ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

 

ಚಿತ್ರದುರ್ಗ: ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಇಚ್ಛಾಶಕ್ತಿ ಸಾರ್ವಜನಿಕರಲ್ಲಿ ಬರಬೇಕು ಆಗ ಮಾತ್ರ ಸದೃಢ ದೇಶವನ್ನು ನಿರ್ಮಿಸಲು ಸಾಧ್ಯ. ಪ್ರಾಚೀನ ಕಾಲದಲ್ಲಿ ದೇಶೀಯ ಕ್ರೀಡೆಗಳಿಗೆ ಮನ್ನಣೆಯಿತ್ತು. ಹಾಗಾಗಿ ಅಂದು ಜನಸಮುದಾಯ ಯಾವುದೇ ಕಾಯಿಲೆಗಳಿಂದ ನರಳದೇ ಆರೋಗ್ಯವಂತರಾಗಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನದ ಜೊತೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳವಂತೆ ಶಾಸಕ.ಕೆ.ಸಿ.ವೀರೇಂದ್ರ ಪಪ್ಪಿ (k.c.veerendra puppy ) ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಸರ್ಕರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಬುಧವಾರ ನಗರದ ಸರ್ಕಾರಿ ಕಲಾ ಹಾಗೂ ವಿಜ್ಞಾನ ಕಾಲೇಜು ಮೈದಾನದಲ್ಲಿ, ಆಯೋಜಿಸಲಾಗಿದ್ದ ಅಂತರ್ ಕಾಲೇಜುಗಳ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಸ್ಥಳೀಯ ಸಂಘ ಸಂಸ್ಥೆಗಳು ಕ್ರೀಡಾ ಕೂಟಗಳನ್ನು ಅಯೋಜಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು. ಸರ್ಕಾರ ಪೋಲಿಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾ ಖೋಟಾದಡಿ ಶೇಕಡ 2% ರಷ್ಟು ಮೀಸಲು ನೀಡಿದೆ. ಕ್ರೀಡಾಪಟುಗಳು ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯಿಂದ ಆರೋಗ್ಯ ಮತ್ತು ಆಯುಸ್ಸು ವೃದ್ಧಿಯಾಗುತ್ತದೆ ಎಂದು ಹೇಳಿದರು.

ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಗುಡ್ಡದೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಪಕರುಗಳಾದ ಡಾ.ವೆಂಕಟೇಶ್, ಎಂ.ಜೆ.ಸಾಧಿಕ್, .ಬಿ.ಹೆಚ್.ಕುಮಾರಸ್ವಾಮಿ, ಡಾ.ಸಿದ್ದಪ್ಪ.ಡಿ.ಓ, .ಮಂಜುನಾಥ.ಬಿ, ಡಾ.ಚನ್ನಕೇಶವ.ಸಿ, ಕ್ರೀಡಾ ಸಂಚಾಲಕ ಶ್ರೀ.ಶಿವಪ್ರಸಾದ್.ಆರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ.ಹೆಚ್, ಶಕುಂತಲ.ಹೆಚ್, ಡಾ.ಶಿವಣ್ಣ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳಿಂದ ಆಗಮಿಸಿದ ಕ್ರೀಡಾಪಟುಗಳು ಇದ್ದರು.

[t4b-ticker]

You May Also Like

More From Author

+ There are no comments

Add yours