ಲೋಕಯುಕ್ತಕ್ಕೆ ಬಲ ನೀಡಿದ್ದು ಬಿಜೆಪಿ : ಸಿಎಂ ಬೊಮ್ಮಾಯಿ

 

ಚಿತ್ರದುರ್ಗ, ಮಾ.04: ಬಿಜೆಪಿ ಸರ್ಕಾರ ಲೋಕಾಯುಕ್ತಕ್ಕೆ ಹೆಚ್ಚಿನ ಬಲ‌ ನೀಡಿರುವುದರಿಂದಲೇ ಯಾವುದೇ ಪಕ್ಷ ಬೇದವಿಲ್ಲದೆ ನಿಷ್ಪಕ್ಷಪಾತವಾಗಿ ತನಿಖೆ ಕಾರ್ಯ ನಡೆಯುತ್ತಿದೆ. ಇಂತಹ ಲೋಕಾಯುಕ್ತವನ್ನು ಕಾಂಗ್ರೇಸ್ ತನ್ನ ಪಾಪ ಕರ್ಮಗಳನ್ನು ಮುಚ್ವಿ ಹಾಕಲು ದುರ್ಬಲಗೊಳಿಸಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಚಿತ್ರದುರ್ಗದಲ್ಲಿ ಶನಿವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮುನ್ನಾ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅವರ ಮಂತ್ರಿ ಕಚೇರಿಯಲ್ಲೇ 2 ಲಕ್ಷ ರೂ. ಹಣ ಸಿಕ್ಕಿತು. ಆಗ ಲೋಕಾಯುಕ್ತ ಇದ್ದಿದ್ದರೆ ಬಂಧಿಸುತ್ತಿದ್ದರು. ಅಲ್ಲದೆ ಇಂತಹ 59 ಪ್ರಕರಣಗಳನ್ನು ಮುಚ್ಚಿ ಹಾಕಲೆಂದೆ ಲೋಕಾಯುಕ್ತವನ್ನು ಕಾಂಗ್ರೇಸ್ ದುರ್ಬಲಗೊಳಿಸಿದೆ. ಆದರೆ ಮುಂದಿನ ದಿನಗಳಲ್ಲಿ ಅವುಗಳನ್ನು ಸಹ ಹೊರಗೆಳೆಯಲಾಗುವುದು ಮತ್ತು ಇದಕ್ಕೆ ಜನರೇ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದ ಅವರು, ಭ್ರಷ್ಟಾಚಾರದ ವಿರುದ್ದವೇ ನಮ್ಮ ಸಮರ. ಲೋಕಾಯುಕ್ತರು ನಿನ್ನೆ ದಿನ ಯಾವುದೇ ಪಕ್ಷ ಭೇದವಿಲ್ಲದೆ ತನಿಖೆ ನಡೆಸಿ ಭ್ರಷ್ಟಾಚಾರನ್ನು ಬಂಧಿಸಿರುವುದೇ ನಿದರ್ಶನ. ಆದ್ದರಿಂದ ಕಾಂಗ್ರೇಸ್ ಮೊದಲು ತನ್ನ ಎಲೆಯಲ್ಲಿ ಬಿದ್ದಿರುವ ಕತ್ತೆಯನ್ನು ನೋಡಿಕೊಳ್ಳಬೇಕು. ಎಷ್ಟು ಭ್ರಷ್ಟಾಚಾರ ಅವರ ಅಧಿಕಾರವಧಿಯಲ್ಲಿ ನಡೆದಿತ್ತು. ಎಷ್ಟು ಭಾರೀ ಅವರು ರಾಜೀನಾಮೆ ನೀಡಬೇಕಿತ್ತು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿ ಹೇಳಿದರು.
ಕೊಲೆಗೆಡುಕರ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದಿರುವ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ ಅವರು, ಅತೀ ಹೆಚ್ಚು ಕೊಲೆಗಳು ನಡೆದಿದ್ದೆ ಸಿದ್ದರಾಮಯ್ಯ ಕಾಲದಲ್ಲಿ. ಅದು ದೊಡ್ಡ ಪಟ್ಟಿಯೇ ಇದೆ. ಧರ್ಮದ ಹೆಸರಿನಲ್ಲಿ, ಜಾತಿ, ರಾಜಕೀಯ ದ್ವೇಷದಲ್ಲಿ ಎಷ್ಟು ಕೊಲೆಗಳು ಸೇರಿದಂತೆ ಸರಣಿ ಕೊಲೆಗಳಾದವು. ಎಸ್ ಡಿಪಿಐ, ಪಿಎಫ್ ಐ ಕೊಲೆಗೆ ಕಾರಣರಾದವರ ಕೇಸುಗಳನ್ನೆ ಕಾಂಗ್ರೇಸ್ ನವರು ತೆಗೆದು ಹಾಕಿದಾರೆ. ನಿಮಗೆ ಯಾವ ನೈತಿಕತೆ ಇದೆ ರಾಜೀನಾಮೆ ಕೇಳಲು, ಎಲ್ಲಾ ರಂಗದಲ್ಲಿ ಸಹ ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ದೂರಿದರು.

[t4b-ticker]

You May Also Like

More From Author

+ There are no comments

Add yours