ಹತ್ತಿ ಉರಿದ ವಿದ್ಯುತ್ ತಂತಿ ಮೂರು ಹೆಮ್ಮೆಗಳು ಬಲಿ

 

ಅರಬಗಟ್ಟದಲ್ಲಿ ಲೈನ್ ಶಾರ್ಟ್ ಸರ್ಕ್ಯೂಟ್, 3 ಎಮ್ಮೆ ಸಾವು
ಭಯ ಭೀತರಾದ ಗ್ರಾಮಸ್ಥರು

ಹೊಳಲ್ಕೆರೆ: ತಾಲ್ಲೂಕು ರಾಮಗಿರಿ ಹೋಬಳಿ ಅರಬಗಟ್ಟ ಗ್ರಾಮದಲ್ಲಿ ಹೈವೋಲ್ಟೇಜ್ ಲೈನ್ ಶಾರ್ಟ್ ಸರ್ಕ್ಯೂಟ್ ನಿಂದ 3 ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಈ ಮೂರು ಎಮ್ಮೆಗಳು ಗಂಗಪ್ಪರ ಸಿದ್ದರಾಮಪ್ಪ ಎಂಬ ರೈತರಿಗೆ ಸೇರಿದ್ದು, ಸುಮಾರು 1.60ಲಕ್ಷ ರೂ ನಷ್ಟವಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಲೈನ್ ಹತ್ತಿ ಉರಿದು ಸಂಭವಿಸಿದ ಅವಘಡದಿಂದ ಇಡೀ ಗ್ರಾಮ ಭಯಭೀತವಾಗಿದೆ.

ಗ್ರಾಮಸ್ಥರ ವಿರೋಧದ ನಡುವೆಯೂ ಊರೊಳಗೆ ಹೈವೋಲ್ಟೇಜ್ ಲೈನ್ ಎಳೆದಿರುವುದು ಈ ಅವಘಡಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಲೈನ್ ಬೇರೆಡೆಗೆ ಶಿಫ್ಟ್ ಮಾಡಬೇಕು ಎಂದು ಗ್ರಾಮದ ಮಿಲಿಟರಿ ಮಲ್ಲೇಶ್ ಆಗ್ರಹಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours