ಜನರು ರಾಜಕೀಯ ಹೊಸ ಪರ್ವ ಆರಂಭಿಸಲು ಚಿಂತಿಸಿ: ಡಾಕ್ಟರ್ ಜಯಸಿಂಹ

 

ಹೊಳಲ್ಕೆರೆ : ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಬದಲಾವಣೆ ಅಗತ್ಯವಿದ್ದು, ಜನರು ರಾಜಕೀಯ ಹೊಸ ಪರ್ವ ಆರಂಭಿಸಲು ಚಿಂತಿಸಬೇಕಾಗಿದೆ ಎಂದು ಡಾಕ್ಟರ್ ಜಯಸಿಂಹ ತಿಳಿಸಿದ್ದಾರೆ.

ಅವರು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೆದೆಕೆಪುರ ಹೊಸಹಳ್ಳಿ ಅಳು ಗೋಡೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾರ್ವಜನಿಕರ ಜೊತೆ ರಾಜಕೀಯ ಹೊಸ ಪರ್ವ ಎನ್ನುವ ವಿಚಾರ ಕುರಿತು ಚಿಂತನ ಮಂಥನ ನಡೆಸಿ ಮಾತನಾಡಿದರು,
ಇಂದು ರಾಜಕೀಯ ಕ್ಷೇತ್ರ ಸಾಕಷ್ಟು ಪರಿವರ್ತನೆ ಯಾಗುವ ಅಗತ್ಯವಿದೆ. ರಾಜಕೀಯ ಕ್ಷೇತ್ರದಲ್ಲಿ ಮಾನವಿಯ ಮೌಲ್ಯಗಳನ್ನು ಹುಟ್ಟು ಹಾಕುವ ಚಿಂತನೆ ಅಗತ್ಯವಾಗಿದೆ. ರಾಜಕೀಯ ಕ್ಷೇತ್ರವನ್ನು ಪರಿವರ್ತಿಸಲು ಹೊಸ ಹೊಸ ನಾಯಕರು ಬರಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಸಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಜನರ ಒತ್ತಾಸೆಯಂತೆ ಕ್ಷೇತ್ರದಲ್ಲಿರುವ ಜನರ ಜೊತೆ ಚಿಂತನ ಮಂಥನ ಕೈಗೊಳ್ಳುವ ಮೂಲಕ ಹೊಸ ರಾಜಕೀಯ ಪರ್ವ ಆರಂಭಿಸಲು ಮುಂದಾಗಿದ್ದೇನೆ. ಹಾಗಾಗಿ ಸಾರ್ವಜನಿಕರು ತಮ್ಮಲ್ಲಿರುವ ಹೊಸ ಆಲೋಚನೆಗಳನ್ನು ರಾಜಕೀಯದಲ್ಲಿ ಅನುಷ್ಠಾನಗೊಳಿಸಲು ಸೂಕ್ತ ಸಲಹೆ ಹಾಗೂ ಪ್ರೋತ್ಸಾಹ ನೀಡಬೇಕಾಗಿದೆ. ಹಾಗಾಗಿ ಕ್ಷೇತ್ರದಲ್ಲಿರುವ ಹಲವಾರು ಹಳ್ಳಿಗಳಿಗೆ ಭೇಟಿ ನೀಡಿ ಜನರ ಜೊತೆ ಚಿಂತನ ಮಂಥನ ನಡೆಸುವುದರ ಮೂಲಕ ರಾಜಕೀಯ ಹೊಸ ಮಾರ್ಗವನ್ನು ಕಂಡುಹಿಡಿಯಬೇಕೆಂದು ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದೇನೆ. ಸಾರ್ವಜನಿಕರು ಸಾಕಷ್ಟು ಸ್ಪಂದನ ವ್ಯಕ್ತಪಡಿಸಿದ್ದು, ಗುರು ಹಿರಿಯರ ಮಾರ್ಗದರ್ಶನದಂತೆ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲು ಸಲಹೆ ಸೂಚನೆ ನೀಡುತ್ತಿದ್ದಾರೆ .
ಆ ಮೂಲಕ ಹೊಳಲ್ಕೆರೆ ಕ್ಷೇತ್ರವನ್ನು ಸರ್ವಾಂಗೀಣ ವಾಗಿ ಅಭಿವೃದ್ಧಿ ಪಡಿಸುವುದರ ಮೂಲಕ ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಪ್ರತಿಯೊಬ್ಬರ ಸಲಹೆ ಸಾಕಾರ ಪ್ರೋತ್ಸಾಹ ಬೆಂಬಲ ಅಗತ್ಯವಿದೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸಹ ಒಬ್ಬ ಆಕಾಂಕ್ಷಿಯಾಗಿ ಸ್ಪರ್ಧಿಸಲು ಮುಂದಾಗಿದ್ದೇನೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ .ಭ್ರಷ್ಟಾಚಾರ ಮುಕ್ತ ಸಮಾಜ ಕಟ್ಟುವ ನಿಟ್ಟಿನಲ್ಲಿ ಯುವಕರಿಗೆ ಬೇಕಾದ ಮಾರ್ಗದರ್ಶನವನ್ನು ನೀಡಬೇಕಾಗಿದೆ .ಹೊಸ ಪರಿವರ್ತನೆಯ ಹಾದಿಯಲ್ಲಿ ಸಾಗಿ ರಾಜಕಾರಣವನ್ನು ಮಾಡಬೇಕು ಎನ್ನುವ ಇಚ್ಛೆಯಿಂದ ರಾಜಕೀಯ ದತ್ತ ದಾಪುಕಾಲು ಹಾಕುತ್ತಿದ್ದೇನೆ. ಹಾಗಾಗಿ ಕ್ಷೇತ್ರದ ಎಲ್ಲಾ ಕಡೆ ಸಂವಾದಗಳ ಮೂಲಕ ಹೊಸ ಹೆಜ್ಜೆಯನ್ನ ಹಾಕುತ್ತಿದ್ದು ಪ್ರತಿಯೊಬ್ಬರು ಪ್ರೋತ್ಸಾಹಸಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ಆರ್ ಮೋಹನ್ ನಾಗರಾಜ್ ಮಾತನಾಡಿ , ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪರಿವರ್ತನೆ ತುಂಬಾ ಅಗತ್ಯವಾಗಿದೆ. ಕ್ಷೇತ್ರದಲ್ಲಿರುವ ರಾಜಕೀಯ ಅವ್ಯವಸ್ಥೆಯಿಂದಾಗಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ.
ಅಕ್ರಮ ದಂಧೆಗಳು ತಲೆಗೆತ್ತಿವೆ. ರಾಜಕೀಯವಾಗಿ ಸ್ಥಳೀಯರನ್ನು ತರಬೇಕಾಗಿದೆ. ಸ್ಥಳೀಯ ರಾಜಕೀಯ ಮುಖಂಡರು ರಾಜಕೀಯ ಆಸಕ್ತರಿಗೆ ಇಂದು ಪ್ರೋತ್ಸಾಹವಿಲ್ಲದಂತೆ ಶೋಷಣೆ ಮಾಡುತ್ತಿದ್ದಾರೆ . ಇಂಥ ವ್ಯವಸ್ಥೆಯ ವಿರುದ್ಧ ನಾವೆಲ್ಲರೂ ಎಚ್ಚೆತ್ತುಕೊಂಡು ಹೊಸ ರಾಜಕೀಯ ಪರ್ವ ಆರಂಭಿಸಲು ಚಿಂತನೆ ನಡೆಸಬೇಕಾಗಿದೆ . ಈ ನಟ್ಟಿನಲ್ಲಿ ಸ್ಥಳೀಯ ಅಭ್ಯರ್ಥಿಯಾಗಿರುವ ಡಾಕ್ಟರ್ ಜಯಸಿಂಹ ಅವರು ವಿದ್ಯಾವಂತರು ಇಂಥವರನ್ನ ರಾಜಕೀಯ ಕ್ಷೇತ್ರಕ್ಕೆ ಕರೆತಂದು ಅಧಿಕಾರ ನೀಡಿದಲ್ಲಿ ಬದಲಾವಣೆ ಖಚಿತ ಎಂದು ತಿಳಿಸಿದರು .
ಬಿಜೆಪಿ ಪಕ್ಷದ ರಾಜ್ಯ ರೈತ ಮೋರ್ಚ ಘಟಕದ ಮಾಜಿ ಜಿಲ್ಲಾ ಅಧ್ಯಕ್ಷರಾದ ಮತ್ತಿಘಟ್ಟದ ರಂಗಸ್ವಾಮಿ ಮಾತನಾಡಿ. ಕ್ಷೇತ್ರದಲ್ಲಿ ರಾಜಕೀಯ ಅತಂತ್ರ ಸ್ಥಿತಿ ತಲುಪಿದೆ. ಇಂದಿನ ರಾಜಕೀಯ ಮುಖಂಡರುಗಳು ಕ್ಷೇತ್ರಕ್ಕೆ ಬಂದು ಸಂತೆ ಮಾಡಿಕೊಂಡು ಹೋಗುವಂತ ಸ್ಥಿತಿ ಬಳಸಿಕೊಂಡಿದ್ದಾರೆ. ಸ್ಥಳೀಯರಿಗೆ ಯಾವುದೇ ರೀತಿ ರಾಜಕೀಯವಾಗಿ ಬೆಳವಣಿಗೆ ಹೊಂದಲು ಪ್ರೋತ್ಸಾಹ ನೀಡುತ್ತಿಲ್ಲ. ಇಂಥವರನ್ನು ಕಟ್ಟಿ ಹಾಕಲು ನಾವೆಲ್ಲರೂ ಹೊಸ ಆಲೋಚನೆ ಮಾಡಬೇಕಾಗಿದೆ. ಸ್ಥಳೀಯ ಅಭ್ಯರ್ಥಿಯಾಗಿರುವ ಡಾಕ್ಟರ್ ಜಯಸಿಂಹ ಅವರಿಗೆ ಬೆಂಬಲಿಸುವ ಮೂಲಕ ಹೊಳಲ್ಕೆರೆ ಕ್ಷೇತ್ರದ ರಾಜಕೀಯ ಪರಿವರ್ತನೆಗೆ ಮುಂದಾಗ ಬೇಕಾಗಿದೆ ಎಂದು ಕರೆ ನೀಡಿದರು. ಇದೇ ಸಮಯದಲ್ಲಿ ರೈತ ಸಂಘದ ಮುಖಂಡರಾದ ಬಸವರಾಜಪ್ಪ ,ಮದಿಕೆ ಪುರದ ರವಿಕುಮಾರ್, ನಟರಾಜ್. ಕುಮಾರ್ ನಾಯ್ಕ, ಅಭಿ, ವಿಜಯಕುಮಾರ್ ಸೇರಿದಂತೆ ಮದಕೆರಿಪುರ ,ಹಳುಗೋಡೆ ಸುತ್ತಮುತ್ತಲ ಹಳ್ಳಿಗಳ ಸಾವಿರಾರು ನಾಗರಿಕರು ಪಾಲ್ಗೊಂಡಿದ್ದರು.

 

[t4b-ticker]

You May Also Like

More From Author

+ There are no comments

Add yours