ದಾರಿ ತಪ್ಪಿ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಜ:7: ದಾರಿ ತಪ್ಪಿ ಜೀವನ ಹಾಳು ಮಾಡಿಕೊಳ್ಳಬೇಡಿ, ಪೋಷಕರ ಕನಸನ್ನು ನನಸು ಮಾಡುವ ಕಡೆ ನಿಮ್ಮ ಗುರಿ ಇರಲಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಸರ್ಕಾರಿ ಕಲಾ ಕಾಲೇಜು , ನ್ಯಾಕ್ ಮಾನ್ಯತೆ’ ಬಿ’ ಶ್ರೇಣಿ  ಐಕ್ಯೂಎಸಿ  ವತಿಯಿಂದ ಆಯೋಜಿಸಿರುವ  ಸಾಂಸ್ಕೃತಿಕ , ಕ್ರೀಡೆ, ಎನ್.ಸಿ‌.ಸಿ, ಎನ್.ಎಸ್.ಎಸ್, ಯುವ ರೆಡ್ ಕ್ರಾಸ್ , ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಇತರೆ ಚಟುವಟಿಕೆಗಳ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ತಮ್ಮ ಬದುಕನ್ನು  ಬದಲಾವಣೆ ತಂದುಕೊಳ್ಳುವ  ಅವಧಿ ಎಂದು ಭಾವಿಸಿ ಶ್ರಮದಿಂದ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗೆ ಹಣಿಗೊಳಿಸಲು ಮೊದಲು ಶಿಕ್ಷಕರು ಕ್ರಿಯಾಶೀಲರಾಗಿ ಕೆಲಸ ಮಾಡಿದರೆ ಹೆಚ್ಚು ವಿದ್ಯಾರ್ಥಿಗಳು ಸ್ವರ್ಧೆಗೆ ಭಾಗವಹಿಸಲು ಪ್ರೇರಣೆ ಆಗುತ್ತದೆ. ಕೇಲವ ದೈಹಿಕ ಶಿಕ್ಷಕರು ಹಲವು ವರ್ಷಗಳಿಂದ ನಾವು ಕ್ರೀಡಾಂಗಣದಲ್ಲಿ ಎಂದು ನಾನು ನೋಡಲಿಲ್ಲ. ದೈಹಿಕ ಶಿಕ್ಷಕರು ಮೊದಲು ಚಟುವಟಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು. 30-40 ವರ್ಷಗಳ ಹಿಂದೆ ವಿದ್ಯಾರ್ಥಿಗಳನ್ನು ಭೇಟಿ ಮಾಡಲು    ಕ್ರೀಡಾಂಗಣಕ್ಕೆ ತೆರಳಬೇಕಿತ್ತು ಆದರೆ ಈಗ ಕ್ರೀಡಾಂಗಣದಲ್ಲಿ ವಿದ್ಯಾರ್ಥಿ ಕಾಣುದಿರುವುದು ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಕಡಿಮೆ ಆಗುತ್ತಿದೆ ಎಂಬುದು ತಿಳಿಯುತ್ತಿದೆ. ವಾಲಿಬಾಲ್, ಬ್ಯಾಸ್ಕೆಟ್ ಬಾಲ್ ಚನ್ನಾಗಿ ನಮ್ಮ ಕಲಾದಲ್ಲಿ ಆಟವಾಡುತ್ತಿದ್ದೇವು. ಅಂದು ನಮ್ಮ ಸರ್ಕಾರಿ ಕಾಲೇಜಿನ 6 ಜನರ ತಂಡ ನ್ಯಾಷನಲ್ ಹಂತದಲ್ಲಿ ಮೊದಲನೇ ಪ್ರಶಸ್ತಿ ಪಡೆದು ಅಂದಿನ  ಅಮೇರಕನ್ ಮಾಸ ಪತ್ರಿಕೆ   ಸ್ಪೋರ್ಟ್ಸ್ ಅಂಡ್ ಪಾಸ್ಟ್ ಟೈಮ್ ಎಂಬ ಪತ್ರಿಕೆಯಲ್ಲಿ ಮುಖಪುಟದಲ್ಲಿ ನಮ್ಮ ಚಿತ್ರ ಬಂದಿತ್ತು ಎಂದು ತಮ್ಮ  ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ  ಜಾತ್ಯಾತೀತ ಮನೋಭಾವ ಬೆಳೆಯುತ್ತದೆ. ಕ್ರಿಕೆಟ್ ಗೆ ಆಸಕ್ತಿ ಹೆಚ್ಚು ತೋರದೆ ನಮ್ಮ ದೇಶಿ ಕ್ರೀಡೆಯಲ್ಲಿ ಭಾಗವಹಿಸಬೇಕು. ಕೇಂದ್ರ ಸರ್ಕಾರ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು.  ನಮ್ಮ ದೇಶದ ಪರಿಸ್ಥಿತಿ ಸುಧಾರಣೆ ಕಾಣುವತ್ತ ನಾವು ಹೆಜ್ಜೆ ಹಾಕುತ್ತಿದ್ದೇನೆ. ಈ ಮೊದಲು ನಮ್ಮ ಪ್ರಧಾನ ಮಂತ್ರಿ ವಿದೇಶಕ್ಕೆ ತೆರಳಿದರೆ ಭೀಕ್ಷೆಗೆ ಬಂದಿದ್ದಾರೆ ಎಂಬ ಭಾವನೆ ಇತ್ತು  ಆದರೆ ಇಂದು ನಮ್ಮ ಪ್ರಧಾನಿಯನ್ನು ಅಮೇರಿಕಾದ ಪ್ರಧಾನಿ ಬಂದು ನಮ್ಮ ದೇಶದ ಪ್ರಧಾನಿಯನ್ನು ಸ್ವಾಗತಿಸುತ್ತಿರುವುದು ನಮ್ಮ ದೇಶಕ್ಕೆ ಹೆಮ್ಮೆ ಉಂಟು ಮಾಡುತ್ತಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಅಧ್ಯಯನಕ್ಕೆ ಆಗಮಿಸುತ್ತಾರೆ.  ಹೊರ ಜಿಲ್ಲೆಗಳಿಂದ ಸಹ   ವಿದ್ಯಾರ್ಥಿಗಳು ಆಗಮಿಸುತ್ತಾರೆ ಅದಕ್ಕೆ ಸಾಕಷ್ಟು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಕಾರ ಸಹ ನೀಡಿದ್ದೇನೆ. ತಂದೆ ತಾಯಿಗಳು ಕನಸುಗಳನ್ನು ಹೊತ್ತು ಕೂಲಿನಾಲಿ ಮಾಡಿ ನಿಮಗೆ ಉನ್ನತ ಅಭ್ಯಾಸಕ್ಕೆ ಕಳಿಸುತ್ತಾರೆ ಇದನ್ನು ಮನಗಂಡು ಜವಬ್ದಾರಿಯಿಂದ ಅಭ್ಯಾಸ ಮಾಡಿ ತಮ್ಮ ಹೆತ್ತವರ  ಆಸೆಗಳ ಕಡೆ ನಿಮ್ಮ ಗುರಿ ಇರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಿವೃತ್ತ ಪ್ರಾಂಶುಪಾಲರು ಹಾಗೂ ವಿಶೇಷ ಉಪನ್ಯಾಸಕರಾದ ಡಾ.ಎಸ್.ಹೆಚ್. ಅಶೋಕ್ ಕುಮಾರ್ ಮಾತನಾಡಿ  ಗಂಡು ಹೆಣ್ಣು ಎಂಬ ಭೇಧಭಾವ ಇಲ್ಲದೆ  ಎಲ್ಲಾರೂ ಒಟ್ಟಾಗಿ ವೇಳೆ ವಿದ್ಯಾರ್ಥಿಗಳಾಗಿ ಮಾತ್ರ ಕಲಿಕೆ ಮಾಡಬೇಕು. ನಾನು ಸಹ ಕಲಾ ಕಾಲೇಜು ವಿದ್ಯಾರ್ಥಿ ಎಂಬ ಹೆಮ್ಮೆ ಇದೆ. ಸರ್ಕಾರಿ ಕಲಾ ಕಾಲೇಜಿನಲ್ಲಿ  ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಜಗತ್ತನ್ನು ಗೆಲ್ಲಬಹುದು.  ಆಧುನಿಕ ಆವಿಷ್ಕಾರಗಳು ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿದೆ. ವಿದ್ಯಾರ್ಥಿಗಳಿಗೆ ಓದುವ ಹಠ ಮತ್ತು ಚಟ ಇರಬೇಕು ಮತ್ತು ಪೈಪೋಟಿ ಇರಬೇಕು. ಸಿದ್ದಗಂಗಾ ಶ್ರೀ, ಪುನೀತ್ ರಾಜ್ ಕುಮಾರ್, ಸಿದ್ದೇಶ್ವರ ಶ್ರೀ ಗಳು ನಮಗೆ ಮಾದರಿಯಾಗಬೇಕು‌. ಆಧುನಿಕ ಜಗತ್ತಿನಲ್ಲಿ  ವಿದ್ಯಾರ್ಥಿಗಳು ಮೊಬೈಲ್ ಮತ್ತು  ದುಶ್ಚಟಗಳಿಗೆ ಬಲಿಯಾಗಿ ವೈಭೋಗದ ಜೀವನ ಅಳವಡಿಸಿಕೊಂಡಿದ್ದಾರೆ. ಪ್ರಮಾಣಿಕತೆಗೆ ಮತ್ತೊಂದು ಹೆಸರು ಸರ್.ಎಂ.ವಿಶ್ವೇಶ್ವರಯ್ಯ ಎಂದು ಹೇಳಬಹುದು. ಹುಟ್ಟಿನ ಸಾರ್ಥಕವಾಗಲು ನಾವು ಅಧ್ಯಯನ ನಿರತರಾಗಬೇಕು ಎಂದರು. ಜಾತ್ಯಾತೀತ ಮನೋಭಾವ ಎಲ್ಲಾರೂ ಬೆಳೆಸಿಕೊಳ್ಳಬೇಕು.ಮೊಬೈಲ್ ನಿಂದ ವಿದ್ಯಾರ್ಥಿಗಳಿಗೆ ಕ್ರಿಯಾಶೀಲತೆ ಕಡಿಮೆ ಮಾಡುವ ಜೊತೆಗೆ ಆರೋಗ್ಯ ಹಾಳಾಗುತ್ತಿದೆ. ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಜೀವನದಲ್ಲಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ  ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಪ್ರಾಂಶುಪಾಲ ಬಿ.ಟಿ.ತಿಪ್ಪೇಸ್ವಾಮಿ, ಉಪನ್ಯಾಸಕರಾದ ನಾಗರಾಜ್,ಡಾ.ಎಸ್.ಆರ್. ಲೇಪಾಕ್ಷ, ಆರ್.ಗಂಗಾಧರ್,  ಕೃಷ್ಣಪ್ಪ,ಪ್ರೋ. ಹೆಚ್. ರಂಗಸ್ವಾಮಿ, ಮಧುಸೂದನ್, ಹೆಚ್. ಬಸವರಾಜ್, ಪ್ರೋ ಅಶ್ವತ್, ಡಾ.ಪ್ರಸಾದ್,ಡಾ. ಬಿ.ಸುರೇಶ್,ಡಾ.ಟಿ.ಶ್ಯಾಮರಾಜ್. ಬಿಇಡಿ ಕಾಲೇಜು ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ ಇದ್ದರು.
[t4b-ticker]

You May Also Like

More From Author

+ There are no comments

Add yours