ಇನೋವಾ ಕಾರಿನಲ್ಲಿ ದಾಖಲೆ‌ ಇಲ್ಲದ 8 ಕೋಟಿ ಹಣ, ಜಪ್ತಿ ಮಾಡಿದ ಹೊಳಲ್ಕೆರೆ ಪೋಲಿಸರು

 

chitradurga:ಯಾವುದೇ  ದಾಖಲೆ ಇಲ್ಲದೆ ಚಿತ್ರದುರ್ಗದಿಂದ ಹೊಳಲ್ಕೆರೆ ಮಾರ್ಗವಾಗಿ  ಶಿವಮೊಗ್ಗಕ್ಕೆ  ಸಾಗಿಸುತ್ತಿದ್ದ  ಬರೋಬ್ಬರಿ 8 ಕೋಟಿ ಮೊತ್ತದ  ಹಣವನ್ನು   ಹೊಳಲ್ಕೆರೆ ಪೊಲೀಸರು (Holalkere Police) ಜಪ್ತಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ  ಮಲ್ಲಾಡಿಹಳ್ಳಿ ಬಳಿ ಇನೋವಾ ಕಾರಿನಲ್ಲಿ ತೆರಳುತಿದ್ದ ಚಾಲಕ ಸಚಿನ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾರಿನಲ್ಲಿ ತಂಬಾಕು ಚೀಲಗಳಲ್ಲಿ ತುಂಬಲಾಗಿದ್ದ 8 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.

ಈ ಹಣ ಚಿತ್ರದುರ್ಗದ ಅಡಿಕೆ ವರ್ತಕರಿಗೆ ಸೇರಿದ್ದು ಎಂಬ ಅನುಮಾನವಿದ್ದು, ಖಚಿತ ಮಾಹಿತಿಗಾಗಿ ಆದಾಯ ತೆರಿಗೆ ಅಧಿಕಾರಿಗಳಿಗೆ ಈ ಮಾಹಿತಿಯನ್ನು ನೀಡಲಾಗಿದೆ. ವಿಚಾರಣೆ ಬಳಿಕ ಈ ಹಣ ಯಾರಿಗೆ ಸೇರಿದ್ದು ಹಾಗೂ ಯಾವ ಕಾರಣಕ್ಕೆ ಸಾಗಿಸಲಾಗುತ್ತಿತ್ತು ಎಂಬುದು ತಿಳಿಯಲಿದೆ ಎಂದು ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಾನೂನು ಅಭಿರಕ್ಷಕ ಕಚೇರಿಯ ವಿವಿಧ ಹುದ್ದೆಗಳಿಗೆ ಉದ್ಯೋಗಕ್ಕೆ ಅರ್ಜಿ ಆಹ್ವಾನ

ಜಪ್ತಿಯಾಗಿರುವ ಭಾರೀ ಮೊತ್ತದ ಹಣ ಎಣಿಕೆ ಕಾರ್ಯವನ್ನು ಹೊಳಲ್ಕೆರೆ ಪೊಲೀಸರು ಕೈಗೊಂಡಿದ್ದಾರೆ. ಈ ಪ್ರಕರಣ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

[t4b-ticker]

You May Also Like

More From Author

+ There are no comments

Add yours