ರೇಷ್ಮೆ ಬೆಳೆಗಾರರಿಗೆ ಸ್ಥಳೀಯ ಮಾರುಕಟ್ಟೆ ಸ್ಥಾಪಿಸಿ: ಎಂಎಲ್ಸಿ ಕೆ ಎಸ್ ನವೀನ್

 

*ನಮ್ಮ ಮೊಳಕಾಲ್ಮುರು ರೇಷ್ಮೆ ಸೀರೆ – ರೇಷ್ಮೆ ಬೆಳಗಾರರ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಪರಿಷತ್ ಸದಸ್ಯರಾದ ಶ್ರೀ ಕೆ ಎಸ್ ನವೀನ್*

ಕರ್ನಾಟಕ ವಿಧಾನ ಪರಿಷತ್ತು 147ನೇ ಅಧಿವೇಶನನದಲ್ಲಿ ದಿನಾಂಕ 22 ಸೆಪ್ಟೆಂಬರ್ 2022 ರಂದು “ರೇಷ್ಮೆ ಕೃಷಿ ವಿಧೇಯಕದ” ಮೇಲೆ ಮಾತನಾಡಿದ ಶಾಸಕ ಕೆ ಎಸ್ ನವೀನ್* ರವರು,ಮಧ್ಯ ಕರ್ನಾಟಕದ ಭಾಗದಲ್ಲೂ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದು, ಮೊಳಕಾಲ್ಮೂರು ಸುಪ್ರಸಿದ್ದ ರೇಷ್ಮೆ ಸೀರೆಗಳು ಜನ ಜನಿತವಾಗಿವೆ. ಆದರೆ ನಮ್ಮ ಭಾಗದ ರೇಷ್ಮೆ ಉತ್ಪನಕ್ಕೆ ಸೂಕ್ತವಾದ ಸ್ಥಳೀಯ ಮಾರುಕಟ್ಟೆಯ ಕೊರೆತೆಯಿಂದಾಗಿ, ದೂರದ ರಾಮನಗರ ಜಿಲ್ಲೆಯ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಇದರ ನಡುವೆ ಮಧ್ಯವರ್ತಿಗಳು ನಮ್ಮ ರೈತರಿಂದ ಕಡಿಮೆ ದರಕ್ಕೆ ರೇಷ್ಮೆ ಖರೀದಿಸಿ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡಿ,ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

ನಿನ್ನೆ ಮಂಡನೆಯಾಗಿರು “ರೇಷ್ಮೆ ಕೃಷಿ ಮಾಸೂದೆ”ಯಲ್ಲಿ ರೈತರಿಗೆ ನಮ್ಮ .ಚಿತ್ರದುರ್ಗದ ಭಾಗದಲ್ಲೇ ಸ್ಥಳೀಯವಾಗಿಯೇ ಮೌಲ್ಯವರ್ಧನೆ, ಸಂಗ್ರಹಯೋಗ್ಯ ದಸ್ತಾನು ಕೊಠಡಿ ಹಾಗೂ ಮಾರುಕಟ್ಟೆಯ ವ್ಯವಸ್ಥೆಯನ್ನು ಸರ್ಕಾರ ರೈತರಿಗೆ ಸಹಾಯಕವಾಗುವಂತೆ ನಿರ್ಮಿಸಿಕೊಡಲು ಪೂರಕ ವ್ಯವಸ್ಥೆಯನ್ನ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು

[t4b-ticker]

You May Also Like

More From Author

+ There are no comments

Add yours