ಗ್ರಾಮೀಣ ರೈತ ಮತ್ತು ರೈತ ಮಹಿಳೆಯರಿಗೆ ತರಬೇತಿ

 

ಚಿತ್ರದುರ್ಗ ಫೆ. 13 (ಕರ್ನಾಟಕ ವಾರ್ತೆ) :ಕೃಷಿ ಮತ್ತು ತೋಟಗಾರಿಕೆ ಸಂಶೋಧಾ ಕೇಂದ್ರ, ಬಬ್ಬೂರು ಫಾರಂ, ಕೃಷಿ ಯಂತ್ರೋಪಕರಣಗಳ ಪರೀಕ್ಷೆ ಮತ್ತು ತರಬೇತಿ ಕೇಂದ್ರ, ಬಬ್ಬೂರು ಫಾರಂ, ದಕ್ಷಿಣ ಪ್ರಾಂತೀಯ ಕೃಷಿ ಯಂತ್ರೋಪಕರಣಗಳ ಪರೀಕ್ಷೆ ಮತ್ತು ತರಬೇತಿ ಕೇಂದ್ರ, ಗಾರಲದಿನ್ನಿ, ಅನಂತಪುರ ಹಾಗೂ ಕೃಷಿ ಇಲಾಖೆ ಚಿತ್ರದುರ್ಗ ವ್ಯಾಪ್ತಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರಂ ಇವರುಗಳ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ಜಿಲ್ಲೆಯ ರೈತ ಭಾಂದವರು, ರೈತ ಮಹಿಳೆಯರು ಮತ್ತು ಕೃಷಿ ಸಖಿಯವರಿಗೆ “ಆಧುನಿಕ ಕೃಷಿ ಉಪಕರಣಗಳ ಅಳವಡಿಕೆ ಮತ್ತು ನಿರ್ವಹಣೆ” ಕುರಿತು ಎರಡು ದಿನಗಳ ತರಬೇತಿ ಕಾರ್ಯಕ್ರಮ ಫೆ. 16 ರಂದು ಬೆಳಗ್ಗೆ 10:30 ಗಂಟೆಗೆ ಬಬ್ಬೂರು ಫಾರಂ ನಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ತರಬೇತಿ ಕಾರ್ಯಕ್ರಮದಲ್ಲಿ ದಕ್ಷಿಣ ಪ್ರಾಂತೀಯ ಕೃಷಿ ಯಂತ್ರೋಪಕರಣಗಳ ಪರೀಕ್ಷೆ ಮತ್ತು ತರಬೇತಿ ಕೇಂದ್ರ, ಗಾರಲದಿನ್ನಿ, ಅನಂತಪುರ ಇಲ್ಲಿನ ವಿಜ್ಞಾನಿ ಡಾ.ಕನಕಪ್ಪ ಮತ್ತು ತಂಡದವರು, ಬಬ್ಬೂರು ಫಾರಂನ ಕೃಷಿ ಯಂತ್ರೋಪಕರಣಗಳ ಪರೀಕ್ಷೆ ಮತ್ತು ತರಬೇತಿ ಕೇಂದ್ರದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಶರಣಪ್ಪಜಂಗಂಡಿ, ಕೃಷಿ ಇಂಜಿನಿಯರಿಂಗ್, ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ ಬಾರಕೇರ, ಇವರುಗಳು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಉಪಯೋಗಿಸುವ ಆಧುನಿಕÀ ಕೃಷಿ ಯಂತ್ರೋಪಕರಣಗಳ ಬಳಕೆ ಮತ್ತು ಅವುಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮತ್ತು ಪ್ರಾತ್ಯಕ್ಷಿಕೆ ಮಾಡಲಿದ್ದು, ಆಸಕ್ತ ರೈತರು ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಆಸಕ್ತ ರೈತಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು ಜಿಲ್ಲಾ ಕೃಷಿ ತರಬೇತಿಕೇಂದ್ರ, ಬಬ್ಬೂರು ಫಾರಂನಶ್ರೀ ರಜನೀಕಾಂತ. ಆರ್, ಸಹಾಯಕ ಕೃಷಿ ನಿರ್ದೇಶಕರು (8277931058), ಶ್ರೀಮತಿ ಉಷಾರಾಣಿ ಎಂ.ಸಹಾಯಕ ಕೃಷಿ ನಿರ್ದೇಶಕರು, (ರೈತ ಮಹಿಳೆ) (9980730696),ಟಿ.ಪಿ. ರಂಜಿತಾ, ಕೃಷಿ ಅಧಿಕಾರಿ (8277930959) ಮತ್ತು ಪವಿತ್ರಾ ಎಂ. ಜೆ. (9535412286) ಹಾಗೂ ವಲಯ ಕೃಷಿ ಮತ್ತುತೋಟಗಾರಿಕೆ ಸಂಶೋಧಾಕೇಂದ್ರ, ಬಬ್ಬೂರು ಫಾರಂನರವಿಕುಮಾರ್, ಸಹಾಯಕರು (9036880652) ಸಿದ್ರಾಮಪ್ಪ, ಕೃಷಿ ಇಂಜಿನಿಯರ್ (8088230792) ರವರದೂರವಾಣಿ ಸಂಖ್ಯೆಗೆಕರೆ ಮಾಡಿ ನೋಂದಾಯಿಸಿಕೊಳ್ಳಲು ಕೋರಿದೆ.
ತರಬೇತಿಗೆ ಹಾಜರಾಗುವ ಕೃಷಿ ಸಖಿಯವರು ತಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಹಾಜರಾಗಬೇಕು.  ಮೊದಲು ನೋಂದಾವಣಿ ಮಾಡಿಕೊಂಡ 100 ಜನ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಎಂದು ಬಬ್ಬೂರು ಸಹಾಯಕ ಕೃಷಿ ನಿರ್ದೇಶಕ ರಜನಿಕಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರ
[t4b-ticker]

You May Also Like

More From Author

+ There are no comments

Add yours