ಸ್ಕಿಲ್ ಇಂಡಿಯಾ ಕರ್ನಾಟಕ ಸ್ಪರ್ಧೆ: ನೋಂದಣಿಗೆ ಮನವಿ

 

News19kannada. Desk
ಚಿತ್ರದುರ್ಗ(chitradurga)
ವಿಶ್ವ ಕೌಶಲ್ಯ ಸ್ಪರ್ಧೆ-2024ರಲ್ಲಿ ಫ್ರಾನ್ಸ್ ದೇಶದ ಲಿಯೋನ್‍ನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವ ತಯಾರಿಗಾಗಿ  ಕರ್ನಾಟಕ  ಕೌಶಲ್ಯಾಭಿವೃದ್ಧಿ ನಿಗಮವು (ಕೆ.ಎಸ್.ಡಿ.ಸಿ) “ಸ್ಕಿಲ್ ಇಂಡಿಯಾ ಕರ್ನಾಟಕ 2024” ವನ್ನು ಪ್ರಾರಂಭಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ನೋಂದಣಿ ಮಾಡಿಕೊಳ್ಳಲು ಕೋರಿದೆ.
ಪ್ರಾಥಮಿಕ ಹಂತ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದವರಿಗೆ ನಿರಂತರ ತರಬೇತಿಯನ್ನು ಒದಗಿಸಿ ಪ್ರಾದೇಶಿಕ ಮತ್ತು ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸಲು ಹಾಗೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಲು ವೇದಿಕೆಯನ್ನು ಕಲ್ಪಿಸಿಕೊಡುವುದು ಈ ಸ್ಪರ್ಧೆಯ ಪ್ರಮುಖ ಗುರಿಯಾಗಿದೆ. ಈ ಸ್ಪರ್ಧೆಯಲ್ಲಿ 57 ಕೌಶಲ್ಯಗಳ ಪಟ್ಟಿಯಿದ್ದು ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಆಸಕ್ತಿಯುಳ್ಳವರು  www.skillindiadigital.gov.in    ಈ ವೆಬ್‍ಸೈಟ್‍ನ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು

ಇದನ್ನೂ ಓದಿ: ವಿಕಲಚೇತನರ ಬಸ್‍ಪಾಸ್ ನವೀಕರಣಕ್ಕೆ ಎರಡು ತಿಂಗಳು ಅವಧಿ ವಿಸ್ತರಣೆ

2002ರ ನವೆಂಬರ್ 1ರ ನಂತರ ಜನಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಛೇರಿ ದೂರವಾಣಿ ಸಂಖ್ಯೆ 08194-234050 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ಗೋಪಾಲ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=========

[t4b-ticker]

You May Also Like

More From Author

+ There are no comments

Add yours