ಮೇದಾರ ಸಮುದಾಯಕ್ಕೆ ನೂತನ ನಿಗಮ ಮತ್ತು ಜಯಂತಿ ಆಚರಣೆ: ಸಿಎಂ ಬಸವರಾಜ್ ಬೊಮ್ಮಾಯಿ ಅಭಯ

 

ಚಿತ್ರದುರ್ಗ:  ಮೇದಾರ ಸಮುದಾಯಕ್ಕೆ ನೂತನ ನಿಗಮ ಮತ್ತು ಜಯಂತಿ ಆಚರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದರು.

ಸೀಬಾರದ ಸಮೀಪ ಇರುವ ಶ್ರೀ ಮೇದಾರ ಗುರು ಪೀಠದ ದಲ್ಲಿ ಶನಿವಾರ ಆಯೋಜಿಸಿದ ಅಖಿಲ ಭಾರತ ಅಖಿಲ ಕರ್ನಾಟಕ ಮೇದಾರ ಬುಡಕಟ್ಟು ಜನಾಂಗದ ಬೃಹತ್ ಸಮಾವೇಶವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮುದಾಯದ ಶಕ್ತಿ ಬಲ ತೋರಿಸಿರುವ ಅವಕಾಶವಿದೆ ಅನೇಕ ಕಾಯಕ ಸಮುದಾಯಗಳು ಹಲವು ವರ್ಷಗಳಿಂದ ವಂಚಿತರಾಗಿದ್ದಾರೆ 12ನೇ ಶತಮಾನದಲ್ಲಿ ಕಾಯಕ ಕ್ರಾಂತಿ ನಡೆದಿತ್ತು ಅದಕ್ಕೆ ಇವತ್ತು ಗೌರವ ತರುವಂತಹ ಕೆಲಸ ಮಾಡಬೇಕಾಗಿದೆ ತಳಮಟ್ಟದ ಹಾಗೂ ಕೀಳು ಮಟ್ಟದ ಭಾವನೆಗಳನ್ನು ದೂರ ದೂರ ಮಾಡಬೇಕಾಗಿದೆ ಎಂದರು.
ಎಲ್ಲ ಸಮುದಾಯದ ಕಾಯಕಕ್ಕೆ ಯೋಗ್ಯವಾದ ಸ್ಥಾನಗಳು ನೀಡಲಾಗಿದೆ ವಂಚಿತರಾಗಿರುವಂತಹ ಸಮುದಾಯಗಳನ್ನು ಒಗ್ಗೂಡಿಸಿ ಆರ್ಥಿಕ ಸಬಲರನ್ನಾಗಿ ಮಾಡುವುದೇ ಮುಖ್ಯ ಉದ್ದೇಶ, ನಿಸರ್ಗದಲ್ಲಿ ಸಿಗುವಂತ ವಸ್ತುಗಳನ್ನು ಬಳಸಿಕೊಂಡು ಕಾರ್ಯಕ್ರಮ ಮಾಡುವುದು ಅತ್ಯಂತ ಶ್ರೇಷ್ಠ ಕಾಯತವಾಗಿದೆ ಜಾಗತೀಕರಣ ಆಧುನಿಕರಣ ಕಾಸಿ ಕಾರಣದಿಂದ ಜನರಿಗೆ ಆರ್ಥಿಕದ ನಷ್ಟ ಬಿದ್ದಿದೆ ಇದರಿಂದ ಅಂತಕರ್ಣ ಮರೆತು ಹೋಗಿದೆ ಇತಂಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ರಾಜಕಾರಣಿಗಳು ಅಂತಕರ್ಣದಿಂದ ಆಡಳಿತ ನೆರವೇರಸಬೇಕಾಗಿದೆ ಎಂದರು.
ಕಸಬು ಆಧಾರಿತ ಸಮುದಾಯಗಳಿಗೆ ಶಕ್ತಿ ತುಂಬುವಂತಹ ಕೆಲಸವನ್ನು ಮುಂದಿನ ಬಜೆಟಿನಲ್ಲಿ ವಿಶೇಷ ಅನುದಾನ ನೀಡಲಾಗುವುದು ಎಸ್ಸಿ ಎಸ್ಟಿ ಶ್ರೀಸಾಮಾನ್ಯರಿಗೆ 5 ಲಕ್ಷ ಸ್ವಯಂ ಉದ್ಯೋಗ ಕಲ್ಪಿಸಲಾಗಿದೆ.
ಸಂವಿಧಾನವನ್ನು ಅಡಿಯಲ್ಕಿ ಜನಸಾಮಾನ್ಯರಿಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಳ ಮಾಡಲಾಗಿದೆ ಈಗಾಗಲೇ ಎಸ್ಟಿ ಎಸ್ಸಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಸಮುದಾಯದ ಮೂಲ ಕಸಬಾಭಿವೃದ್ಧಿ ಪಡಿಸಲು ಶೇಕಡ 36 ರಷ್ಟು ಅರಣ್ಯವನ್ನು ಉತ್ತೇಜಿಸಲಾಗುವುದು ಜೊತೆಗೆ ವಿಶೇಷ ಜಮೀನುಗಳಲ್ಲಿ ಬಿದಿರು ಬೆಳೆಯಲು ಉತ್ತೇಜನವನ್ನು ನೀಡಲಾಗುವುದು ಎಂದರು.
ಅಖಿಲ ಕರ್ನಾಟಕ ಶ್ರೀ ಗುರು ಮೇದಾರ ಕೇತೇಶ್ವರ ನಿಗಮವನ್ನು ಸ್ಥಾಪನೆ ಮಾಡಲಾಗುವುದು ಜೊತೆಗೆ ವೃತ್ತಿಪರ ಸಮುದಾಯ ಆಗಿರುವುದರಿಂದ ಹೊಸ ಹೊಸ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲಾಗುವುದು ಎಂದರು.
ಬಿದಿರಿನಿಂದ ತಯಾರಿಸಿದಂತಹ ಉಪಕರಣಗಳನ್ನು ವಿದೇಶಗಳಲ್ಲಿ ಮಾರಾಟ ಮಾಡಲು ಮತ್ತು ಅಮೆಜಾನ್, ಫ್ಲಿಪ್ಕಾರ್ಟ್, ಮಾರಾಟ ಮಾಡಲು ಅವಕಾಶವನ್ನು ನೀಡಲಾಗುವುದು ಹಂತ ಹಂತ ಹಂತವಾಗಿ ಮಠದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲಾಗುವುದು ಎಂದು ಹೇಳಿದರು.
ಸರ್ಕಾರದಿಂದ ಎಲ್ಲಾ ಸಮುದಾಯದ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ ಅದರ ಜೊತೆಗೆ ಶ್ರೀ ವೇದಾರ ಕೇತೇಶ್ವರ ಜಯಂತಿ ಆಚರಣೆ ಮಾಡಲಾಗುವುದು ಹಾಗೂ ಯಾವ ಗ್ರಾಮದಲ್ಲಿ ಮೇದಾರ ಸಮುದಾಯ ಹೆಚ್ಚು ಇರುತ್ತದೆಯೋ ಆ ಗ್ರಾಮದಲ್ಲಿ ಸಮುದಾಯದ ಭವನ ನಿರ್ಮಾಣ ಮಾಡಿಕೊಡಲಾಗುವುದು ಎಂದು ಹೇಳಿದರು.
ದುಡಿಮೆ ನಿಮ್ಮದು ಅದಕ್ಕೆ ಬೆಲೆ ತರುವಂತಹ ಕೆಲಸ ಸರ್ಕಾರ ಮಾಡುತ್ತದೆ ಅಮೃತ ಯೋಜನೆಯಲ್ಲಿ 354 ಕೋಟಿ ಹಣವನ್ನು ಮೀಸಲಿಟ್ಟು ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಕಾರ್ಯ ನಿರ್ವಹಿಸಿದೆ ಎಂದು ತ ಹೇಳಿದರು.
21ನೇ ಶತಮಾನದಲ್ಲಿ ಇದ್ದಂತಹ ಕಾಯಕ ಕ್ರಾಂತಿ ಮತ್ತೆ ಕರ್ನಾಟಕದಲ್ಲಿ ಉದಯಗೊಳ್ಳಲಿದೆ ಆ ಕನಸು ನನಸು ಮಾಡಲು ನಾನು ಬದ್ಧನಾಗಿದ್ದೆನೆ ಎಂದು ಹೇಳಿದರು.

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ,ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ,ಚಂದ್ರಪ್ಪ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ,ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಪಂ ಸಿಇಓ ದಿವಾಕರ, ಅನೇಕ ಸಮುದಾಯದ ಮಠದೀಶರು ಹಾಗೂ ಮೇದಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours