ಸಂತ ಶ್ರೀ ಸೇವಾಲಾಲ್ ಆದರ್ಶ ಪಾಲಿಸಿ -ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.15:
ಸಂತ ಶ್ರೀ ಸೇವಾಲಾಲ್ ಆದರ್ಶಗಳು ನಮ್ಮ ಮುಂದಿವೆ, ಅವುಗಳನ್ನು ನಾವು ಪಾಲಿಸಬೇಕು. ಬಂಜಾರ (ಲಂಬಾಣಿ) ಸಮುದಾಯದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿ, ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸಂತ ಶ್ರೀ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಂತ ಶ್ರೀ ಸೇವಾಲಾಲ್ ಮಹಿಳೆ ಮತ್ತು ಬಾಲಕಿಯರನ್ನು ದೇವರಂತೆ ಕಾಣಬೇಕು ಎಂದು  ತಮ್ಮ ತತ್ವದಲ್ಲಿ ಹೇಳಿದ್ದಾರೆ. ಬಂಜಾರ ಸಮುದಾಯದವರು ಶ್ರಮಿಕರು ಹಾಗೂ ಪ್ರಕೃತಿ ಪ್ರಿಯರು, ಜಗತ್ತಿನ ಯಾವುದೇ ಮೂಲೆಗೂ ಹೋದರು ಬಂಜಾರ ಸಮುದಾಯದವರು ಏಕ ಭಾಷೆಯನ್ನು ಮಾತನಾಡುತ್ತಾರೆ. ಭಾಷೆ ನಿಂತ ನೀರು ಅಲ್ಲ, ಹೊಸ ಪದಸಂಪತ್ತು ಬೆಳೆಸಿಕೊಂಡು ಹೋಗುತ್ತದೆ. ಆಧುನೀಕರಣದ ಈ ಸಂದರ್ಭದಲ್ಲಿ ಬಂಜಾರ ಭಾಷಾ ಸಂಸ್ಕøತಿ ಉಳಿಸಿಕೊಳ್ಳಬೇಕು. ಬಂಜಾರ ಸಮುದಾಯದ ಸಮಾಜದ ಬೆಳವಣಿಗೆಗೆ ಶಿಕ್ಷಣ ಪಡೆಯುವುದು ಪ್ರಮುಖವಾಗಿದೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಆರ್. ವಿಶ್ವಸಾಗರ್ ಉಪನ್ಯಾಸ ನೀಡಿ, ವಿಶ್ವದಲ್ಲಿ 9 ಕೋಟಿ ಬಂಜಾರ ಸಮುದಾಯದ ಜನರಿದ್ದಾರೆ. ಭಾರತದಲ್ಲಿ 7 ಕೋಟಿ ಜನಸಂಖ್ಯೆ ಇದೆ. ಕರ್ನಾಟಕದಲ್ಲಿ 30 ರಿಂದ 40 ಲಕ್ಷ ಜನಸಂಖ್ಯೆ ಇದೆ.   ಭಾರತದ 22 ರಾಜ್ಯಗಳಲ್ಲಿ ಬಂಜಾರ ಸಮುದಾಯದವರು ವಾಸ ಮಾಡುತ್ತಿದ್ದಾರೆ. ಸಕಲ ಸಮುದಾಯಗಳ ಹಿತ ಬಯಸುವ ಬಂಜಾರ ಸಮುದಾಯ ಹಬ್ಬ ಹರಿದಿನಗಳಲ್ಲಿ ಎಲ್ಲ ಸಮುದಾಯದವರನ್ನೂ ನೆನಪಿಸಿಕೊಳ್ಳುತ್ತಾರೆ. ಗಿಡಗಂಟೆಗಳಿಗೆ ಶುಭ ಕೋರುತ್ತಾರೆ. ಬಂಜಾರ ಸಮುದಾಯ ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗಬೇಕಾಗಿದೆ. ಈ ಜನಾಂಗದಲ್ಲಿ ಮಹಿಳೆಯರು ಮಹಾ ಪರಾಕ್ರಮಿಗಳಾಗಿದ್ದಾರೆ  ಎಂದರು.
ಪಶುಸಂಗೋಪನೆ ಜೊತೆಗೆ ಮುತ್ತು ಬಂಗಾರಗಳನ್ನು ವ್ಯಾಪಾರ ಮಾಡುತ್ತಾ ರಾಜ ಮಹಾರಾಜರಿಗೆ ಯುದ್ಧ ಸಾಮಾಗ್ರಿಗಳನ್ನು ಬಂಜಾರರು ಮಾರಾಟ ಮಾಡುತ್ತಿದ್ದರು. ಬ್ರಿಟೀಷ್ ಆಡಳಿತದ ವಿರುದ್ಧವಾಗಿ ದೇಶಿ ರಾಜರ ಜೊತೆಗೆ ಒಂದಾಗಿ ಹೋರಾಡಿದ್ದರ ಫಲವಾಗಿ, ಬ್ರಿಟೀಷ್ ಆಡಳಿತ ಬಂಜಾರ ಸಮುದಾಯವನ್ನು ಅಪರಾಧಿ ಬುಡಕಟ್ಟು ಎಂದು ಪಟ್ಟಿಮಾಡಿದರು. ಲಂಬಾಣಿಯ ಜನಾಂಗದ ಸಂಪತ್ತು ಸಂಗೀತ ಹಾಗೂ ನೃತ್ಯ.  ಕಾಡು ವಾಸಿಗಳಾಗಿದ್ದ ಇವರು ಪ್ರಾಣಿಗಳಿಂದ ರಕ್ಷಣೆಗೋಸ್ಕರ ಗಾಜು ಹಾಗೂ ಬಣ್ಣಬಣ್ಣದ ಉಡುಪು ಧರಿಸುತ್ತಿದ್ದರು. ಬಂಜಾರ ಸಮುದಾಯದ ಆಡಳಿತ ವ್ಯವಸ್ಥೆ ಇಂದಿನ ಗ್ರಾಮೀಣ ಪಂಚಾಯತ್ ರಾಜ್ ವ್ಯವಸ್ಥೆ ಹೋಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ  ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ  ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಆರ್. ನಾಗೇಂದ್ರನಾಯ್ಕ,  ಗೌರವಾಧ್ಯಕ್ಷ ಜಿ.ರಾಜನಾಯ್ಕ,  ಕಾರ್ಯದರ್ಶಿ ಕೆ. ಮಂಜುನಾಥನಾಯ್ಕ, ನಿದೇರ್ಶಕ ನರೇನಹಳ್ಳಿ ಅರುಣ್ ಕುಮಾರ್, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನಾಗೇಂದ್ರನಾಯ್ಕ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷೀಬಾಯಿ, ಗ್ರಾಮ ಪಂಚಾಯಿತಿ ಸದಸ್ಯೆ ಸವಿತಾಬಾಯಿ ಉಮೇಶ್ ನಾಯ್ಕ, ಕುರುಬ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀರಾಮ್, ಭೋವಿ ಸಂಘದ ಜಿಲ್ಲಾ ಅಧ್ಯಕ್ಷ ತಿಪ್ಪೇಸ್ವಾಮಿ, ನಾಯಕ ಸಂಘದ ಪಾಪನಾಯಕ, ಬಂಜಾರ ಮಹಿಳಾ ಸಂಘದ ಜಿಲ್ಲಾ ಅಧ್ಯಕ್ಷೆ ವೀಣಾ, ಸಮುದಾಯದ ಮುಖಂಡರಾದ ಅನಂತಮೂರ್ತಿ, ಸುರೇಶ್ ನಾಯ್ಕ, ಪ್ರಕಾಶನಾಯ್ಕ, ಎನ್. ಹಾಲನಾಯ್ಕ, ಸಿ. ರಮೇಶ್, ವಸಂತ್‍ನಾಯ್ಕ, ನಿಂಗನಾಯ್ಕ, ರಮೇಶ್ ರಾವತ್ ಸೇರಿದಂತೆ ಮತ್ತಿತರರು ಇದ್ದರು.
ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು. ಜಿ.ವಿ. ಮಾರುತೇಶ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮುನ್ನ ಸಮುದಾಯ ಹಿರಿಯರು ಲಂಬಾಣಿ ಹಾಡು ಹಾಡಿದರು.

[t4b-ticker]

You May Also Like

More From Author

+ There are no comments

Add yours