ರಘು ಆಚಾರ್ ಸಭೆಗೆ ಭರ್ಜರಿ ಜನ, ಸುತ್ತಮೂತ್ತಲು ಟ್ರಾಫಿಕ್ ಜಾಮ್

 

ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರು ನಗರದ ಗಾಯತ್ರಿ ಕಲ್ಯಾಣ ಮಂಟದಲ್ಲಿ ಕರೆದಿದ್ದ ಬೆಂಬಲಿಗರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳ ಸಭೆಗೆ ಕಿಕ್ಕಿರಿದು ಸೇರಿದ್ದ ಜನಸ್ತೋಮದಿಂದಾಗಿ ಗಾಯಿತ್ರಿ ಕಲ್ಯಾಣ ಮಂಟದ ಹೊರಗೆ, ಕಾಂಪೌಂಡ್ ಹೊರಗೆ, ಸುತ್ತ ಮುತ್ತಲ ರಸ್ತೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.
ರಘು ಆಚಾರ್ ಅವರು ಕಾಂಗ್ರೆಸ್ ಟಿಕೆಟ್ ಕೈ ತಪ್ಪುತ್ತಿದ್ದಂತೆ ಇದೇ ತಿಂಗಳ ಏ.14 ರಂದು ಜೆಡಿಎಸ್ ಪಕ್ಷ ಸೇರುವುದಾಗಿ ಹೇಳಿಕೆ ನೀಡಿದ್ದರು. ಅಷ್ಟೇ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡು ಬರುವುದಾಗಿ ಘೋಷಣೆ ಮಾಡಿದ್ದರು. ರಘು ಆಚಾರ್ ಅವರ ಮನೆ ದೇವರು ತಿರುಪತಿ ತಿಮ್ಮಪ್ಪ ದರ್ಶನ ಪಡೆದು ದೊಡ್ಡ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸೇರುವುದಾಗಿ ಘೋಷಣೆ ಮಾಡಿದ್ದರು. ಅದರ ಅಂಗವಾಗಿ ಭಾನುವಾರ ಕರೆಯಲಾಗಿದ್ದ ಸಭೆಗೆ ನಿರೀಕ್ಷೆ ಮೀರಿ ಜನ ಆಗಮಿಸಿದ್ದು ರಾಜಕೀಯ ಚಿತ್ರಣ ಬೇರೆಯದೇ ಸೂಚನೆ ನೀಡಿದಂತಾಗಿದೆ.
ರಘು ಆಚಾರ್ ಕರೆದಿದ್ದ ಸಭೆಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಮತ್ತು ವಾಹನಗಳ ದಟ್ಟಣೆಯಿಂದಾಗಿ ಗಾಯಿತ್ರಿ ಕಲ್ಯಾಣ ಮಂಟಪದ ರಸ್ತೆ, ಜೆಸಿಆರ್ ಬಡಾವಣೆಗೆ ಹೋಗುವ ರಸ್ತೆ, ಬಸವೇಶ್ವರ ಚಿತ್ರಮಂದಿರದ ಕಡೆಯ ರಸ್ತೆ ಮತ್ತು ಡಿಡಿಪಿಐ ಕಚೇರಿ ಮುಂಭಾಗದ ರಸ್ತೆಗಳಲ್ಲಿ ವಾಹನಗಳು ಜನರು ತುಂಬಿ ತುಳುಕುತ್ತಿದ್ದರಿಂದಾಗಿ ರೋಡ್ ಜಾಮ್ ಆಗಿತ್ತು.

[t4b-ticker]

You May Also Like

More From Author

+ There are no comments

Add yours