ವಿಧಾನ ಸಭೆ ಚುನಾವಣೆ: ರಾಜಕೀಯ ಪಕ್ಷಗಳ ಲೆಕ್ಕಚಾರದಲ್ಲಿ ಯಾವ ತಿಂಗಳಲ್ಲಿ ಎಲೆಕ್ಷನ್ ಗೊತ್ತೆ?

 

ರಾಜ್ಯ ರಾಜಕಾರಣ:ರಾಜ್ಯ ವಿಧಾನಸಭೆ ಚುನಾವಣೆಗೆ 9 ತಿಂಗಳು ಬಾಕಿ ಇರುವಾಗಲೇ ಅವಧಿಗೆ ಮುನ್ನ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚು  ದಟ್ಟವಾಗಿದ್ದು ರಾಜ್ಯದಲ್ಲಿ ರಾಜಕೀಯ ಪಡಾಸಾಲೆಯ  ಚಟುವಟಿಕೆಗಳುದ ದಿನದಿಂದ ದಿನಕ್ಕೆ ಗರಿಗೆದರುತ್ತಿವೆ.

ಆಡಳಿತರೂಢ ಬಿಜೆಪಿ  ಮತ್ತು  ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚಟುವಟಿಕೆಗಳನ್ನು  ಗಮನಿಸಿದರೆ ರಾಜ್ಯದಲ್ಲಿ ಅವಧಿಗೆ ಮೊದಲೇ  ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬ ವಾಸನೆ  ಜೋರಾಗಿದೆ.
ಪ್ರಸ್ತುತ ವಿಧಾನಸಭೆ ಅವಧಿ2023  ರ ಅವಧಿ ಏಪ್ರಿಲ್ 24  ಕ್ಕೆ ಅಂತ್ಯಗೊಳ್ಳಲಿದೆ.  ಅದಕ್ಕೂ ಮುನ್ನವೇ ಚುನಾವಣೆ ನಡೆಯಬೇಕು ಆದರೆ ಮೂಲಗಳ ಪ್ರಕಾರ ಅವಧಿಗೆ ಮುನ್ನವೇ ಚುನಾವಣೆ ನಡೆಯಲಿದೆ ಎನ್ನಲಾಗುತ್ತಿದೆ.
ವರ್ಷಾಂತ್ಯದಲ್ಲಿ ವಿವಿಧ ರಾಜ್ಯಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆ ಸಮಯದಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮೂರು ಪಕ್ಷಗಳು ಚುನಾವಣಾ ತಯಾರಿ ನಡೆಸಿದ್ದು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ  ಈ ಬಾರಿ ಶತಾಯಗತಾಯ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಕಾರ್ಯತಂತ್ರ ರೂಪಿಸಿದೆ. ಮತ್ತೊಂದೆಡೆ ಜೆಡಿಎಸ್ 2023  ರ ಗುರಿಯನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆಲವು ಸಾಧಿಸಲು ತನ್ನದೇ ಆದ ಕಾರ್ಯತಂತ್ರ ರೂಪಿಸಿದೆ.
2023 ರ ಏಪ್ರಿಲ್ ತನಕ ಕಾಯುವ ಕಾಯಲು ಯಾವ ರಾಜಕೀಯ ಪಕ್ಷಗಳೂ ಸಿದ್ಧವಿದ್ದಂತಿಲ್ಲ ಹೀಗಾಗಿ ಮೂರು ಪಕ್ಷಗಳಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸುವ ನಿಟ್ಟಿನಲ್ಲಿ ಮೂರು ಪಕ್ಷಗಳು ತಮ್ಮದೇ ಆದ ರಣತಂತ್ರವನ್ನು ರೂಪಿಸುವಲ್ಲಿ ನಿರತವಾಗಿವೆ.
ಬಿಜೆಪಿ ಕೇಂದ್ರ ನಾಯಕರು ಕರ್ನಾಟಕದಲ್ಲಿಯೂ ಅವಧಿಗೆ ಮುನ್ನವೇ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆ ಕೂಡ ಪಕ್ಷವನ್ನು ಗಡಿಬಿಡಿಗೆ ದೂಡಿದ್ದು ಪ್ರಬಲವಾದ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಸಜ್ಜಾಗಿವೆ.
ಕಾಂಗ್ರೆಸ್ ಈಗಾಗಲೇ  ಪಾದಯಾತ್ರೆ, ಕಾರ್ಯಾಗಾರಗಳನ್ನು ನಡೆಸುತ್ತಿದೆ. ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಜನ್ಮದಿನದ ನೆಪದಲ್ಲಿ ಚುನಾವಣೆ ಸಮರಕ್ಕೆ ಕರೆ ನೀಡುವ ಸಾಧ್ಯತೆ ಇದೆ. ಜೆಡಿಎಸ್ ಜನಮಿತ್ರ ಸಮಾವೇಶ ಮತ್ತು ಕಾರ್ಯಾಗಾರಗಳನ್ನು ನಡೆಸಿದ್ದು, ಡಿಸೆಂಬರ್ ನಲ್ಲಿ ಚುನಾವಣೆ ಸಿದ್ದರಾಗಿ ಎಂದು ಎಚ್.ಡಿ. ಕುಮಾರಸ್ವಾಮಿ ಈಗಾಗಲೇ  ಕರೆ ನೀಡಿದ್ದಾರೆ.
ಬಿಜೆಪಿ ಈಗಾಗಲೆ ತನ್ನ ಎಲ್ಲ ಸಚಿವರಿಗೆ ಕಣಕ್ಕಿಳಿಯುವಂತೆ ಆದೇಶ ನೀಡಿದೆ. ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ಬಿಜೆಪಿ ಈಗಾಗಲೆ ತನ್ನ ಎಲ್ಲ ಸಚಿವರಿಗೆ ಕಣಕ್ಕಿಳಿಯುವಂತೆ ಆದೇಶ ನೀಡಿದೆ. ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ಸಕ್ರೀಯವಾಗುವಂತೆ ಸೂಚಿಸಿದೆ ಎನ್ನಲಾಗಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.
[t4b-ticker]

You May Also Like

More From Author

+ There are no comments

Add yours