RSSಗೆ ಸಮಾನತೆಯ ಮೇಲೆ ಯಾವತ್ತೂ ನಂಬಿಕೆ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

 

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜ್ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪರಿಶಿಷ್ಟ ಜಾತಿಪರಿಶಿಷ್ಟ ವರ್ಗಗಳ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆದರೆ BJP ಪಕ್ಷ ಯಾವತ್ತೂ ಕೂಡಾ ಸಾಮಾಜಿಕ ನ್ಯಾಯಮೀಸಲಾತಿ ಬದ್ದತೆ ಇಲ್ಲದ ಪಕ್ಷ. ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಮಾನಸಿಕವಾಗಿ‌ ಒಪ್ಪದೆ ಇರುವುದು ಸಂಘ ಪರಿವಾರ. RSSಗೆ ಸಮಾನತೆಯ ಮೇಲೆ ಯಾವತ್ತೂ ನಂಬಿಕೆ ಇಲ್ಲ. ಸಮ ಸಮಾಜದ ಕನಸು ಕಂಡು ಅಂಬೇಡ್ಕರ್ ಸಂವಿಧಾನದಲ್ಲಿ ಉಲ್ಲೇಖ ಮಾಡಿದ್ದಾರೆ. BJP ಗೆ ಅಂಬೇಡ್ಕರ್ ಕೊಟ್ಟ ಸಂವಿಧಾನದ ಬಗ್ಗೆ ಗೌರವ ಇಲ್ಲ. ಇದು ಅನೇಕ ಅವರ ಹೇಳಿಕೆಗಳ ಮೂಲಕ ನೋಡಲು ಸಾಧ್ಯವಾಗಿದೆ. ಮೋದಿ ಸಂಪುಟದಲ್ಲಿದ್ದ ಆನಂತ್ ಕುಮಾರ್ ಹೆಗ್ಡೆ ಒಮ್ಮೆ ಹೇಳಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಸಂವಿಧಾನ ಬದಲು ಮಾಡಲು ಎಂದಿದ್ದ. ಇದನ್ನ ಹೇಳಿದ ಮೇಲೆ ಬಿಜೆಪಿ ಅಂದಿನ ಯಾವುದೇ ನಾಯಕರು ಕೂಡಾ ನೋಟಿಸ್ ಕೂಡಾ ನೀಡಲಿಲ್ಲ. BJPಯವರು ಸಾಮಾಜಿಕ ನ್ಯಾಯ ಪರ ಇದ್ದೇವೆಂದು ಮೊಸಳೆ ಕಣ್ಣಿರು ಸುರಿಸುತ್ತಾರೆ. ಅನೇಕ ಸಮಯದಲ್ಲಿ ಮೀಸಲಾತಿ ವಿರೋಧ ಮಾಡಿರುವುದು ಯಾಕೆ. ಎಷ್ಟು ವರ್ಷ ಮೀಸಲಾತಿ ಬೇಕುಮೀಸಲಾತಿ ಕೊಟ್ಟಿದ್ದು ಸಾಕಲ್ವ ಎಂದಿದ್ದಾರೆ ಬಿಜೆಪಿಯವರು. ಮೀಸಲಾತಿ ಯಾರೋ ನೀಡಿದ ಬಿಕ್ಷೆಯಲ್ಲಅದು ಶೋಷಿತರ ಹಕ್ಕು ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯ ವರೆಗೂ ಮೀಸಲಾತಿ ಬೇಕು ಎಂದು ಅಂಬೇಡ್ಕರ್ ಹೇಳಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಸಾಮಾಜಿಕಶೈಕ್ಷಣಿಕವಾಗಿ ಮಾತ್ರ ಮೀಸಲಾತಿ ನೀಡಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಬೇಕು ಎಂದಿಲ್ಲ. ಶೇ.10ರಷ್ಟು ಮೇಲ್ಜಾತಿಯ ಬಡವರಿಗೆ ಮೀಸಲಾತಿ ನೀಡುತ್ತೇವೆ ಎಂದು ತರಾತುರಿಯಲ್ಲಿ ಪಾಸ್ ಮಾಡಿದ್ದಾರೆ. ರಾಜ್ಯದಲ್ಲಿ BJPಯವರು SC-ST ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದು ಹೇಳುತ್ತಾರೆ. ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದ್ದುಪ್ರೀಯಾಂಕ್ ಖರ್ಗೆ. 2020 ಫೆ. ನಾಗಮೋಹನ್ ದಾಸ್ ವರದಿಯನ್ನ ಸರ್ಕಾರಕ್ಕೆ ಕೊಟ್ಟರು. ವರದಿ ಸಲ್ಲಿಕೆಯಾದ ಮೇಲೆ 2 ವರ್ಷ 10 ತಿಂಗಳು ಬಿಜೆಪಿ ನಿದ್ದೆ ಮಾಡುತ್ತಿದ್ದರು. ಇದನ್ನ ಜಾರಿ ಮಾಡಿ ಎಂದು SC-ST ಕಾಂಗ್ರೆಸ್ MLA- MLC ಗಳು ಅನೇಕ ಬಾರಿ ಒತ್ತಾಯ ಮಾಡಿದ ನಂತರ ಚುನಾವಣೆ ಸಮೀಪ ಬಂದಾಗ ಮೀಸಲಾತಿ ಮಾಡಿದ್ದೇವೆ ಅನ್ನುತ್ತಾರೆಂದು ವಾಗ್ದಾಳಿ ಮಾಡಿದರು.

[t4b-ticker]

You May Also Like

More From Author

+ There are no comments

Add yours