ಅಂತರ ಗಂಗೆಯಲ್ಲಿ ಮೈ ಮರೆತು ಪೊದೆ, ಬೆಟ್ಟದಲ್ಲಿ ಕಿಸ್, ರೋಮ್ಯಾನ್ಸ್ ಮಾಡುತ್ತಿರುವ ಪ್ರೇಮಿಗಳು

 

ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಯುವ ಪ್ರೇಮಿಗಳು ದೇವಸ್ಥಾನ ಎಂಬುದನ್ನು ಮರೆತು  ಮೈಮರೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ಇದಕ್ಕೆ ಕಡಿವಾಣ ಹಾಕುವಂತೆ   ಒಕ್ಕೊರಲಿನಿಂದ  ಗ್ರಾಮಸ್ಥರಿಂದ  ಒತ್ತಾಯ ಕೇಳಿ ಬರುತ್ತಿದೆ. ಈ ಘಟನೆ ಕೋಲಾರ ಜಿಲ್ಲೆಯ ಅಂತರಗಂಗೆಯಲ್ಲಿ ನಡೆದಿದೆ.

ಕೋಲಾರ: ಕಾಲೇಜಿಗೆ ಬಂಕ್ ಹೊಡೆದು ಪಾರ್ಕ್, ಸಿನಿಮಾ ಅಂತ ಸುತ್ತುತ್ತಿರುವ ಪ್ರೇಮಿಗಳ ಪಾಲಿಗೆ ಕೋಲಾರದ ಅಂತರಗಂಗೆ ತಪ್ಪಲು ಹಾಟ್ ಸ್ಪಾಟ್ ಆಗಿದೆ.

ಅಂತರಗಂಗೆ ತಪ್ಪಲಿನಲ್ಲಿ ಸಣ್ಣ-ಸಣ್ಣ ಜಲಪಾತಗಳನ್ನು ನೋಡಲು ಬರುವ ಪ್ರೇಮಿಗಳು ನೀರಿನಲ್ಲಿ ಆಟವಾಡಿ ನಂತರ ಅದೇ ಸ್ಥಳದಲ್ಲಿ ಮೈಮರೆಯುತ್ತಿದ್ದಾರೆ.

ಇಲ್ಲಿನ ಗಿಡ ಮರ, ಪೊದೆ, ಬೆಟ್ಟ ಗುಡ್ಡಗಳ ಮಧ್ಯೆ ಯುವಕ ಯುವತಿಯರು ಪರಸ್ಪರ ಚುಂಬಿಸುವ ಮೂಲಕ‌ ಅಪ್ಪಿ ಒಬ್ಬರಿಗೊಬ್ಬರು  ಮುದ್ದಾಡುವ ದೃಶ್ಯಗಳು ಕಂಡು ಬರುತ್ತಿದ್ದು  ಪ್ರವಾಸಿಗರಿಗೆ ಈ ದೃಶ್ಯಗಳು ಮುಜುಗರವನ್ನುಂಟು ಮಾಡುತ್ತಿವೆ.

ಅಷ್ಟೊಂದು ಸುರಕ್ಷಿತವಲ್ಲದ ಅಂತರಗಂಗೆ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಪ್ರೇಮಿಗಳ ಲವ್ವಿ ಡವ್ವಿ ಪ್ರವಾಸಿಗರಿಗೆ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಇದಕ್ಕೆಲ್ಲ  ಸಂಬಂಧಪಟ್ಟ ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯವರು ಕಡಿವಾಣ ಹಾಕಬೇಕಿದೆ. ಸುರಕ್ಷಿತವಲ್ಲದ ಸ್ಥಳಗಳಲ್ಲಿ ಯುವ ಪ್ರೇಮಿಗಳ ಆಟಕ್ಕೆ ಬ್ರೇಕ್ ಹಾಕುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

[t4b-ticker]

You May Also Like

More From Author

+ There are no comments

Add yours