ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಅಕ್ಟೋಬರ್17:
ಚಿತ್ರದುರ್ಗದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ತಂತ್ರಜ್ಞಾನ ತರಬೇತಿಗಳ ಸಂಸ್ಥೆಗಳಿಗೆ ನೆರವು ಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ (SCP-TSP), ಮೂಲಕ 18 ರಿಂದ 35 ವರ್ಷದೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮ, ಬಿ.ಇ ಮತ್ತು ಯಾವುದೇ ಪದವಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಸಿ.ಎನ್.ಸಿ ಟರ್ನಿಂಗ್ ಆಪರೇಟರ್, ಸಿ.ಎನ್.ಸಿ ಪ್ರೋಗ್ರಾಮರ್, ಸಿ.ಎನ್.ಸಿ ಮಿಲ್ಲಿಂಗ್ ಮಷಿನ್ ಅಪರೇಟರ್, ಸಿ.ಎನ್.ಸಿ ಪ್ರೋಗ್ರಾಮಿಂಗ್ ಮತ್ತು ಅಪರೇಷನ್, ಟರ್ನರ್, ಮಿಲ್ಲರ್, ಗ್ರೈಂಡರ್, ಡಿಸೈನರ್-ಮೆಕಾನಿಕಲ್, ಪ್ರೊಡಕ್ಷನ್ ಇಂಜಿನಿಯರ್ (CAD-CAM), ಟೂಲ್ ರೂಮ್ ಮಷಿನಿಷ್ಟ್ ಕೋರ್ಸ್‍ಗಳಲ್ಲಿ ಅಲ್ಪಾವಧಿ ತರಬೇತಿಗಳನ್ನು ಉಚಿತವಾಗಿ ನೀಡಲಾಗುವುದು.
ಈ ತರಬೇತಿಯ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಎಸ್.ವೈ.ನಂ 44, ಹಳೇ ಬೆಂಗಳೂರು ರಸ್ತೆ, ಕುಂಚಿಗನಾಳ್, ಕಣಿವೆ ಮಾರಮ್ಮ ದೇವಸ್ಥಾನ ಹತ್ತಿರ, ಚಿತ್ರದುರ್ಗ, ದೂರವಾಣಿ ಸಂಖ್ಯೆ 7892732355, 8660270535, 8884488202ಗೆ ಸಂಪರ್ಕಿಸಬಹುದಾಗಿದೆ ಎಂದು ಚಿತ್ರದುರ್ಗದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours