ಗಾರ್ಮೆಂಟ್ಸ್ ಕೆಲಸಕ್ಕೆ ಹೊಗಿದ್ದ ಮಹಿಳೆ ಕಾಣೆ

 

ಚಿತ್ರದುರ್ಗ (ಕರ್ನಾಟಕ ವಾರ್ತೆ): ಫೆ.21: ತಾಲ್ಲೂಕಿನ ಚಿಕ್ಕಬೆನ್ನೂರು ಗ್ರಾಮದಿಂದ ನಗರದ ಗಾರ್ಮೆಂಟ್ಸ್ ಕಂಪನಿಯಲ್ಲಿ ಪ್ರತಿನಿತ್ಯ ಕೆಲಸಕ್ಕೆ ಬರುತ್ತಿದ್ದ, 26 ವರ್ಷದ ಚೈತ್ರಾ ಫೆ.14 ರಿಂದ ನಿಗೂಢವಾಗಿ ಕಾಣೆಯಾಗಿದ್ದಾರೆ. ಈ ಕುರಿತು ಚೈತ್ರಾ ಅವರ ತಂದೆ ಹಾಗೂ ಪತಿ ವೆಂಕಟೇಶ್ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಂದಿನಂತೆ ಫೆ.14 ರಂದು ಗಾರ್ಮೆಂಟ್ಸ್ ಕಂಪನಿಯ ಕೆಲಸಕ್ಕೆ ಮನೆಯಿಂದ ಹೋಗಿದ್ದ ಚೈತ್ರಾ, ತಡರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಗಾಬರಿಗೊಂಡ ತಂದೆ ಹಾಗೂ ಪತಿ ವೆಂಕಟೇಶ್, ಕೆಲಸದ ಸ್ಥಳ, ಅಕ್ಕಪಕ್ಕದ ಗ್ರಾಮಗಳಲ್ಲಿ ಹುಡಿಕಿ, ಸಂಬಂಧಿಕರ ಬಳಿ ವಿಚಾರಿಸಿದ್ದಾರೆ. ಆದರೂ ಚೈತ್ರಾಳ ಸುಳಿವು ಸಿಗಿದ್ದಾಗ ಫೆ.15 ರಂದು ಭರಮಸಾಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 8 ವರ್ಷಗಳ ಹಿಂದೆ ವೆಂಕಟೇಶ್ ಹಾಗೂ ಚೈತ್ರಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 3 ಜನ ಮಕ್ಕಳಿದ್ದಾರೆ. ಚೈತ್ರ 5.2 ಅಡಿ ಎತ್ತರ, ದುಂಡು ಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ಕೇಸರಿ ಕಲರ್ ಟಾಪ್, ಬಾದಾಮಿ ಕಲರ್ ಫ್ಯಾಂಟ್‍ನ ಚೂಡಿದಾರ ಧರಿಸಿರುತ್ತಾರೆ.

ಇದನ್ನೂ ಓದಿ: ಜಿಯಾಲಾಜಿಸ್ಟ್ ಹುದ್ದೆಗೆ ಭರ್ತಿಗೆ ಕ್ರಮ ವಹಿಸಿ:ಬಿ.ಜಿ.ಗೋವಿಂದಪ್ಪ

ಈ ಮೇಲ್ಕಂಡ ಚಹರೆಯುಳ್ಳ ಮಹಿಳೆಯ ಕುರಿತು ಮಾಹಿತಿ ಕಂಡು ಬಂದಲ್ಲಿ ಭರಮಸಾಗರ ಪೋಲಿಸ್ ಠಾಣೆಗೆ ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours