ವಾಲ್ಮೀಕಿ ಮಹರ್ಷಿ ಅವರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:(chitrdaurga) ವಾಲ್ಮೀಕಿ ಮಹರ್ಷಿ ಅವರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ, ಅವರ ತತ್ವ ಆದರ್ಶಗಳನ್ನು  ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ  ತಿಳಿಸಿದರು.

ತಾಲೂಕಿಮ ತಮಟಕಲ್ಲು ಗ್ರಾಮದಲ್ಲಿ  ಆಯೋಜಿಸಿದ್ದು ವಾಲ್ಮೀಕಿ ಜಯಂತಿಯನ್ನು ವಾಲ್ಮೀಕಿ ಭಾವಚಿತ್ರಕ್ಕೆ  ಪುಷ್ಪರ್ಚನೆ ಮಾಡುವ ಮೂಲಕ  ವಾಲ್ಮೀಕಿ ಜಯಂತಿಯನ್ನು   ಉದ್ಘಾಟಿಸಿದರು‌. Maharshi was not confined to one society

ಮಾನವೀಯತೆಯ ಧರ್ಮವನ್ನು ಪ್ರತಿಪಾದಿಸಿದ ಮಹಾನ್  ಆದಿಕವಿ ಮಹರ್ಷಿ  ವಾಲ್ಮೀಕಿ ಆಗಿದ್ದಾರೆ. ಅವರು ಬರೆದಿರುವ ಪ್ರತಿಯೊಂದು ಶ್ಲೋಕಗಳು ಜನರು ಜೀವನದಲ್ಲಿ ಆಳವಡಸಿಕೊಂಡರೆ ಯಶಸ್ವಿಯಾಗಿ ತಮ್ಮ ಬದುಕನ್ನು ನಡೆಸಬಹುದು. ಅಖಂಡ ಭಾರತಕ್ಕೆ ವಾಲ್ಮೀಕಿ ಮಹರ್ಷಿ ಕೊಡುಗರ ಅಪಾರ ಎಂದು ಬಣ್ಣಿಸಿದರು.Tamatakallu

ಈ‌ ಸಮಾಜಕ್ಕೆ ತನ್ನ ರಾಮಯಾಣ ಗ್ರಂಥದ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ದೇಶದ ಎಲ್ಲಾ ಜನರು ಜಾತ್ಯಾತೀತವಾಗಿ ಸ್ಮರಿಸಬೇಕು ಎಂದು ಹೇಳಿದರು.

ವಾಲ್ಮೀಕಿ ಸಮಾಜದ ಬಹು ವರ್ಷಗಳ ಬೇಡಿಕೆಯಾದ   7.5 ಮೀಸಲಾತಿ ಮಾಡುವ ಮೂಲಕ ವಾಲ್ಮೀಕಿ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಆಗಿದೆ. ಈ ಸಮಾಜ ಆರ್ಥಿಕ, ಸಾಮಾಜಿಕ, ಶಿಕ್ಷಣದ ಕಡೆ ಹೆಚ್ಚು ಒತ್ತು ನೀಡಬೇಕು ಎಂದರು‌.chitrdaurga

ಈ‌ ಕಾರ್ಯಕ್ರಮದಲ್ಲಿ ನಾಯಕ ಸಮಾಜದ ಮುಖಂಡ ನಗರಸಭೆ ಸದಸ್ಯ ವೆಂಕಟೇಶ್, ಪ್ರೋ.ಗುಡ್ಡದೇಶ್ವರಪ್ಪ, ಮುಖಂಡರಾದ ರಮೇಶ್,ಸಣ್ಣ ಸ್ವಾಮಿ, ವೀರೇಶ್ ಮದಕರಿ, ಸುರೇಶ್, ಮಂಜುನಾಥ್, ಮಹಂತೇಶ್ ಮತ್ತು ಯುವಕರು ಭಾಗವಹಿಸಿದ್ದರು.mla Thippareddy

[t4b-ticker]

You May Also Like

More From Author

+ There are no comments

Add yours