ಎರಡು ದಶಕಗಳ ರಸ್ತೆ ವಿವಾದ ಸುಖಾಂತ್ಯ ಮಾಡುವಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಯಶಸ್ವಿ

 

ಚಳ್ಳಕೆರೆ:  ತಾಲೂಕಿನ ಆಂಧ್ರದ ಗಡಿ ಭಾಗವಾದ ಪಗಲ ಬಂಡೆ ಗ್ರಾಮದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ದಾರಿ ವಿವಾದ ತಹಶೀಲ್ದಾರ್ ಎನ್.ರಘುಮೂರ್ತಿ  ಮಧ್ಯಸ್ಥಿಕೆಯಿಂದ ಇಂದು ಬಗೆಹರಿದಿದೆ.

ಗ್ರಾಮದಲ್ಲಿ ಸರ್ವೆ ನಂಬರ್ 12 /3ರಲ್ಲಿ ನಕಾಶೆ ಕಂಡ ದಾರಿ ಆಂಧ್ರದ ಗಡಿಭಾಗದ ವರೆಗೂ ಹಾದು ಹೋಗುತ್ತದೆ ಈ ನಕಾಶ ಕಂಡ ದಾರಿಯನ್ನು ಮಹಾಂತೇಶ ಈರಪ್ಪ ಎಂಬುವವರು ಒತ್ತುವರಿ ಮಾಡಿ ಅಡ್ಡಗಟ್ಟಿದ್ದರು ಇಡಿ ಗ್ರಾಮಸ್ಥರು ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಮನವಿ ಮಾಡಿದ್ದರು.

ಈ ದಾರಿ ವಿವಾದವನ್ನು ಬಗೆಹರಿಸಿರಲಿಲ್ಲ.  ಪಗಲ ಬಂಡೆ ಬಂಡೆ ಗ್ರಾಮಸ್ಥರ ತಾಲೂಕ ಕಚೇರಿಗೆ ರೈತರುಗಳು ಓಡಾಡಲು ತುಂಬಾ ಅನಾನುಕೂಲ ವಾಗಿರುವುದು ಮತ್ತು ಒಕ್ಕಲುತನ ಮಾಡಲು ಹಾಗೂ ಗಾಡಿಗಳು ಹೋರಾಡಲು ತೊಂದರೆ ಇರುವುದಾಗಿ ಮನವಿ ಮಾಡಿದ್ದಾರಮೇರಿಗೆ ಇಂದು ಬೆಳಿಗ್ಗೆ 8:00 ಘಂಟೆಗೆ ತಹಶೀಲ್ದಾರ್   ಸರ್ವೆಯರ್  ಗ್ರಾಮಕ್ಕೆ ಭೇಟಿ ನೀಡಿ ಒತ್ತುವರಿದಾರರಿಗೆ ಕಾನೂನಿನ ವ್ಯಾಪ್ತಿಯನ್ನು ತಿಳಿಸಿ ಗ್ರಾಮದಲ್ಲಿ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗಬೇಕು ಶಾಂತಿ ಮತ್ತು ನೆಮ್ಮದಿ ನೆಲೆಸಬೇಕು ಸರ್ಕಾರಿ ಸ್ವತ್ತುಗಳನ್ನು ಯಾರೇ ಕಬಳಿಸಿದರು ಸರ್ಕಾರದ ವಶಕ್ಕೆ ಪಡೆಯಲಾಗುವುದ ಎಂದು ತಹಶೀಲ್ದಾರ್  ಎಚ್ಚರಿಕೆ ನೀಡದರು.  ನಕಾಶೆ ದಾರಿಯನ್ನು ಸಾರ್ವಜನಿಕರಿಗೆ ಬಿಡಿಸಿ ಕೊಟ್ಟರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ರಂಗಸ್ವಾಮಿ ರಾಜಸ್ವನಿರೀಕ್ಷಕರಾದ  ಮೋಹನ್ ಸರ್ವೆಯರ್ ಪ್ರಸನ್ನಕುಮಾರ್ ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours