ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಿ:ಶಾಸಕ ಟಿ.ರಘುಮೂರ್ತಿ

 

ಚಿತ್ರದುರ್ಗ: ರೈತರಿಗೆ ಅನ್ಯಾಯವಾದಂತೆ ಎಲ್ಲಾ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸಯವ ಕೆಲಸ ಅಧಿಕಾರಿಗಳು ಮಾಡಬೇಕು, ಶುದ್ದ ಕುಡಿಯುವ ನೀರಿನ‌ ಘಟಕಗಳ ನಿರ್ವಹಣೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಿರಾ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಇಂದು ತಾಲೂಕಿನ ತುರುವನೂರು ಹೋಬಳಿಯ ಬೆಳಘಟ್ಟ ಮತ್ತು ಕೂನಬೇವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ರೈತರಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೆ ಜನರಿಗೆ ಮುಟ್ಟಿಸುವ ಕೆಲಸ ಅಧಿಕಾರಿ ವರ್ಗದವರು ಮಾಡಬೇಕು‌. ಎಲ್ಲಾ ರೈತರಿಗೆ ಇನ್ಶೂರೆನ್ಸ್ ಮಾಡಿಸಲು ಅರಿವು ಮೂಡಿಸಬೇಕು. ಎಫ್ಐಡಿ ಕಾರ್ಡನ್ನು ಪಡೆದಯದೇ ಸೌಲಭ್ಯ ಲಭ್ಯವಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದಾಗ ಶಾಸಕರು ಕಡ್ಡಾಯವಾಗಿ ನೀವು ಜವಬ್ದಾರಿ ತೆಗೆದುಕೊಂಡು ಎಫ್ಐಡಿ ಕಾರ್ಡ್ ಮಾಡಿಸಿ ನೂರಕ್ಕೆ ನೂರರಷ್ಟು ರೈತರಿಗೆ ಎಲ್ಲಾ ಸೌಲಭ್ಯ ಒದಗಿಸಿ ಎಂದು ಸೂಚಿಸಿದರು.

ತುತ್ತಾಗಿ ಶುದ್ದ ನೀರಿನ ಘಟಕ ರಿಪೇರಿಗೆ ಕ್ರಮ ವಹಿಸಿ : ಹಲವು ಕಡೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿವೆ. ಅಂತಹ ಶುದ್ದ ನೀರಿನ ಘಟಕಗಳ ನಿರ್ವಹಣೆ ಹೊಣೆ ಹೊತ್ತವರಿಗೆ ನೋಟಿಸ್ ನೀಡಬೇಕು. ಇಷ್ಟು ದಿನ ಏನ್ ಕೆಲಸ ಮಾಡತ್ತಿರಾ ನೀವು ಎಂದು ಗ್ರಾಮೀಣ ಕುಡಿಯುವ ನೀರು ಯೋಜನೆ ಇಂಜಿನಿಯರ್ ಗೆ ತರಾಟೆಗೆ ತೆಗೆದುಕೊಂಡರು. ನನ್ನ ಕ್ಷೇತ್ರದ ತುರುವನೂರು ಹೋಬಳಿಯಲ್ಲಿ ಎಲ್ಲೆಲ್ಲಿ ಶುದ್ದ ಕುಡಿಯುವ ನೀರು ಘಟಕ ನಿರ್ವಹಣೆ ಆಗುತ್ತಿಲ್ಲ ಎಂಬುದು ಪಟ್ಟಿ ಮಾಡಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಎಲ್ಲಾ ಅರ್ಹ ಫಲಾನುಭವಿಗಳು ಪಡೆಯಬೇಕು. ಅಧಿಕಾರಿಗಳು ಪ್ರತಿಯೊಬ್ಬ ಮಹಿಳೆಯರಿಗೆ ಈ ಯೋಜನೆಯ ಮಾಹಿತಿ ನೀಡಬೇಕು. ನನ್ನ ಕ್ಷೇತ್ರದಲ್ಲಿ ಯಾರು ಸಹ ಸೌಲಭ್ಯಗಳಿಂದ ವಂಚಿತರಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದರು.

ಈ ಸ್ವತ್ತು ವಿತರಣೆಯಲ್ಲಿ ಯಾವುದೇ ಲೋಪವಾಗಬಾರದು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನರನ್ನು ಸುಮ್ಮನೆ ಅಲೆದಾಡಿಸಿದರೆ ನಾನು ಸಹಿಸುವುದಿಲ್ಲ. ಕಾಲಮಿತಿಯೊಳಗೆ ಸೌಲಭ್ಯವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಎಲ್ಲಾ ಪಿಡಿಓ ಮತ್ತು ಪಂಚಾಯತಿ ಸಿಬ್ಬಂದಿ ಮಾಡಬೇಕು.

ಹಿರಿಯ ನಾಗರಿಕರಿಗೆ , ವಿಕಲಚೇತನರಿಗೆ, ವಿಧಾವ ವೇತನ ಸೇರಿ ಎಲ್ಲಾ ರೀತಿಯ ಪಿಂಚಣಿಯನ್ನು ಅರ್ಹ ಫಲಾನುಭವಿಗಳಿಗೆ ಖುದ್ದು ಮನೆ ಮನೆ ಭೇಟಿ ನೀಡಿ ವಂಚಿತರನ್ನು ಗುರುತಿಸಿ ಸಂಬಳ ಬರುವಂತೆ ಮಾಡಿಸಿ ಅವರಿಗೆ ನೆರವಾಗಬೇಕು ಇದಕ್ಕೆ ಸೂಕ್ತ ಆದೇಶವನ್ನು ನೀಡಿ ಎಂದು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯತಿ ಹಂತದಲ್ಲಿ ಈಗಾಗಲೇ ಗುರುತಿಸಿರುವ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಕಡೆ ಹೆಚ್ಚಿನ ಗಮನ ಹರಿಸಬೇಕು, ಹೆಚ್ಚು ಸಮಯವನ್ನು ತೆಗೆದುಕೊಳ್ಳದೆ ಶೀಘ್ರವಾಗಿ ಕೆಲಸ ಕಾರ್ಯಗಳು ಮಾಡಬೇಕು ಎಂದು ತಾಲೂಕು ಪಂಚಾಯತಿ ಇಓ‌ ಅವರಿಗೆ ತಿಳಿಸಿದರು.

ಗ್ರಾಮ ಪಂಚಾಯತಿ ಪಿಡಿಓ ಗಳು ಹೆಚ್ಚು ಆಸಕ್ತಿ ವಹಿಸಿ ಗ್ರಾಮಗಳ ಅಭಿವೃದ್ಧಿ ಶ್ರಮಿಸಬೇಕು. ಪ್ರತಿ ಗ್ರಾಮಕ್ಕೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಅರಿತು ನಿಮ್ಮ ಮೇಲಿನ ಹಂತದ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಒದಗಿಸಬೇಕು. ಒಂದು ವೇಳೆ ಸ್ಪಂದನೆ ದೊರೆಯದಿದ್ದರೆ ನನ್ನ ಗಮನಕ್ಕೆ ತನ್ನಿ ಎಂದರು. ಗ್ರಾಮಗಳಲ್ಲಿ ಎಲ್ಲಾ ಸಾರ್ವಜನಿಕ ನೆಲ‌ತೊಟ್ಟಿಗಳು, ಓವರ್ ಹೆಡ್ ಟ್ಯಾಂಕ್, ತೊಟ್ಟಿಗಳನ್ನು ಪ್ರತಿ ತಿಂಗಳು ಸ್ವಚ್ಚತೆಯನ್ನು ಕಡ್ಡಾಯವಾಗಿ ಮಾಡಬೇಕು.

ಗ್ರಾಮ ಆಡಳಿತ ಅಧಿಕಾರಿಗಳು ಜನರನ್ನು ನಗರಗಳಿಗೆ ಕರೆಸಿಕೊಳ್ಳುವುದು ನಿಲ್ಲಿಸಿ ಪ್ರತಿ ಹಳ್ಳಿ ಭೇಟಿ ನೀಡಿ ಅವರಿಗೆ ಅಗತ್ಯವಾದ ದಾಖಲೆಯನ್ನು ಗ್ರಾಮದಲ್ಲಿ ಒದಗಿಸಬೇಕು. ಪ್ರತಿ ಹಳ್ಳಿಗೆ ಕಡ್ಡಾಯವಾಗಿ ತೆರಳಬೇಕು. ಗ್ರಾಮದ ಜನರು ಆಗಮಿಸಿಲ್ಲ ಎಂಬ ದೂರುಗಳು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಸ್ಮಾಶನ ಸಮಸ್ಯೆಗಳು, ದಾರಿ ಸಮಸ್ಯೆಗಳು, ಹೊಲದ ದಾರಿ ಸಮಸ್ಯೆಗಳಿಗೆ ತಹಶೀಲ್ದಾರ್ ಅವರು ಪರಿಹಾರ ಒದಗಿಸುತ್ತಾರೆ.ಜನರು ಜನಸ್ಪಂದನ ಕಾರ್ಯಕ್ರಮಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪ ವಿಭಾಗಧಿಕಾರಿ ಕಾರ್ತಿಕ್ , ಅಧಿನ ಕಾರ್ಯದರ್ಶಿ ಈಶ್ವರ ಪ್ರಸಾದ್, ತಹಶೀಲ್ದಾರ್ ನಾಗವೇಣಿ, ತಾ.ಪಂ.ಇಓ ಹನುಮಂತಪ್ಪ, ಬೆಳಘಟ್ಟ ಗ್ರಾ.ಪಂ. ಅಧ್ಯಕ್ಷೆ ಮಂಜುಶ್ರೀ ಪಾಲಯ್ಯ, ಉಪಾಧ್ಯಕ್ಷ ರಾಮಚಂದ್ರ ರೆಡ್ಡಿ, ಕೂನಬೇವು ಗ್ರಾ.ಪಂ.ಅಧ್ಯಕ್ಷೆ ಕವಿತಾ ನಾಗರಾಜ್, ಉಪಾಧ್ಯಕ್ಷ ಮಂಜಣ್ಣ, ಗ್ರಾಮ ಪಂಚಾಯತಿ ಪಿಡಿಓ ಗಳು, ಸಿಬ್ಬಂದಿಗಳು ಸಾರ್ವಜನಿಕರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours