ಭಾವಸಾರ ಕ್ಷತ್ರೀಯ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹ

 

ಚಿತ್ರದುರ್ಗ, ಜ.09: ಭಾವಸಾರ ಕ್ಷತ್ರೀಯ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಸೋಮವಾರ ಭಾವಸಾರ ಕ್ಷತ್ರೀಯ ಸಮುದಾಯದವರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಭಾವಸಾರ ಕ್ಷತ್ರೀಯ ಸಮುದಾಯದವರ ಮೂಲ ಕಸುಬು ದರ್ಜಿ ವೃತ್ತಿಯಾಗಿದ್ದು ಇತ್ತೀಚೆಗೆ ದೊಡ್ಡ ದೊಡ್ಡ ಕಾರ್ಖಾನೆಗಳ ಮುಖಾಂತರ ಸಿದ್ಧ ಉಡುಪು ತಯಾರಾಗಿ ಪೇಟೆಗೆ ಬರುತ್ತಿರುವುದರಿಂದ ಈ ವೃತ್ತಿಯು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಹಾಗೂ ಹೆಚ್ಚಿನ ವಿದ್ಯಾಭ್ಯಾಸವನ್ನು ಕೊಡಿಸಲು ತುಂಬಾ ಕಷ್ಟಪಡಬೇಕಾಗಿದೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಈಗ ಹಾಲಿ ಭಾವಸಾರ ಕ್ಷತ್ರೀಯ ಸಮುದಾಯವು 2ಎ ಗುಂಪಿನಲ್ಲಿದ್ದು ಇದರಲ್ಲಿ ಸದ್ಯ 112 ಜಾತಿಗಳಿವೆ. ಈ 2ಎ ಗುಂಪಿಗೆ ಯಾವುದೇ ಸರ್ಕಾರಿ ಸೌಲಭ್ಯ ಇರುವುದಿಲ್ಲ. ಪ್ರಯುಕ್ತ ನಾವು ತೀರ ಹಿಂದುಳಿದವರಾಗಿರುವುದರಿಂದ ನಮ್ಮ ಸಮುದಾಯವನ್ನು ಮೇಲೆತ್ತಲು ಹಾಗೂ ಸಮಾಜದಲ್ಲಿ ಗೌರವದಿಂದ ಬಾಳಲು, ಮುಂದೆ ಬರಲು
ಅನುಕೂಲವಾಗುವಂತೆ ನಮ್ಮ ಭಾವಸಾರ ಕ್ಷತ್ರೀಯ ಸಮಾಜವನ್ನು ಎಸ್.ಟಿ. (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿಸಿ ಅನುಕೂಲ ಮಾಡಿಕೊಡಬೇಕು ಎಂದು ಚಿತ್ರದುರ್ಗ ಭಾವಸಾರ ಕ್ಷತ್ರೀಯ ಸಮಾಜದವರು ಮನವಿ ಮಾಡಿದರು.
ಈ ವೇಳೆ ಸಮಾಜದ ಜಿಲ್ಲಾಧ್ಯಕ್ಷ ಆರ್.ಎಂ.ಶ್ಯಾಮ್, ನಾಗರಾಜ್ ಬೇದ್ರೆ, ಜಯರಾಂ ಪೂಜಾರ್, ಶ್ರೀಧರ್ ಬೇದ್ರೆ, ರಾಜೇಶ್ ಬೇದ್ರೆ, ಮುಧುಸೂಧನ್ ಸೇರಿದಂತೆ ಇತರರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours