ಕೋಟೆ ನಾಡಲ್ಲಿ ಶ್ರೀ ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ 

 

ಚಿತ್ರದುರ್ಗ,ಸೆ.30: ನಗರದ ಹೊಳಲ್ಕೆರೆ ರಸ್ತೆಯಲ್ಲಿ ನೆಲೆಸಿರುವ ಶ್ರೀ ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಇದೇ ಸೆ.29 ರಿಂದ ಪ್ರಾರಂಭಗೊಂಡಿದ್ದು, ಅ.05 ರವರೆಗೆ ನಡೆಯಲಿದೆ.

ಜಾತ್ರೋತ್ಸವ ನಿಮಿತ್ತ ಶ್ರೀ ಗೌರಸಂದ್ರ ಮಾರಮ್ಮ ದೇವಿಗೆ ಸೆ.29 ರ ಶುಕ್ರವಾರ ಮದುವಣಗಿತ್ತಿ ಶಾಸ್ತ್ರ ನೆರವೇರಿಸಲಾಗಿದ್ದು, ಅ.02 ರ ಸೋಮವಾರ ರಾತ್ರಿ 11 ಗಂಟೆಗೆ ಚಂದ್ರವಳ್ಳಿ ಕೆರೆಯಲ್ಲಿ ಹೊಳೆ ಪೂಜೆ ನೆರವೇರಲಿದೆ. ಅ.03 ರ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ವರೆಗೆ ಹಿಟ್ಟಿನ ಆರತಿ ಹಾಗೂ ಬೇವಿನ ಸೀರೆ, ಅ.04 ರ ಬುಧವಾರ ರಾತ್ರಿ 8 ಗಂಟೆಗೆ ಅಗ್ನಿಕುಂಡ ನೆರವೇರಲಿದೆ. ಅ.05 ರ ಗುರುವಾರ ಬೆಳಗ್ಗೆ 11 ಗಂಟೆಗೆ ಓಕಳಿ ಮತ್ತು ಶ್ರೀ ಗೌರಸಂದ್ರ ಮಾರಮ್ಮ ದೇವಿಯು ರಾಜ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮುರುಘರಾಜೇಂದ್ರ ಮಠಕ್ಕೆ ತೆರಳಿ ನಂತರ ರಾತ್ರಿ 11 ಗಂಟೆಗೆ ಗರ್ಭಗುಡಿ ಪ್ರವೇಶ ಮಾಡಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಅರ್ಚಕರಾದ ಓಬಳೇಶಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours