ಜನರ ಸಮಸ್ಯೆಗಳಿಗೆ ಗ್ರಾಮ ವಾಸ್ತವ್ಯದಲ್ಲಿ ಪರಿಹಾರ :ಶಾಸಕ‌ ಟಿ.ರಘುಮೂರ್ತಿ

 

ಚಳ್ಳಕೆರೆ-15: (challakere )ಸರ್ಕಾರಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ರೈತರ ಬದುಕು ಬಿಟ್ಟು ಕಚೇರಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿ‌ನಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ರೂಪಿಸಲಾಗಿದೆ ಜನರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು ತಾಲ್ಲೂಕಿನ ದೊಡ್ಡೇರಿ ಗ್ರಾಮದ ಸರ್ಕಾರಿ‌ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೈತರು, ಸಾರ್ವಜನಿಕರು ಗ್ರಾಮದಲ್ಲಿನ ಸಮಸ್ಯೆಗಳನ್ನು challakere ನಿವೇದಿಸಿಕೊಳ್ಳಲು ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳನ್ನು ಒಳಗೊಂಡಂತೆ ನಡೆಯುವ ಸಭೆಯಾಗಿದೆ ಜನರು ರಸ್ತೆ, ಪಹಣಿ, ಪೋಡಿ, ನೀರು, ನಿವೇಶನವೂ ಸೇರಿದಂತೆ ಸಮಸ್ಯೆಗಳ ಬಗ್ಗೆ ಜನರು ಅಧಿಕಾರಿಗಳ ಗಮನಕ್ಕೆ ತಂದು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಜಿಲ್ಲಾಧಿಕಾರಿಗಳು ಗ್ರಾಮದ challakere ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ. ಈ ಬಗ್ಗೆ ಕಳೆದ ಒಂದುವಾರದಿಂದ ಕಂದಾಯ ಇಲಾಖಾಧಿಕಾರಿಗಳು ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರಿಗೆ ಪರಿಹಾರನ್ನು ಕಂಡುಕೊಳ್ಳುವ ಕೆಲಸ ಮಾಡಿದ್ದಾರೆ ಎಂದರು. mla Ragumurthy

 

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ತಾಲ್ಲೂಕಿ‌ ಸುಮಾರು35 ಗ್ರಾಮಗಳನ್ನು ಸಮಸ್ಯೆ ಮುಕ್ತ ಮಾಡಲಾಗಿದೆ. ಜನರು ಹಲವಾರು ಸಮಸ್ಯೆಗಳನ್ನು ಹೊತ್ತು ನಗರಕ್ಕೆ ಅಲೆಯುವುದನ್ನು ತಪ್ಪಿಸಲಾಗಿದೆ. ಜನರಲ್ಲೂ ಹಲವಾರು ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲಾಗಿದೆ. ಶಾಸಕರ‌ ಸಮ್ಮುಖದಲ್ಲೇ ಹಲವಾರು ಸಮಸ್ಯೆಗಳನ್ನು ಆಲಿಸಲಾಗಿದೆ. ತಾಲ್ಲೂಕಿನ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು ಜನರು ಸ್ಥಳೀಯ ಸಮಸ್ಯೆಗಳನ್ನು ತಿಳಿಸಿ ಎಂದರು. Tehsildar Ragumurthy

ಗ್ರಾಮಕ್ಕೆ ಬಂದ ತಕ್ಷಣ  ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಸಕರನ್ನು ಅಲಂಕಾರಿಕ ಜೊಡೆತ್ತಿನ‌ಬಂಡಿಯಲ್ಲಿ ಪೂರ್ಣಕುಂಭದ ಮೆರವಣಿಗೆ ನಡೆಸಲಾಯಿತು.‌ ಗ್ರಾಮವನ್ನು ಬಾಳೆಕಂದು, ಹೂಗಳಿಂದ‌ ಅಲಂಕರಿಸಿ ಶಾಸಕರು ಮೆರವಣಿಗೆಯಲ್ಲಿ‌ ಸಾಗುವ ದಾರಿಯುದ್ದಕ್ಕೂ ಜೆಸಿಬಿಯಿಂದ ಹೂಮಳೆಗೈದರು. challakere

ಬಿಇಒ‌ ಸುರೇಶ್, ಬೆಸ್ಕಾಂ ರಾಜು,‌ ಸಿಪಿಐ ಉಮೇಶ್, ಸೇರಿದಂತೆ ಹಲವಾರು ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ‌ ಪಂಚಾಯತಿ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು, ಗ್ರಾ.ಪಂ ಮುಖಂಡರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours