ಶಾಸಕ ಟಿ.ರಘುಮೂರ್ತಿ ಗೆ ಯಾತ್ರೆಗಳ ಬಲ‌, ಕಮಲಕ್ಕೆ ಅಭ್ಯರ್ಥಿ ಚಿಂತೆ, ದಳಕ್ಕೆ ಲೀಡರ್ಸ್ ಕೊರತೆ

 

ಚಳ್ಳಕೆರೆ ಕ್ಷೇತ್ರದ ಚುನಾವಣಾ ರಣಕಣ

ಚಿತ್ರದುರ್ಗ ಜಿಲ್ಲೆಯ ಆಯಲ್ ಸಿಟಿ,ವಿಜ್ಞಾನ ನಗರಿ ಎಂಬ ಖ್ಯಾತಿಯನ್ನು ಹೊಂದಿರುವ  ಚಳ್ಳಕೆರೆ challakere  ವಿಧಾನಸಭಾ ಕ್ಷೇತ್ರದಲ್ಲಿ (ಮೀಸಲು) ಎರಡು ಅವಧಿಗಳಿಂದಲೂ ಕಾಂಗ್ರೆಸ್‌ ಶಾಸಕ ಟಿ.ರಘುಮೂರ್ತಿ  ಅವರ ಹಿಡಿತದಲ್ಲಿದ್ದು, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇವರ ಗೆಲುವಿನ ಓಟವನ್ನು ಕಟ್ಟಿ ಹಾಕಲು ಜೆಡಿಎಸ್‌ ಮತ್ತು ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿವೆ. (mla Raghumurthy )

2008 ರಲ್ಲಿ ಜೆಡಿಎಸ್ ಪಕ್ಷದಿಂದ ವಲಸೆ ಹೋಗಿ ಬಿಜೆಪಿಯಿಂದ ಮಾಜಿ ಸಚಿವ ತಿಪ್ಪೇಸ್ವಾಮಿ ಅವರು  ಬಿಜೆಪಿಯಿಂದ ಶಾಸಕರಾಗಿದ್ದರು. ನಂತರ ನಡೆದ  2013 ಮತ್ತು 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಸತತ ಎರಡು ಬಾರಿ ಗೆದ್ದು  ಚಳ್ಳಕೆರೆ ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿಲ್ಲ dಎಂಬ ಮಾತನ್ನು ಸುಳ್ಳಾಗಿಸಿ ಎರಡನೇ ಶಾಸಕ ಟಿ.ರಘುಮೂರ್ತಿ ಗೆದ್ದು  ನಂಬಿಕೆಗೆ ಬ್ರೇಕ್ ಹಾಕಿದರು.

ಚಳ್ಳಕೆರೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮುಂದೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಪೈಪೋಟಿ ನೀಡಿದರು ಅಷ್ಟೆ ಯಾರು ಸಹ ಗೆಲುವಿನ ಓಟಕ್ಕೆ ಕಡಿವಾಣ ಹಾಕಲಾಗಲಿಲ್ಲ. ಆದರೆ ಶಾಸಕ ಟಿ.ರಘುಮೂರ್ತಿ ಅವರು ಹ್ಯಾಟ್ರಿಕ್ ಗೆಲುವು ತಡೆಯಲು  ಬಿಜೆಪಿ ಮತ್ತು ಜೆಡಿಎಸ್ ತಂತ್ರ ರೂಪಿಸುತ್ತಿದೆ.

ಟಿ.ರಘುಮೂರ್ತಿ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. 2013ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಇವರನ್ನು 2018ರಲ್ಲಿಯೂ ಕ್ಷೇತ್ರದ ಮತದಾರರು ಬೆಂಬಲಿಸಿದರು. ಪಕ್ಷ ಸಂಘಟನೆ, ಜನಸಂಪರ್ಕದ ಕಾರಣಕ್ಕೆ ಇವರು ಕ್ಷೇತ್ರವನ್ನು ಗಾಢವಾಗಿ ಪ್ರಭಾವಿಸಿದ್ದಾರೆ. ಅಭಿವೃದ್ಧಿ ಮಂತ್ರವನ್ನು ಜಪಿಸುತ್ತ ಮತದಾರರ ಮನಗೆಲ್ಲುವ ಕಡೆ ನನ್ನ ಗಮನ ಎಂಬಂತೆ ಅವರ ಹಗಲಿರುಳು ತಂತ್ರಗಳನ್ನು ರೂಪಿಸುತ್ತಿದ್ದಾರೆ.‌ ವಿಶೇಷವಾಗಿ ಅವರು ಶಾಸಕರಾಗಿ ಆಯ್ಕೆಯಾದ ನಂತರ  ಕ್ಷೇತ್ರ ಶಾಂತಿ ಸೌಹಾರ್ದತೆ ಮನೆ ಮಾಡಿ ಎಲ್ಲಾ ಜನಾಂಗದವರನ್ನು ಸಮಾನವಾಗಿ ಜೊತೆಗೆ ಕರೆದುಕೊಂಡು ಹೋಗುತ್ತಿದ್ದು ಎಲ್ಲಾ ಜನಾಂಗದವರು ಪ್ರೀತಿಸುವ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ.. 

ಜೆಡಿಎಸ್ ಪಕ್ಷದಿಂದ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ರವೀಶ್ Ravish  ಈ ಬಾರಿ ಸಹ ಅವರೇ ಅಭ್ಯರ್ಥಿ ಆಗಿದ್ದು ಕ್ಷೇತ್ರದಲ್ಲಿ ಸಂಚರಿಸುತ್ತ ಪ್ರಚಾರ ಆರಂಭಿಸುತ್ತಿದ್ದಾರೆ. ಚಳ್ಳಕೆರೆ ಕ್ಷೇತ್ರ ಪಾರಂಪರಿಕ ವೋಟ್ ಬ್ಯಾಂಕ್ ಜೆಡಿಎಸ್ ಹೊಂದಿದ್ದರು ಸಹ ಗೆಲುವು ತಂದು ಕೊಡುವಷ್ಟು ವೋಟ್ ಬ್ಯಾಂಕ್ ಇಲ್ಲ. ಸ್ವ ಸಾಮಾರ್ಥ್ಯದಿಂದ ಅಭ್ಯರ್ಥಿ ಶ್ರಮಿಸಬೇಕು. ರವೀಶ್ ಮತ್ತು ಚಳ್ಳಕೆರೆ ಕ್ಷೇತ್ರ ಜೆಡಿಎಸ್ ಮುಖಂಡ ಪಿ.ಟಿ.ತಿಪ್ಪೇಸ್ವಾಮಿ ಜೊತೆ ಕ್ಷೇತ್ರ ಸುತ್ತುತ್ತಿದ್ದು ಬಿಜೆಪಿ ಮಾಜಿ ಶಾಸಕ ಸೋಮಶೇಖರ್ ಮಂಡಿಮಠ ಅವರ ಸೇರ್ಪಡೆ ಏನೋ ಆಗಿದ್ದಾರೆ. ಆದರೆ ಕಳೆದ ಬಾರಿ ಸಹ ಮಂಡಿಮಠ ಅವರು ದಳಕ್ಕೆ ಬೆಂಬಲ ನೀಡಿದ್ದರು ಎಂಬ ಮಾತು ಸಹ ಕ್ಷೇತ್ರದಲ್ಲಿ ಕೇಳುತ್ತಿದೆ.ಆದರೆ ಯಾವ ರೀತಿ ಶಕ್ತಿ ತುಂಬಲಿದೆ ಎಂಬುದು ಕಾದು ನೋಡಬೇಕಿದೆ. ಇನ್ನು ದಳಕ್ಕೆ  ತುರುವನೂರು ಹೋಬಳಿ ದೊಡ್ಡ ಹೋಬಳಿ ಮತ್ತು ಚಳ್ಳಕೆರೆ ನಗರದಲ್ಲಿ ಪಿಟಿ ತಿಪ್ಪೇಸ್ವಾಮಿ ಬಿಟ್ಟು ಇನ್ಯಾವಾ ಲೀಡರ್ ಸಹ ಕಾಣುತ್ತಿಲ್ಲ. ನಗರಸಭೆ ಕಾಂಗ್ರೆಸ್ ವಶದಲ್ಲಿದ್ದು ಅಲ್ಲಿ ಕಾಂಗ್ರೆಸ್ ಸದಸ್ಯರು ಹೆಚ್ಚು ಹಾಗಾಗಿ ಸಂಪ್ರದಾಯಿಕ ವೋಟ್ ಬಿಟ್ಟು ಉಳಿದ ವೋಟ್ ಬ್ಯಾಂಕ್ ಗಟ್ಟಿಗೊಳ್ಳಿಸುವ ನಾಯಕರಿಲ್ಲ.

ಬಿಜೆಪಿ ಪಕ್ಷದಿಂದ ಅರ್ಧ ಡಜನ್ ಗಿಂತ ಹೆಚ್ಚು ಅಭ್ಯರ್ಥಿ ಗಳ ಒಳೇಟಿನ ಭಯ 

ಬಿಜೆಪಿಯಲ್ಲಿ ಟಿಕೆಟ್‌ಗೆ ಹಲವು ಆಕಾಂಕ್ಷಿಗಳು ಸಜ್ಜಾಗಿದ್ದಾರೆ. ನಿವೃತ್ತ ಉಪ ವಿಭಾಗಾಧಿಕಾರಿ ಅನಿಲ್‌ಕುಮಾರ್‌, ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಜಯರಾಮ್‌, ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಪುತ್ರ ಕುಮಾರಸ್ವಾಮಿ, ಸಂಘ ಪರಿವಾರದ ಬಾಳೆಕಾಯಿ ರಾಮದಾಸ್‌, ಚಿತ್ರನಟ ಶಶಿಕುಮಾರ್‌ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇವರ ಜೊತೆಗೆ ಸದ್ಯ ಚಳ್ಳಕೆರೆಯಿಂದ ಕೆಲಸ ನಿರ್ವಹಿಸಿ ವರ್ಗಾವಣೆ ಆಗಿರುವ ಒಬ್ಬ ಅಧಿಕಾರಿ ಸಹ ರಾಜೀನಾಮೆ ನೀಡಿ ಬಿಜೆಪಿ ಟಿಕೆಟ್ ಗೆ ಕೆಲಸ ಆರಂಭಿಸಿದ್ದಾರೆ ಎಂಬ ಮಾತಿದ್ದು ಅವರ ನಡೆ ಏನು ಎಂಬುದು ಇನ್ನು ನಿಗೂಢವಾಗಿದೆ. ಆದರೆ ಬಿಜೆಪಿ ಆಕಾಂಕ್ಷಿಗಳ ಬಿಜೆಪಿ ಪಕ್ಷಕ್ಕೆ ಬಿಸಿ ತುಪ್ಪವಾಗಿದೆ . ಒಬ್ಬರಿಗೆ ಟಿಕೆಟ್ ನೀಡಿದರೆ ಉಳಿದವರಿಗೆ ಅಸಮಾಧಾನಕ್ಕೆ ಗುರಿಯಾಗಲಿದ್ದು ಒಳ ಹೊಡೆತ ಸಾಧ್ಯತೆ ಹೆಚ್ಚಿದೆ. 

ಕಾಂಗ್ರೆಸ್‌ಗೆ ಜೋಡೊ ಯಾತ್ರೆಯ ಬಲ

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಡೆದ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದುಹೋಗಿದ್ದು ಶಾಸಕ ಟಿ.ರಘುಮೂರ್ತಿ ಅವರ ಶಕ್ತಿಯನ್ನು ಇಮ್ಮಡಿಗೊಳಿಸಿದೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ  ಎರಡು ದಿನಗಳ  ಸಾಗಿತು .. ಈ   ಸಂದರ್ಭದಲ್ಲಿ  ಹಳ್ಳಿ, ನಗರ ಪ್ರದೇಶದ ಸಾವಿರಾರು ಜನರು ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿ, ಇಂದಿರಾ ಗಾಂಧಿ ಕೊಡುಗೆ ಸ್ಮರಿಸಿದರು.  ಈ ಯಾತ್ರೆಗೆ ಸಿಕ್ಕ ಜನಬೆಂಬಲ ಮತ್ತು ಶಾಸಕ ಟಿ.ರಘುಮೂರ್ತಿ ಅವರ ಅಭಿವೃದ್ಧಿ ಕಾರ್ಯ  ಚುನಾವಣೆಯಲ್ಲಿ ಅನುಕೂಲ ಆಗಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.

ಯಶಸ್ವಿಯಾದ ಪ್ರಜಾಧ್ವನಿ ಯಾತ್ರೆ: ಚಿತ್ರದುರ್ಗ ಜಿಲ್ಲೆಯ ಪ್ರಜಾಧ್ವನಿ ಯಾತ್ರೆಯಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕ ಟಿ.ರಘುಮೂರ್ತಿ  ವಿಶೇಷವಾದ ಆಸಕ್ತಿಯಿಂದ ಕಿಕ್ಕಿರಿದು ಚಳ್ಳಕೆರೆ ಪೂರ್ಣ ಕಾಂಗ್ರೆಸ್ಮಯವಾಗಿ ಮಾಡಿದರು. ಕಾರ್ಯಕರ್ತರ , ಮುಖಂಡರ ಉತ್ಸಾಹ ಮುಗಿಲು ಮುಟ್ಟಿತ್ತು.ಎಲ್ಲೆಡೆ ಶಾಸಕ ಟಿ.ರಘುಮೂರ್ತಿ , ಕೆಪಿಸಿಸಿ ಅಧ್ಯಕ್ಷರ ಗ್ರಾಂಡ್ ಎಂಟ್ರಿ ಹೂಮಳೆ ಹಾಕಿ ಸ್ವಾಗತಿಸಿದರು. ಒಂದು ರೀತಿ ಜನರು ರಘುಮೂರ್ತಿ ಅವರಿಗೆ ನಿಮ್ಮ ಜೊತೆ ನಾವು ಸದಾ ಇದ್ದೇವೆ ಎಂಬ  ಅಭಯ ನೀಡುವ ಸಂದೇಶ ರಾವನಿಸಿದರು. ಚಳ್ಳಕೆರೆಯಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬುದು ಪ್ರಜಾಧ್ವನಿ ಯಾತ್ರೆಯಲ್ಲಿ ಮತ್ತೆ ಸಾಬೀತಾಯಿತು..

ಒಟ್ಟಿನಲ್ಲಿ ಬಿಜೆಪಿ ಅಸಮಾಧಾನ , ಜೆಡಿಎಸ್ ತಂತ್ರ , ಶಾಸಕ ಟಿ.ರಘುಮೂರ್ತಿ ಅವರ ಚಾಣಕ್ಷ ನಡೆ ಮುಂದೆ ಯಾವ ರೀತಿ ಎದುರಿಸುತ್ತದೆ ಎಂಬದು ಬಿಜೆಪಿ ಅಭ್ಯರ್ಥಿ ಯಾರು ಎಂಬುದರ ಮೇಲೆ ರಣ ಕಣ ಸಿದ್ದವಾಗಲಿದೆ.

[t4b-ticker]

You May Also Like

More From Author

+ There are no comments

Add yours