವಟಿಕೆಗಳ ಜೊತೆ ಮಾಡಿದ ಹೋರಟಗಳಲ್ಲಿ ಆಹೋಬಲಪತಿ ಅವರ ಪಾತ್ರ ದೊಡ್ಡದಿದ್ದರು ಎಂದು ಸಹ ಅವರು ಎಲೆಮರೆಯ ಕಾಯಿಯಂತೆ ಹೋರಟಕಕ್ಕೆ ಫಲ‌ ಹುಡುಕಿದರು.

ರೈತರು, ಕಾರ್ಮಿಕರು ಆದಿವಾಸಿಗಳು ಹಾಗೂ ಮಹಿಳೆಯರ ಪರ ಎರಡು ದಶಕಗಳಿಗೂ ಹೆಚ್ಚು ಕಾಲ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಸಾಮಾಜಿಕ ಸಮಾನತೆಗಾಗಿ ಅಗಲಿರುಳು ಶ್ರಮಿಸಿ ಹೋರಾಟಗಳನ್ನು ರೂಪಿಸಿದವರು. ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ಸಂಕಷ್ಟ ಹೇಳಿಕೊಂಡವರಿಗೆ ಸಹಾಯಾಸ್ತ ನೀಡುತ್ತಾ ಬಂದಿದ್ದಾರೆ.

ವೃತ್ತಿ ಜೀವನ

ಪ್ರಸ್ತುತ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಜಿಲ್ಲೆಯ ವಿಶೇಷ ಪ್ರತಿನಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಎನ್. ಅಹೋಬಳಪತಿ ತೊಂಬತ್ತರ ದಶಕದ ಮಧ್ಯಭಾಗದಿಂದ ಚಿತ್ರದುರ್ಗದ ಸುದ್ದಿಗಿಡುಗ ದಿನಪತ್ರಿಕೆ ಪತ್ರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ೧೯೯೮ ರ ನಂತರ ಗಣಿ ಕಾರ್ಮಿಕರು, ಆದಿವಾಸಿ, ಗಿರಿಜನ ಹೋರಾಟ, ಕೋಮು ಸೌಹಾರ್ದ ಚಟುವಟಿಕೆಗಳ ಜೊತೆ ಹವ್ಯಾಸಿ ಪತ್ರಕರ್ತರಾಗಿ ದುಡಿದಿದ್ದಾರೆ. ಗೌರಿ ಲಂಕೇಶ್, ಇಂಡಿಯನ್ ಎಕ್ಸ್‌ಪ್ರೆಸ್, ಕನ್ನಡಪ್ರಭ, ಸಂಡೇ ಇಂಡಿಯನ್ ನಲ್ಲಿ ವೃತ್ತಿ ನಿರ್ವಹಿಸಿದ್ದಾರೆ. ಕರ್ನಾಟಕ ಸರ್ಕಾರದ “ಕಣಜ” ಅಂತರ್ಜಾಲ ಜ್ಞಾನಕೋಶದಲ್ಲಿ ಯೋಜನಾ ಸಹಾಯಕರಾಗಿಯೂ ಕೆಲಸ ಮಾಡಿದ್ದಾರೆ. ವಿಜಯ ಕರ್ನಾಟಕದಲ್ಲಿ ವಿಶೇಷ ವರದಿಗಳ ಮೂಲಕ ಗ್ರಾಮೀಣ ರೈತರು, ಕಾರ್ಮಿಕರು, ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಜನರ ಧ್ವನಿಯನ್ನು ದಾಖಲಿಸುತ್ತಾ ಬಂದಿರುವ ಇವರ ಕಾರ್ಯ ಗುರುತಿಸಿ ಜಿಲ್ಲಾ ವಾಲ್ಮೀಕಿ ಪುರಸ್ಕೃತ ದೊರೆತಿರುವುದು ಸಂತಸ ತಂದಿದೆ.‌

[t4b-ticker]

You May Also Like

More From Author

+ There are no comments

Add yours