ಖ್ಯಾತ ಸಾಹಿತಿ ಬಿ.ಎಲ್.ವೇಣು ಅವರಿಗೆ ಬೆದರಿಕೆ ಪತ್ರ, ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲು

 

ಚಿತ್ರದುರ್ಗ: ಚಿತ್ರದುರ್ಗದ   ಖ್ಯಾತ ಸಾಹಿತಿ ಬಿ.ಎಲ್. ವೇಣು ಅವರಿಗೆ ಕಳೆದ ಎರಡು ದಿನಗಳ ಹಿಂದೆ  ಎರಡನೇ ಬಾರಿ  ಬೆದರಿಕೆ ಪತ್ರವೊಂದು ಬಂದಿತ್ತು. ಈ ಹಿನ್ನೆಲೆ ಚಿತ್ರದುರ್ಗ ಬಡಾವಣೆ ಪೋಲಿಸ್  ಠಾಣೆಯಲ್ಲಿ  ಬಿ.ಎಲ್. ವೇಣು ದೂರು ದಾಖಲಿಸಿದ್ದಾರೆ.

ಚಿತ್ರದುರ್ಗ:ನಗರದ ಮುನ್ಸಿಪಲ್ ಕಾಲೋನಿಯಲ್ಲಿ ಇರುವ ನಿವಾಸಕ್ಕೆ ಅಂಚೆ‌ ಮೂಲಕ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಪತ್ರವೊಂದು ಕಳಿಸಿದ್ದರು. ಪತ್ರದಲ್ಲಿ ಸಾವರ್ಕರ್ ವಿಚಾರವಾಗಿ ನೀವು ನೀಡಿರುವ ಹೇಳಿಕೆಗೆ ಕ್ಷಮೆ ಕೇಳಬೇಕು. ಅಲ್ಲದೆ ನಿಮ್ಮ ಜೊತೆ ಇರುವ 61 ಸಾಹಿತಿಗಳಿಗೆ ಬುದ್ದಿ ಹೇಳಬೇಕು ಎಂದು ಬೆದರಿಕೆ ಹಾಕಿದ್ದರು. ಇಲ್ಲವಾದರೆ ಕಾಲನ ಉಪಚಾರಕ್ಕೆ ಸಿದ್ದರಾಗಿ ಎಂಬ ಬೆದರಿಕೆ ಪತ್ರ ಕಳಿಸಿದ್ದರು. ಇನ್ನೂ ಈ ಹಿಂದೆಯೂ ಕೂಡಾ ಜೂನ್ 22 ರಂದು ಕೂಡಾ ಒಂದು ಬೆದರಿಕೆ ಪತ್ರ ಕಳಿಸಿದ್ದರು. ಇದೀಗ  ವೇಣು ಅವರಿಗೆ ಮತ್ತೊಂದು ಅನಾಮಧೇಯ ಪತ್ರ ಬೆದರಿಕೆ ಪತ್ರ ಬಂದಿದೆ. ಇದರಿಂದ ಐಪಿಸಿ  504,507 ಅಡಿಯಲ್ಲಿ ಚಿತ್ರದುರ್ಗ ಬಡಾವಣೆ ಪೊಲೀಸ್  ಠಾಣೆಯಲ್ಲಿ ದೂರು ದಾಖಲಾಗಿದೆ.
[t4b-ticker]

You May Also Like

More From Author

+ There are no comments

Add yours