ಉದ್ಯಮಶೀಲತೆ ತರಬೇತಿಯ ಸದುಪಯೋಗ ಪಡೆದುಕೊಳ್ಳಿ

 

ಚಿತ್ರದುರ್ಗ :ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ ತಿಳುವಳಿಕೆ ಒಂದು ಅತ್ಯುಮ ಕಾರ್ಯಕ್ರಮ ಅಗಿದ್ದು, ಭವಿಷ್ಯದಲ್ಲಿ ಈ ಕಾರ್ಯಕ್ರಮ ನಿಮಗೆ ಅನುಕೂಲವಾಗಲಿದೆ. ಹಾಗಾಗಿ ಈ ತರಬೇತಿಯಲ್ಲಿ ಆಸಕ್ತಿಯಿಂದ ಭಾಗವಹಿಸಿ ತರಬೇತಿಯ ಸದುಪಯೋಗ ಪಡಿಸಿಕೊಳ್ಳಿ ಎಂದು ಸಿಡಾಕ್ ಜಂಟಿ ನಿರ್ದೇಶಕ ಆರ್.ಪಿ.ಪಾಟೀಲ್ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬುಧವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ  ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಮತ್ತು ಸರ್ಕಾರಿ ಕಲಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಉದ್ಯಮಶೀಲತಾ ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಸ್ವಯಂ ಉದ್ಯಮ ಸ್ಥಾಪನೆ ಪರಿಹಾರವಾಗಬಹುದೆಂದು ಸರ್ಕಾರ ಈ ತರಹದ ತರಬೇತಿ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತದೆ. ಕರ್ನಾಟಕ ರಾಜ್ಯದಾದ್ಯಂತ ಉದ್ಯಮಶೀಲತೆಯನ್ನು ಅಭಿವೃದ್ದಿಪಡಿಸಲು ಸರ್ಕಾರದಿಂದ ಸ್ಥಾಪಿವಾಗಿರುವ ಸಿಡಾಕ್ (ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ), ಸಂಸ್ಥೆಯು “ಉದ್ಯಮಶೀಲತೆಯು ಹುಟ್ಟಿನಿಂದ ಮಾತ್ರ ಬರಬೇಕಾಗಿಲ್ಲ, ತರಬೇತಿಯ ಮೂಲಕ ಸಾಮಾನ್ಯ ಜನರಲ್ಲೂ ಉದ್ಯಮಶೀಲತೆಯನ್ನು ಉದ್ದೀಪನೆಗೊಳಿಸಬಹುದು” ಎಂಬ ತತ್ವದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಇದನ್ನೂ ಓದಿ:ಎರಡು ದಿನ ವಾಣಿವಿಲಾಸ ಸಾಗರ ನೀರು ಬರಲ್ಲ

ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಮತು ಜೀವನೋಪಾಯದ ಮಹತ್ವದ ಬಗ್ಗೆ ಹಾಗೂ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆಯುವಲ್ಲಿ ಎದುರಿಸಬೇಕಾದ ವಿವಿಧ ಹಂತಗಳ ಸಲಹೆಗಳನ್ನು ನೀಡುವ ಮೂಲಕ ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ನಾಗರಾಜ್, ರಾಜ್ಯಸಂಪನ್ಮೂಲ ವ್ಯಕ್ತಿ ಕಾಚಪುರ ರಂಗಪ್ಪ, ಸಿಡಾಕ್ ತರಬೇತುದಾರ ಪಿ.ವಿಜಯ್ ಕುಮಾರ್ ಹಾಗೂ ಶಿಬಿರಾರ್ಥಿಗಳು ಇದ್ದರು.

ಇದನ್ನೂ ಓದಿ:ವೈದ್ಯರ ನಿರ್ಲಕ್ಷ್ಯಕ್ಕೆ ಬಾರದ ಲೋಕಕ್ಕೆ ಪಯಣಿಸಿದ ತಾಯಿ ಮಗು

[t4b-ticker]

You May Also Like

More From Author

+ There are no comments

Add yours