ನಾಳೆ ತಾಲೂಕಿನ ವಿವಿಧ ಕಡೆಗಳಲ್ಲಿ ಪವರ್ ಕಟ್

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಅಕ್ಟೋಬರ್ 15:
ಚಿತ್ರದುರ್ಗದ 220/66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 66/11 ಕೆ.ವಿ. ವಿತರಣಾ ಕೇಂದ್ರಗಳಾದ ಚಿತ್ರದುರ್ಗ, ಭರಮಸಾಗರ, ವಿಜಾಪುರ, ಹಿರೇಗುಂಟನೂರು, ಸಿರಿಗೆರೆ, ಹೆಚ್.ಡಿ.ಪುರ, ಪಂಡರಹಳ್ಳಿ, ಚಿತ್ರಹಳ್ಳಿ ವಿವಿ ಕೇಂದ್ರಗಳಿಂದ ಸರಬರಾಜಾಗುವ 11 ಕೆವಿ ಮಾರ್ಗಗಳಲ್ಲಿ ಅ. 16 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು : ಚಿತ್ರದುರ್ಗ ಪಟ್ಟಣದ ಎಲ್ಲಾ ಪ್ರದೇಶಗಳು, ಭರಮಸಾಗರ, ವಿಜಾಪುರ, ಹಿರೇಗುಂಟನೂರು, ಸಿರಿಗೆರೆ, ಹೆಚ್.ಡಿ.ಪರ, ಪಂಡರಹಳ್ಳಿ, ಚಿತ್ರಹಳ್ಳಿ ವ್ಯಾಪ್ತಿಯಲ್ಲಿ ಬರುವ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೀಗಾಗಿ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
============

[t4b-ticker]

You May Also Like

More From Author

+ There are no comments

Add yours