ಭೀಕರ ಅಪಘಾತ ನಿಶ್ಚಿತಾರ್ಥದ ಸಂಭ್ರಮವು ಇಲ್ಲ, ಜೀವವು ಇಲ್ಲ, 9 ಜನ ಸಾವು 4 ಜನರ ಸ್ಥಿತಿ ಗಂಭೀರ

 

ಧಾರವಾಡ:   ಅವರೆಲ್ಲರೂ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ಸಂಭ್ರಮದಿಂದ ರಾತ್ರಿ ಮನೆಗೆ ಹಿಂದಿರುಗುತ್ತಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಧಾರವಾಡ ತಾಲ್ಲೂಕಿನ ಬಾಡಾಕ್ರಾಸ್ ಬಳಿ ಟೆಂಪೊ ಮರಕ್ಕೆ ಅಪ್ಪಳಿಸಿ 9 ಜನರ ಪ್ರಾಣಪಕ್ಷಿ ಹಾರಿ ಹೋಯಿತು. ಘಟನೆಯಲ್ಲಿ ೧೩ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.ಮನಸೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು 2 ಗಂಟೆ ಸುಮಾರಿಗೆ ಬೆನಕನಕಟ್ಟಿಗೆ ವಾಪಸ್ಸಾಗುತ್ತಿದ್ದರು. 21 ಜನರಿದ್ದ ಕ್ರೂಸರ್ ವಾಹನ ನಿಗದಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಹೀಗೆ ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಪ್ರಾಣ ಪಕ್ಷಿ ಹಾರಿಹೋಗಿದೆ.

ಇದನ್ನು ಓದಿ:ಮನೆಗೆ ನುಗ್ಗಿ ನಾಲ್ಕು ಜನ ದರೋಡೆಕೋರರಿಂದ ಲಕ್ಷಾಂತರ ರೂಪಾಯಿ ದರೋಡೆ

ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟರೆ, ಇನ್ನಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೃತಪಟ್ಟವರನ್ನು ಅನನ್ಯ (14), ಹರೀಶ್ (13), ಶಿಲ್ಪಾ (34), ನಿಲವ್ವ (60), ಮಧುಶ್ರೀ (20), ಮಹೇಶ್ವರ (11), ಶಂಭುಲಿಂಗಯ್ಯ (35), ನಿಗದಿ (45), ಮನುಶ್ರೀ ಬಸವರಾಜು ದಾಸನಕೊಪ್ಪ (16) ಎಂದು ಗುರುತಿಸಲಾಗಿದೆ.ತಲೆಗೆ ತೀವ್ರ ಪೆಟ್ಟು ಬಿದ್ದು ಗಂಭೀರ ಸ್ಥಿತಿಯಲ್ಲಿರುವ ಆರಾಧ್ಯ ಮತ್ತು ೧೩ ವರ್ಷದ ಮುತ್ತು ಮರಿಗೌಡರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಯಲ್ಲಿ 13  ಮಂದಿ ಗಾಯಗೊಂಡಿದ್ದು, ಅವರೆಲ್ಲರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಭೀಕರ ರಸ್ತೆ ಅಪಘಾತಕ್ಕೆ ಚಾಲಕನ ಬದಲಾವಣೆಯೇ ಕಾರಣ ಎಂದು ಹೇಳಲಾಗಿದೆ. ಚಾಲಕನ ಬದಲಾಗಿದ್ದನ್ನು ವಧುವಿನ ಕಡೆಯವರು ಗಮನಿಸಿದ್ದು ಲಭ್ಯವಾಗಿದೆ.ವಧುವಿನ ಕಡೆಯವರನ್ನು ಕರೆದುಕೊಂಡು ಬಂದಿದ್ದ ಕ್ರೂಸರ್ ಇದಾಗಿದ್ದು, ಅದೇ ಕ್ರೂಸರ್‌ನಲ್ಲಿ ಜನರು ನಿಗದಿ ಗ್ರಾಮಕ್ಕೆ ತೆರಳಿದರು. ನಿಶ್ಚಿತಾರ್ಥ ಕಾರ್ಯದ ಬಳಿಕ ನಿಗದಿಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ.

[t4b-ticker]

You May Also Like

More From Author

+ There are no comments

Add yours