ಕಳೆದು ಎರಡು ವರ್ಷಗಳ ನನಗೆ ಸಹಕಾರ ನೀಡಿದ ಎಲ್ಲಾರಿಗೂ ಧನ್ಯವಾದಗಳು: ಎನ್‌.ರಘುಮೂರ್ತಿ

 

ಬೆಳ್ಳಕೆರೆ : ತಾಲೂಕಿನ ಸಾರ್ವಜನಿಕರ ಔದರ್ಯ ಇಡೀ ರಾಜ್ಯದಲ್ಲಿ ಅತ್ಯಂತ ಅನನ್ಯವಾದದಂತದ್ದು ಸರ್ಕಾರಿ ಅಧಿಕಾರಿ ಮತ್ತು ನೌಕರರುಗಳನ್ನು ನಡೆಸಿಕೊಳ್ಳುತ್ತಿರುವ ಪರಿ  ವಿಶಿಷ್ಟವಾದಂತದ್ದು ಎಂದು ಬಿಳ್ಕೋಡುಗೆ ಸ್ವೀಕರಿಸಿದ  ವರ್ಗಾವಣೆಗೊಂಡ  ತಹಶೀಲ್ದಾರ್  ಎನ್‌. ರಘುಮೂರ್ತಿ ಹೇಳಿದರು.

ಅವರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸಾರ್ವಜನಿಕರು ಏರ್ಪಡಿಸಿದಂತಹ ಬೀಳ್ಕೊಡುಗೆ ಗೌರವವನ್ನು ಸ್ವೀಕರಿಸಿ ಮಾತನಾಡಿ ಚಳ್ಳಕೆರೆ ತಾಲೂಕು ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಆಗಿದೆ.ಅತಿ ಕಡಿಮೆ ಪ್ರಮಾಣ ಮಳೆ ಬೀಳುವ ಪ್ರದೇಶವಾಗಿದ್ದು  ಇಲ್ಲಿನ  ವಿಶಿಷ್ಟ ಬುಡಕಟ್ಟು ಸಂಪ್ರದಾಯ ಹೊಂದಿರುವ ಜನರು ಹಾಗೂ ಮುಗ್ಧತೆ ಹೊಂದಿರುವಂತಹ ಜನರಿದ್ದರು ಕೂಡ ಹೃದಯ ವೈಶಾಲ್ಯತೆ ಪರೋಪಕಾರಿ ಮತ್ತು ಸ್ವಾಭಿಮಾನವನ್ನು ಹೊಂದಿದ್ದಾರೆ.

ಜನರು ಕಳೆದ ಎರಡು ವರ್ಷಗಳ ಕಾಲ ಸರ್ಕಾರಿ ಕೆಲಸಗಳನ್ನು ಮತ್ತು ಸೌಲಭ್ಯಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಲು  ಸಂಪೂರ್ಣ ಸಹಕಾರ ನೀಡಿದ್ದಾರೆ‌. ವಿಶೇಷವಾಗಿ ಹಿಂದಿನ ಜಿಲ್ಲಾಧಿಕಾರಿ  ಕವಿತಾ ಎಸ್.ಮನ್ನಿಕೇರಿ, ಪ್ರಸ್ತುತ ಡಿಸಿ  ದಿವ್ಯ ಪ್ರಭು ಮೇಡಂ,  ಸಚಿವರದಂತಹ ಶ್ರೀರಾಮುಲು ಸೇರಿದಂತೆ ಎಲ್ಲ ಚುನಾಯಿತ ಪ್ರತಿನಿಧಿಗಳು ಕೂಡ ಆತ್ಮೀಯವಾದ ಮತ್ತು ಪೂರ್ಣ ಪ್ರಮಾಣದ ಸಹಕಾರ ನೀಡಿದ್ದಾರೆ.

ಕಂದಾಯ ಇಲಾಖೆಗೆ ಸಂಬಂಧಪಟ್ಟಂತ ಎಲ್ಲ ಸರ್ಕಾರಿ ಸೌಲಭ್ಯಗಳನ್ನು 92 ಗ್ರಾಮಗಳಲ್ಲಿನ ಜನತೆಗೆ ಪೂರ್ಣ ಪ್ರಮಾಣದಲ್ಲಿ ಒದಗಿಸಲಾಗಿದೆ. ರೂ.1,000ಕ್ಕೂ ಮೇಲ್ಪಟ್ಟ ಪದವೀಧರರಿಗೆ ಆನ್ಲೈನ್ ತರಬೇತಿ ಒದಗಿಸಲಾಗುತ್ತಿದೆ ವಿವಿಧ ಸರ್ಕಾರಿ ಶಾಲೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನಾಗಿ ಪರಿವರ್ತಿಸಲಾಗಿದೆ. ಆಯ್ದ 10 ಶಾಲೆಗಳಿಗೆ ಐತಿಹಾಸಿಕ ಪರಿವರ್ತನೆಯ ಪೇಂಟಿಂಗ್ ಮಾಡಿಸಲಾಗಿದೆ. 40 ಸರ್ಕಾರಿ ಪ್ರೌಢಶಾಲೆ ಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ವಿಶೇಷ ಸಂಚಿಕೆಯ ಪಠ್ಯ ಒದಗಿಸಲಾಗುತ್ತಿದೆ ಕಂದಾಯ ಇಲಾಖೆಯ ಕೆಲಸಗಳಲ್ಲದೆ ಈ ಮೇಲ್ಕಂಡ ಎಲ್ಲಾ ಕೆಲಸಗಳನ್ನು ಕೂಡ ತಾಲೂಕಿನ ಜನತೆಯ ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಲಾಗಿದೆ ಇಡೀ ವೃತ್ತಿ ಜೀವನದಲ್ಲಿ ತಾಲೂಕಿನ ಜನತೆಯು ನೀಡಿದಂತ ಪ್ರೀತಿ ವಿಶ್ವಾಸ ಆತ್ಮೀಯತೆ ಮತ್ತು ಅಭಿಮಾನವನ್ನು ಮರೆಯಲು ಸಾಧ್ಯವಿಲ್ಲ .ಎಲ್ಲಾ ಕೆಲಸಗಳನ್ನು ನಿರ್ವಹಣೆ ಮಾಡಲು ಕಾಯಕಯೋಗಿ ಶ್ರೀ ತಿಪ್ಪೇರುದ್ರ ಸ್ವಾಮಿ ಅವರ ಅನುಗ್ರಹ ಕಾರಣವಾಯಿತು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಟೇಲ್ ಎಸ್ ತಿಪ್ಪೇಸ್ವಾಮಿ ಮಾತನಾಡಿ ತಹಶೀಲ್ದಾರ್ ಆಗಿ  ರಘುಮೂರ್ತಿ ಅವರು ಬಡವರ ಬಗ್ಗೆ ಅಸಾಹಕರ ಬಗ್ಗೆ ಮತ್ತು ಧ್ವನಿ ಇಲ್ಲದವರ ಬಗ್ಗೆ ಹೊಂದಿದಂತಹ ಪ್ರೀತಿ ಅನನ್ಯವಾದದ್ದು . ಕಳೆದ 50 ವರ್ಷದಿಂದ ನಾನು ಸರ್ಕಾರಿ ವ್ಯವಸ್ಥೆಯನ್ನು ಕಣ್ಣಾರೆ ಕಂಡಿದ್ದೇನೆ.. ಆದರೆ ಇಂತಹ ಅಧಿಕಾರಿಯ ಕಾಳಜಿ ಮನಸ್ಥಿತಿ ಮತ್ತು ತುಡಿತ ಬೇರೆ ಯಾವುದೇ ಅಧಿಕಾರಿಗಳನ್ನು ಕಾಣಲು ಸಾಧ್ಯವಿಲ್ಲ. ಎಲ್ಲ ಅಧಿಕಾರಿಗಳು ಕೂಡ ಇವರ ಕೆಲಸ ಪ್ರೇರಣೆಯಾಗಬೇಕು ಎಂದು ಹೇಳಿದರು .

ನಾಯಕನಹಟ್ಟಿ ತಿಪ್ಪ ರುದ್ರ ಸ್ವಾಮಿಯವರ ದೇವಸ್ಥಾನದ ಮಾಜಿ ಅಧ್ಯಕ್ಷರಾದಂತ ಎಂ.ಐ ಟಿ ಸ್ವಾಮಿ ಮಾತನಾಡಿ ಶ್ರೀ ರಘುಮೂರ್ತಿಯವರು ತಾಲೂಕಿನಲ್ಲಿ ಯಾವುದೇ ಗ್ರಾಮದಲ್ಲಿ ರೈತರು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂದರೆ ಅರ್ಧ ಗಂಟೆಯಲ್ಲಿ ಕೆಲಸ ಮಾಡಿ ಮುಗಿಸುತ್ತಿದ್ದರು ಎಂದು ಸ್ಮರಸಿದರು.

ಈ  ಸಂದರ್ಭದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲೆ ಶಿಕ್ಷಕರದ ತಿಪ್ಪೇಸ್ವಾಮಿ ಹೊನ್ನೂರ್,  ಗೋವಿಂದಪ್ಪ ಕುಬೇರ್ ರೆಡ್ಡಿ , ಪಾತಪ್ಪನ ಗುಡಿ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours