ಈ ತರಕಾರಿ ಸೇವೆನೆ ಮಾಡಿದರೆ ದೇಹದ ಸಕ್ಕರೆ ಕಾಯಿಲೆ ನಿಯಂತ್ರಿಸಬಹುದು

 

 ಮಧುಮೇಹ ರೋಗಿಗಳು ಸಾಮಾನ್ಯವಾಗಿ ಅಧಿಕ ಅಥವಾ ಕಡಿಮೆ ರಕ್ತದಲ್ಲಿನ ಸಕ್ಕರೆ ಮಟ್ಟದ ಅಪಾಯ ಎದುರಿಸುತ್ತಾರೆ. ಈ ಕಾರಣದಿಂದ ಅವರ ಆರೋಗ್ಯವು ಯಾವಾಗಲೂ ಅಪಾಯದಲ್ಲಿರುತ್ತದೆ. ಮಧುಮೇಹವು ತುಂಬಾ ಸಂಕೀರ್ಣವಾದ ಸಮಸ್ಯೆಯಾಗಿದೆ. ಏಕೆಂದರೆ ಇದು ಹೃದ್ರೋಗ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಅನೇಕ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.

ರೋಗಿಗಳು ಸೇವಿಸುವ ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಸ್ವಲ್ಪ ಅಜಾಗರೂಕತೆ ವಹಿಸಿದರೂ ಸಹ ಆರೋಗ್ಯದ ಮೇಲೆ ಮಾರಣಾಂತಿಕ ಪರಿಣಾಮವುಂಟಾಗುತ್ತದೆ. ಅಧಿಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಯಾವ ತರಕಾರಿಗಳನ್ನು ಸೇವಿಸಬೇಕು ಅನ್ನೋದನ್ನು ತಿಳಿಯಿರಿ.

ಮಧುಮೇಹಿಗಳಿಗೆ ತರಕಾರಿಗಳು

1. ಕೋಸುಗಡ್ಡೆ

ಬ್ರೊಕೊಲಿ ಅತ್ಯುತ್ತಮ ತರಕಾರಿಯಾಗಿದ್ದು, ಮಧುಮೇಹ ರೋಗಿಗಳು ನಿಯಮಿತವಾಗಿ ಸೇವಿಸಿದರೆ ಅವರು ಸಕ್ಕರೆ ಮಟ್ಟದ ಬಗ್ಗೆ ಚಿಂತಿಸಬೇಕಾಗಿಲ್ಲ. ವಾಸ್ತವವಾಗಿ ಇದು ಸಲ್ಫೊರಾಫೇನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ ಮತ್ತು ಗ್ಲೂಕೋಸ್ ಮಟ್ಟವನ್ನು ಕಾಯ್ದುಕೊಳ್ಳುವ ಮಧುಮೇಹ ವಿರೋಧಿ ಗುಣಗಳನ್ನು ಇದು ಹೊಂದಿದೆ.

2. ಟೊಮೇಟೊ

ಟೊಮೇಟೊ ಪಿಷ್ಟ ಮುಕ್ತ ತರಕಾರಿಯಾಗಿದೆ. ಮಧ್ಯಮ ಗಾತ್ರದ ಟೊಮೇಟೊ ತಿಂದರೆ ದೇಹಕ್ಕೆ ಕೇವಲ 5 ಗ್ರಾಂ ಕಾರ್ಬೋಹೈಡ್ರೇಟ್ ಸಿಗುತ್ತದೆ. ಇದರ ಗ್ಲೈಸೆಮಿಕ್ ಸೂಚ್ಯಂಕ

ಕಡಿಮೆ ಇರುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

3. ಪಾಲಕ್

ಪಾಲಕ್ ಅನ್ನು ಹಸಿರು ಎಲೆಗಳ ತರಕಾರಿಗಳ ರಾಜ ಎಂದು ಕರೆದರೆ ತಪ್ಪಾಗುವುದಿಲ್ಲ. ಏಕೆಂದರೆ ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಫೋಲೇಟ್ ಮತ್ತು ಡಯೆಟರಿ ಫೈಬರ್ ಸಮೃದ್ಧವಾಗಿದೆ. ಇದು ಮಧುಮೇಹಕ್ಕೆ ಸಹಾಯ ಮಾಡುತ್ತದೆ. ರೋಗಿಗಳಿಗೆ ಇದು ವರದಾನಕ್ಕಿಂತ ಕಡಿಮೆಯಿಲ್ಲ ಅಂತಾನೇ ಹೇಳಬಹುದು.

 4   ಎಲೆಕೋಸು

ಎಲೆಕೋಸು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಜೊತೆಗೆ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನೀವು ಒಂದು ಕಪ್ ಕತ್ತರಿಸಿದ ಎಲೆಕೋಸು ತೆಗೆದುಕೊಂಡರೆ, ಅದರಲ್ಲಿ ಕೇವಲ 5 ಗ್ರಾಂ ಕಾರ್ಬೋಹೈಡ್ರೆಜ್  ಮಾತ್ರ ಲಭ್ಯವಿರುತ್ತವೆ.

[t4b-ticker]

You May Also Like

More From Author

+ There are no comments

Add yours