ಜನಾರ್ಧನ ರೆಡ್ಡಿ ವಿರುದ್ದ ಅಪ್ತ ಸ್ನೇಹಿತನನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ?

 

ಬಳ್ಳಾರಿ-ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ವಿರುದ್ದ ಭಾರತೀಯ ಜನತಾ ಪಾರ್ಟಿ ರೆಡ್ಡಿ ಆಪ್ತ ಸ್ನೇಹಿತ ಸಚಿವ ಬಿ. ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.ಜನಾರ್ದನರೆಡ್ಡಿ ಪಕ್ಷ ಸ್ಥಾಪನೆ ಮಾಡಿದ ಮೇಲೆ ಅವರ ಪಕ್ಷಕ್ಕೆ ಹೆಚ್ಚಿನದಾಗಿ ಬಿಜೆಪಿ ಕಾರ್ಯಕರ್ತರು, ಕೆಲ ಸಣ್ಣಪುಟ್ಟ ನಾಯಕರು ಸೇರುತ್ತಿದ್ದರೆ. ಇಷ್ಟರಿಂದಲೇ ಸಿಂಧನೂರು, ಕುಷ್ಟಿಗಿ, ಬಳ್ಳಾರಿ ನಗರ ಸೇರಿದಂತೆ ಕಲ್ಯಾಣ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಕಿರಿ ಕಿರಿ ಆಗುತ್ತಿದೆ. ಅದಕ್ಕಾಗಿ ರೆಡ್ಡಿ ಅವರನ್ನು ಕಟ್ಟಿಹಾಕಲು ದಿಟ್ಟ ಕ್ರಮ ಆಗಬೇಕು ಎಂದು ರಾಜ್ಯ ಮಟ್ಟದ ಮುಖಂಡರ ಕೆಲ ದಿನಗಳ ಹಿಂದಿನ ಸಭೆಯಲ್ಲಿ ಒತ್ತಾಯ ಕೇಳಿ ಬಂದಿದೆ.ಹಾಗಾಗಿ ಒಂದು ಸ್ವತಃ ಜನಾರ್ದನರೆಡ್ಡಿ ಅವರನ್ನೇ ಕಟ್ಟಿ ಹಾಕಲು ಮತ್ತು ಅವರು ಇತರೇ ಕ್ಷೇತ್ರಗಳ ಕಡೆ ಗಮನ ಹರಿಸದಂತೆ ಒತ್ತಡಕ್ಕೆ ಸಿಲುಕಿಸಲು.
ಮತ್ತೊಂದು ಸಚಿವ ಶ್ರೀರಾಮುಲು ಮತ್ತು ರೆಡ್ಡಿ ಅವರ ನಡುವೆ ಏನಾದರೂ ಒಳ ಒಪ್ಪಮನದ ಇದೆಯಾ ಅದನ್ನು ಓರೆಗಲ್ಲಿಗೆ ಹಚ್ಚುವ ನಿಟ್ಟಿನಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿರುವ ಗಾಲಿ ಜನಾರ್ಧನರೆಡ್ಡಿವಿರುದ್ದ ಸಚಿವ ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ಪಕ್ಷ ಗಂಭೀರ ಚಿಂತನೆ ನಡೆಸಿದೆ.
ಶ್ರೀರಾಮುಲು ಅವರು ಬಳ್ಳಾರಿ ಗ್ರಾಮೀಣ ಮತ್ತು ಸಂಡೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಬಯಸಿದ್ದರೂ, ಈಗಾಗಲೇ ತಾವು ಪಕ್ಷ ಹೇಳಿದಂತೆ ಯಾವ ಕ್ಷೇತ್ರದಲ್ಲಾದರೂ ಕಣಕ್ಕಿಯಬಹುದು ಎಂದು ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರೂ, ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ವಿರುದ್ದ ಬಾದಮಿ ಕ್ಷೇತ್ರದಿಂದ ಕಣಕ್ಕೆ ಇಳಿಸಿದಂತೆ.ಈ ಬಾರಿಯೂ ಬಳ್ಳಾರಿ ಗ್ರಾಮೀಣ ಇಲ್ಲ ಸಂಡೂರು ಕ್ಷೇತ್ರದ ಜೊತೆ, ಜನಾರ್ದನರೆಡ್ಡಿ ವಿರುದ್ದ ಗಂಗಾವತಿಯಲ್ಲಿ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

[t4b-ticker]

You May Also Like

More From Author

+ There are no comments

Add yours