ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಲು ಕಸದ ಬುಟ್ಟಿ ವಿತರಣೆ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಅ:16:ಹಳ್ಳಿಗಳಲ್ಲಿ  ಸ್ವಚ್ಚತೆಯನ್ನು ಕಾಪಾಡುವ ದೃಷ್ಟಿಯಿಂದ ಎಲ್ಲಾ ಹಳ್ಳಿಗಳಿಗೆ ಕಸ ಸಂಗ್ರಹಣೆ ಬುಟ್ಟಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಜೆ.ಎನ್‌.ಕೋಟೆ ಗ್ರಾಮದಲ್ಲಿ  ಜೆ.ಎನ್.ಕೋಟೆ ಗ್ರಾಮ ಪಂಚಾಯತಿಯ 15 ನೇ ಹಣಕಾಸಿನಲ್ಲಿ  ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿಯಲ್ಲಿ  ಕಸದ ಬುಟ್ಟಿಗಳನ್ನು ವಿತರಣೆ ಮಾಡಿ ಮಾತನಾಡಿದರು.
ಜೆ.ಎನ್.ಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನೇರನಾಳ್, ಗೊಲ್ಲನಕಟ್ಟೆ, ಕಳ್ಳಿರಪ್ಪ, ಸಜ್ಜನಕೆರೆ, ಪಲ್ಲವಗೆರೆ, ಜೋಡಿಚಿಕ್ಕೆನಹಳ್ಳಿ ,ಜೋಡಿಚಿಕ್ಕೆನಹಳ್ಳಿ ಲಂಬಾಣಿಹಟ್ಟಿ ಗ್ರಾಮಗಳು   ಸೇರ ಒಟ್ಟು  2100 ಕುಟುಂಬಳಿಗೆ ಹಸಿಕಸ ಮತ್ತು ಒಣಹಸದ ಬುಟ್ಟಿಗಳನ್ನು ನೀಡಲಾಗಿದ್ದು ಎಲ್ಲಾರೂ ಸದುಪಯೋಗ ಮಾಡಿಕೊಳ್ಳಬೇಕು.
ಸ್ವಚ್ಚವಾಹಿನಿ ವಾಹನ ಮೂಲಕ ಎಲ್ಲಾ ಹಳ್ಳಿಗಳಿಗೆ ವಾಹನ ಬರಲು ಸಮಯ ನಿಗದಿ ಮಾಡುತ್ತದೆ. ಅದರಂತೆ ಎಲ್ಲಾರೂ ಕಸವನ್ನು ವಾಹನಕ್ಕೆ ಕಡ್ಡಾಯವಾಗಿ ಹಾಕಬೇಕು. ತಮ್ಮ ಮನೆಯ ಸುತ್ತಮುತ್ತಲೂ ಕಸವನ್ನು ಹಾಕಿಕೊಂಡರೆ ಆರೋಗ್ಯದ ಮೇಲೆ ತುತ್ತಾಗುತ್ತಾರೆ ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ಸಚ್ಚ ಭಾರತ ಯೋಜನೆಯಲ್ಲಿ ಕಸ ಸಂಗ್ರಹಣೆ ಬುಟ್ಟಿ ನೀಡಲಾಗಿದೆ ಎಂದರು‌.
ಸಾರ್ವಜನಿಕರು ತಮ್ಮ ಮನೆಗಳಲ್ಲಿ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಬೇಕು.
ಬೇಯಿಸಿದ ಆಹಾರ, ಹಣ್ಣು, ತರಕಾರು, ಹೂವು,ಒಣ ಎಲೆಗಲು ಹಾಗೂ ಇತರೆ ಕೊಳೆಯುವ ಪದಾರ್ಥಗಳಾಗಿದ್ದು  ಪೇಪರ್, ಪ್ಲಾಸ್ಟಿಕ್ ಸೇರಿ ಎಲ್ಲಾ ಕಸವನ್ನು ಬೇರ್ಪಡಿಸಿ
ವಾಹನಗಳಿಗೆ ಹಾಕಿ ಎಂದು ಜನರಿಗೆ ಸಲಹೆ ನೀಡಿದರು.
ಜೆ.ಎನ್.ಕೋಟೆ ಪಂಚಾಯತಿ ವ್ಯಾಪ್ತಿಯ  ಒಂಬತ್ತು ಹಳ್ಳಿಗಳಿಗೆ  ಎಲ್ಲಾ ಕಡೆಗಳಲ್ಲಿ  ಸಿ.ಸಿ. ರಸ್ತೆ ಕಾಮಗಾರಿ  ಮತ್ತು ಚಕ್ ಡ್ಯಾಂ ನಿರ್ಮಾಣ ಮಾಡಲಾಗಿದ್ದು ಚಿಕ್ಕ ಪುಟ್ಟ ರಸ್ತೆಗಳು ಬಾಕಿ ಇದ್ದು ಎಲ್ಲಾವನ್ನು ಸಹ ಹಂರ ಹಂತವಾಗಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ರಾಮೀಣ ಭಾಗದ ಮೂಲಭೂತ ಸೌಲಭ್ಯಗಳ ಒದಗಿಸುವ ಕೆಲಸ ಮಾಡಿದ್ದೇನೆ. ಹಿರಿಯ ನಾಗರಿಕರು, ‌ಅಂಗವಿಕಲರು, ವಿಧವಾ ವೇತನ ಸೇರಿ ಯಾವುದೇ ಪಿಂಚಣಿ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತಂದರೆ ಕೂಡಲೇ ಸರಿಪಡಿಸಲಗುವುದು ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ವಿದ್ಯಾಶ್ರೀ , ಉಪಾಧ್ಯಕ್ಷ ಡಿ.ಮಲ್ಲಪ್ಪ, ತಾಲೂಕು ಪಂಚಾಯಿತಿ ಎಡಿ ಧನಂಜಯ, ಪಿಡಿಓ ಆರ್.ಡಿ.ನಿರ್ಮಲ ಮತ್ತು ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರುಗಳು  ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours