ಪರಿಶಿಷ್ಟರ ಮಕ್ಕಳು ಶಿಕ್ಷಣದಿಂದ  ವಂಚಿತರಾಗಬಾರದು: ತುಂಬಿನಕೆರೆ ಬಸವರಾಜ್

 

ಪರಿಶಿಷ್ಟರ ಮಕ್ಕಳು ಶಿಕ್ಷಣದಿಂದ  ವಂಚಿತರಾಗದೇ, ಮುಂದೆ ಬರಬೇಕು: ತುಂಬಿನಕೆರೆ ಬಸವರಾಜ್

ಹೊಸದುರ್ಗ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಹಳಷ್ಟು ಮಕ್ಕಳು ಶಿಕ್ಷಣದಿಂದ   ದೂರ ಉಳಿಯುತ್ತಿದ್ದು, ಬೇಸರ ತರಿಸಿದೆ. ಭಾರತದ ಮಹಾನ್ ನಾಯಕ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಇದನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳು ಸದುಪಯೋಗ ಪಡಿಸಿಕೊಂಡು ಮೌಲ್ಯಯುತ ಶಿಕ್ಷಣ ಪಡೆದುಕೊಳ್ಳಬೇಕೆಂದು ರಾಜ್ಯ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಜ್ಯ ಉಪಾಧ್ಯಕ್ಷ ತುಂಬಿನಕೆರೆ ಬಸವರಾಜ್ ಹೇಳಿದರು.
ತಾಲೂಕಿನ ಮತ್ತೋಡು ಹೋಬಳಿ ನಾಗತಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣ ಪಡೆದು ಸಂಘಟನೆಗೊಂಡು ಹೋರಾಟದ ಮೂಲಕ ಸುಭದ್ರವಾದ ಜೀವನವನ್ನು ರೂಪಿಸಿಕೊಳ್ಳಬೇಕು. ಮನುಕುಲದ ಶ್ರೇಷ್ಠ ಸಂತ, ಆದಿಕವಿ ಮಹರ್ಷಿ ವಾಲ್ಮೀಕಿಯವರ ಭಾರತೀಯ ಪುರಾತನ ಪರಂಪರೆಯಾದ ಕುಟುಂಬ ವ್ಯವಸ್ಥೆ, ಇಂದಿಗೂ ಜಾರಿಯಲ್ಲಿದೆ ಎಂದರೆ, ಅದಕ್ಕೆ ಮೂಲ ಪ್ರೇರಣೆ ಮಹರ್ಷಿ ವಾಲ್ಮೀಕಿಯವರ ರಾಮರಾಜ್ಯ ಕಲ್ಪನೆ. ದೇಶ ಕಟ್ಟಿದ ಅಂದಿನ ಸ್ವತಂತ್ರ ಹೋರಾಟಗಾರರ ಕನಸನ್ನ ನಾವು ನೀವೆಲ್ಲರೂ ಸಾಕರಗೊಳಿಸಬೇಕಿದೆ ಎಂದರು.
 ಸಮುದಾಯದ ಮೀಸಲಾತಿ ಪಡೆದು ಉನ್ನತ ಮಟ್ಟದಲ್ಲಿರುವ ಸಮಾಜ ಬಾಂಧವರು ಸಮುದಾಯದ ಬಡ ಮಕ್ಕಳ ಶಿಕ್ಷಣಕ್ಕೆ ಸ್ಪಂದಿಸಿದಾಗ ಈ ಸಮಾಜದ ಋಣ ತೀರಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.
 ವಾಲ್ಮೀಕಿ ಸಮಾಜದ ಯುವ ಮುಖಂಡ ಮಳಲಿ ವಿಜಯಕುಮಾರ್ ಮಾತನಾಡಿ, ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ  ವಿಮಾನ ನಿಲ್ದಾಣ ಎಂದು ಹೆಸರನ್ನು ನಾಮಕರಣ ಮಾಡುವುದರ ಮೂಲಕ ದೇಶದಾದ್ಯಂತ ಇರುವ ವಾಲ್ಮೀಕಿಯವರ ಸಮುದಾಯವನ್ನು ಗೌರವಿಸಿದ್ದಾರೆ. ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನವರು ಶ್ರೀರಾಮ ಮಂದಿರದ 2ನೇ ಮಹಡಿಯಲ್ಲಿ ಮಹರ್ಷಿ ವಾಲ್ಮೀಕಿ ಮಂದಿರವನ್ನು ನಿರ್ಮಿಸಿ ರಾಮಾಯಣದ ಕರ್ತೃವಿಗೆ ಗೌರವ ನುಮನಲ್ಲಿಸಿದ್ದಾರೆ. ನಮ್ಮ ಊರಿನ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಿ ಉದ್ಯೋಗ ಪಡೆದು ಕುಟುಂಬವನ್ನು ನೆಮ್ಮದಿಯ ಬದುಕಿಗೆ ಕೊಂಡೊಯ್ದರೆ ಇಂತಹ ವಾಲ್ಮೀಕಿ ಜಯಂತಿಗಳು ಸಾರ್ಥಕವೆನಿಸುತ್ತವೆ ಎಂದರು.
 ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಚಿದಾನಂದ್, ಮಾಜಿ ಜಿ.ಪಂ.ಉಪಾಧ್ಯಕ್ಷ ರಾಜಪ್ಪ, ಶರತ್ ದುಷ್ಯಂತ್, ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ಧಿ  ಸಂಘದ ಅಧ್ಯಕ್ಷ, ಶಿಕ್ಷಕ ಜಯಪ್ರಕಾಶ್, ವಾಲ್ಮೀಕಿ ಸಮಾಜದ ಖಜಾಂಚಿ ಜಯಪ್ಪ, ಮಾಜಿ ಗ್ರಾ.ಪಂ.ಸದಸ್ಯ  ಕುಮಾರ್, ಗೌಡ ಕರಿಯಪ್ಪ, ಪ್ರಸನ್ನ ಮತ್ತು ಅವಿನಾಶ್ ಸೇರಿದಂತೆ ಗ್ರಾ.ಪಂ.ಸದಸ್ಯರು, ವಾಲ್ಮೀಕಿ ಯುವ ಸೇನೆ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
[t4b-ticker]

You May Also Like

More From Author

+ There are no comments

Add yours