ರೈಲಿನಲ್ಲಿ ಮಹಿಳೆಗೆ ಹೆರಿಗೆ ನೋವು, ಮೆಡಿಕಲ್ ವಿದ್ಯಾರ್ಥಿನಿ ಮಾಡಿದ ಸಾಹಸವೇನು!

 

ಸಿಕಂದರಾಬಾದ್:   ಈ ಮಗು ಈಕೆಯದ್ದಲ್ಲ. ಈ ಯುವತಿಯ ಹೆಸರು ಸ್ವಾತಿ ರೆಡ್ಡಿ. ಆದರೆ, ಈ ಮಗುವನ್ನು ಹೀಗೆ ಮಡಿಲಲ್ಲಿಟ್ಟು ಈ ಸ್ವಾತಿ ಖುಷಿ ಪಟ್ಟಿರುವುದಕ್ಕೆ ಒಂದು ಕಾರಣ ಇದೆ.

ಸಿಕಂದರಾಬಾದ್ ದುರಾಂಟೋ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈಕೆಗೆ ಬೆಳಗ್ಗೆ 3:30ರ ಹೊತ್ತಿಗೆ ಓರ್ವ ಮಹಿಳೆಯ ಪ್ರಸವ ವೇದನೆಯ ನೋವು ಕೇಳಿಸುತ್ತೆ. ಕೊನೆ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾದ ಈಕೆ ಹಿಂದು-ಮುಂದು ನೋಡದೇ ನೆರವಿಗೆ ಧಾವಿಸುತ್ತಾಳೆ. ಆವರೆಗೆ ಒಂಟಿಯಾಗಿ ಒಂದೂ ಹೆರಿಗೆಯನ್ನು ಮಾಡಿರದಿದ್ದ ಸ್ವಾತಿಗೆ ಇದೊಂದು ಸವಾಲು. ಜೊತೆಗೇ ಪ್ರಸವಕ್ಕೆ ಇರಬೇಕಾದ ವೈದ್ಯಕೀಯ ಸಲಕರಣೆಗಳೂ ಇಲ್ಲ. ಅನುಭವವೂ ಇಲ್ಲ. ಆದರೆ ಧೈರ್ಯ ತಂದುಕೊಂಡು ಈಕೆ ತಜ್ಞ ವೈದ್ಯೆಯಂತೆ ನಡೆದುಕೊಳ್ಳುತ್ತಾಳೆ. ಹೀಗೆ ಪ್ರಸವ ವೇದನೆಯ 45 ನಿಮಿಷಗಳ ಬಳಿಕ ಮಗುವಿನ ಜನನವಾಗುತ್ತದೆ. ಖುಷಿಯಿಂದ ಸ್ವಾತಿ ಮಗುವನ್ನು ತನ್ನ ಮಡಿಲಲ್ಲಿಟ್ಟು ಸಂಭ್ರಮಿಸುತ್ತಾಳೆ. ಹೆತ್ತವರಂತೂ ಮಗುವಿಗೆ ಸ್ವಾತಿ ಎಂದೇ ಹೆಸರಿಡುತ್ತಾರೆ.

ಸ್ವಾತಿಗೆ ಕೃತಜ್ಞತೆಗಳು. ನಿಮ್ಮಂತವರ ಸಂಖ್ಯೆ ಅಸಂಖ್ಯಾತವಾಗಲಿ.

ಏ ಕೆ ಕುಕ್ಕಿಲ A K Kukkila Akk

[t4b-ticker]

You May Also Like

More From Author

+ There are no comments

Add yours