KPSC ಯಿಂದ ವಿವಿಧ ಇಲಾಖೆಗಳ 730 ಹುದ್ದೆಗಳ ಫಲಿತಾಂಶ ಪ್ರಕಟ

 

 

ಬೆಂಗಳೂರು : ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆ ಬರೆದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕ ಲೋಕಸೇವಾ ಆಯೋಗವು (KPSC) ಮೂರು ಇಲಾಖೆಗಳ ನೇಮಕಾತಿಗಳ ಫಲಿತಾಂಶಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು ತಾವುಗಳು ಇಂದೇ ನೋಡಬಹುದು.

 

ಲೋಕೋಪಯೋಗಿ ಇಲಾಖೆಯ 660 ಸಹಾಯಕ (kpsc) ಎಂಜಿನಿಯರ್ ಹುದ್ದೆಗಳ ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಮೂರಾರ್ಜಿ ವಸತಿ ಶಾಲೆಗಳ ಆರ್ಟ್ ಮತ್ತು ಕ್ರಾಫ್ಟ್ ನ 47 ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕೆಪಿಎಸ್ ಸಿ ತನ್ನ ವೆಬ್ ಸೆಟ್ ನಲ್ಲಿ ಪ್ರಕಟಿಸಿದೆ.

ಆಯುಷ್ ಇಲಾಖೆಯ ಗ್ರೂಪ್ ಸಿ ವೃಂದದ ಅಂತಿಮ ಆಯ್ಕೆ ಪಟ್ಟಿಯನ್ನೂ ಸಹ ಕೆಪಿಎಸ್ ಸಿ ಪ್ರಕಟಿಸಿದೆ. ಅಭ್ಯರ್ಥಿಗಳು ಕೆಪಿಎಸ್ ಸಿ ಅಧಿಕೃತ ವೆಬ್ ಸೈಟ್ www.kpsc.com ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.( kpsc)

[t4b-ticker]

You May Also Like

More From Author

+ There are no comments

Add yours