ದುರ್ಗದ ಅಖಾಡಕ್ಕೆ ಎಸ್ಕೆಬಿ ಫ್ಯಾಮಿಲಿ, ಪಕ್ಷೇತರಾಗಿ ಸೌಭಾಗ್ಯ ಬಸವರಾಜನ್ ಕಣಕ್ಕೆ

 

ಚಿತ್ರದುರ್ಗ: ನಮ್ಮ ಕುಟುಂಬದ ಮೇಲಿನ ನಂಬಿಕೆಯಿಂದ ನಮ್ಮ  ಅಭಿಮಾನಿಗಳು, ಮುಖಂಡರು ಒತ್ತಾಯದಿಂದ ನಾವು ಪಕ್ಷೇತರರಾಗಿ   ಸ್ಪರ್ಧೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದ್ದಾರೆ. (S.K.Basavarajan).

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ (chitradurga ) ಮಾತನಾಡಿದ ಇವರು ನಮ್ಮ ಹಿತೈಷಿಗಳು, ಕಾರ್ಯಕರ್ತರು , ಅಭಿಮಾನಿಗಳು ಸೌಭಾಗ್ಯ ಬಸವರಾಜನ್ ಅವರು ಎಂದು ಸೋಲು ಕಂಡಿಲ್ಲ. ಗ್ರಾಮ ಪಂಚಾಯತಿಯಿಂದ ಹಿಡಿದು ಎಂದು ನಾನು ಸೋಲು ಕಂಡಿಲ್ಲ. ಹಾಗಾಗಿ ನನ್ನ ಮೇಲೆ ವಿಶ್ವಾಸ ಹೆಚ್ಚು  ಇದೆ. ಕಳೆದ ಬಾರಿ ಸಹ ಸ್ವರ್ಧೆ ಮಾಡಿಲ್ಲ ನೀವು. ನೀವು ಸ್ಪರ್ಧೆ ಮಾಡಿಲ್ಲ ಎಂದರೆ ನಾವು ಯಾರ ಮನೆ ಬಾಗಿಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದು ನಮ್ಮ ಕಾರ್ಯಕರ್ತರ ನಿರ್ಧಾರಕ್ಕೆ ನಾವು ಬದ್ದವಾಗಿ ಸ್ಪರ್ಧೆಗೆ ಸಿದ್ದ ಎಂದಿದ್ದಾರೆ..(soubaghya Basavarajan)
ಮೂರು ಬಾರಿ ಜಿಲ್ಲಾ ಪಂಚಾಯತ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ಮಗಳು ಅಕ್ಕ ಎಂದು ಜಿಲ್ಲೆಯ ಜನ ಪ್ರೀತಿಸುತ್ತಾರೆ. ಎಂತಹ ಪರಿಸ್ಥಿತಿ ಬಂದರೂ ಸಹ ಚಿತ್ರದುರ್ಗ ಬಿಟ್ಟು ಹೋಗಲಿಲ್ಲ. ಅವರ ಋಣ ತೀರಿಸಲು ನಾನು ಸ್ಪರ್ಧೆ ಮಾಡಬೇಕು.  ಎಲ್ಲಾ ತಾಯಂದಿರು ನೀವು ಸ್ಪರ್ಧೆ ಮಾಡಬೇಕು.  ಎಲ್ಲಾರ ಮನೆಯಲ್ಲಿ ಹೆಣ್ಣು ಮಕ್ಕಳ ಸ್ಪರ್ಧೆಗೆ ಬೆಂಬಲ‌ ನೀಡಲ್ಲ. ಆದರೆ ನನ್ನ ಪತಿ ಬಸಣ್ಣ ಅವರು ನನಗೆ ಸ್ಪರ್ಧೆಗೆ ಬೆಂಬಲ ನೀಡಿದ್ದು ನನಗೆ ಸಂತಸ ತಂದಿದ್ದಾರೆ. ಸ್ವಾಮೀಜಿಗಳು, ಅಕ್ಕಂದಿರು, ಅಣ್ಣಂದಿರು,ಸಮಾಜದ ಮುಖಂಡರು, ಇತರೆ ಸಮಜದ ಮುಖಂಡರು ಸಹ ನನಗೆ ಬೆಂಬಲ ವ್ಯಕ್ತಪಡಿಸಿದ್ದು ನನಗೆ ಶಕ್ತಿ ತಂದಿದೆ ಎಂದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ  ನಾನು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗೆ ಅರ್ಜಿ ಸಲ್ಲಿಸಿ ವರಿಷ್ಠರನ್ನು ಸಹ ಭೇಟಿ ಮಾಡಿ ಪ್ರಯತ್ನ ಮಾಡಿದ್ದೇ ಆದರೆ ಟಿಕೆಟ್ ನೀಡಲಿಲ್ಲ.ಆದ್ದರಿಂದ ನಮ್ಮ ಅಭಿಮಾನಿ , ಕಾರ್ಯಕರ್ತರ ಸಭೆ ಕರೆದಾಗ ನೀವು ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದರು‌. ಆದ್ದರಿಂದ ನಾನು ಅಥವಾ ನನ್ನ ಪತ್ನಿ  ಸ್ವರ್ಧೆ ಎಂಬ ಅನಿಸಿಕೆ ಬಂದಾಗ ಚರ್ಚಿಸಿ ನಮ್ಮ ಪತ್ನಿಯನ್ನು ಕಣಕ್ಕೆ ಇಳಿಸಲು ತಿರ್ಮಾನ ಮಾಡಿ  ಸ್ಪರ್ಧೆ ಮಾಡಲು ನಿರ್ಧಾರ ಮಾಡಲಾಗಿದೆ. ಎಲ್ಲಾ ಪಕ್ಷದ ಎಲ್ಲಾ ಜನಾಂಗದ ಜನರು ಬೆಂಬಲ‌ ನೀಡುತ್ತಿದ್ದು ನಮ್ಮ ಶಕ್ತಿ ಹೆಚ್ಚಿಸಿದ್ದು ಕಳೆದ ಮೂವತ್ತು ವರ್ಷಗಳ‌ ಕಾಲ‌ ನಾವು ಜನರ ಜೊತೆ ಸಂಪರ್ಕದಲ್ಲಿದ್ದು ಕಷ್ಟ ಸುಖ ಆಲಿಸುವ ಕೆಲಸ ನಮ್ಮ ಕುಟುಂಬ ಮಾಡಿದ್ದು ಅದಕ್ಕೆ ಜನ ನಮ್ಮ ಬೆಂಬಲವಾಗಿ ನಿಲ್ಲುತ್ತಾನೆ ಎಂಬ ನಂಬಿಕೆ ನಮಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.
[t4b-ticker]

You May Also Like

More From Author

+ There are no comments

Add yours