ವಿವಾದದಿಂದ ನಿಂತಿದ್ದ ಕಾರ್ತಿಕ ಮಹೋತ್ಸವಕ್ಕೆ ಚಾಲನೆ,ತಹಶೀಲ್ದಾರ್ ಎನ್.ರಘುಮೂರ್ತಿ ಸಮ್ಮುಖದಲ್ಲಿ ಸಂಧಾನ

 

ಚಳ್ಳಕೆರೆ: ಎನ್.ಗೌರಿಪುರ ಗ್ರಾಮದಲ್ಲಿ  ನೆನೆಗುದಿಗೆ ಬಿದ್ದಿದ್ದ ಕಾರ್ತಿಕೋತ್ಸವ ವಿವಾದವನ್ನು  ಬಗೆಹರಿಸುವಲ್ಲಿ  ತಹಶೀಲ್ದಾರ್  ಎನ್. ರಘುಮೂರ್ತಿ ಯಶಸ್ವಿಯಾಗಿದ್ದಾರೆ.

ನಾಯಕನಹಟ್ಟಿ ಹೋಬಳಿ ಎನ್ ಗೌರಿಪುರ ಗ್ರಾಮದ ಉಮಾಮಹೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸ್ಥಳೀಯ ವಿವಾದಗಳಿಂದ ಹಲವು ವರ್ಷಗಳಿಂದ ಮನೆ ನೆನೆಗುದಿಗೆ  ಬಿದ್ದಿದ್ದು ಇದರಿಂದ ಗ್ರಾಮದ ಹಿರಿಯರು ಮತ್ತು ಯುವಕರು ಆತಂಕಗೊಂಡಿದ್ದು ಅಂತಿಮವಾಗಿ ಈ ವಿವಾದವನ್ನು ಬಗೆಹರಿಸುವಂತೆ  ಗ್ರಾಮಸ್ಥರ ಮನವಿಯಂತೆ ತಹಶೀಲ್ದಾರ್ ವಿವಾದಕ್ಕೆ ನಾಂದಿಯಾಡಿದ್ದಾರೆ.

ಭಾನುವಾರ ಸಂಜೆ 6ಗಂಟೆ ಸಮಯದಲ್ಲಿ  ಉಮಾಮಹೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ಗ್ರಾಮದ ಎಲ್ಲಾ ಯುವಕರು ಮತ್ತು ಹಿರಿಯರನ್ನು ಸಭೆಗೆ ಆಹ್ವಾನಿಸಿ ಪರಂಪರೆ ಮತ್ತು ಐತಿಹಾಸಿಕ ಹಿನ್ನೆಲೆ ಉಳ್ಳಂತ ಈ ದೇವಸ್ಥಾನ ಇಡೀ ತಾಲೂಕಿನಲ್ಲಿ ಪವಿತ್ರವಾದಂತದ್ದಾಗಿದೆ.  ಈ ದೇವರ ಭಕ್ತಾದಿಗಳು ಇಡೀ ತಾಲೂಕಿನಲ್ಲಿ ಮನೆ ಮಾಡಿದೆ ಜಾತಿ ಪಕ್ಷ ಮತ್ತು ವ್ಯಕ್ತಿ ಮೀರಿ ಗ್ರಾಮದ ಎಲ್ಲ ಮನಸ್ಸುಗಳು ಒಂದಾಗಬೇಕು.

ಭಕ್ತಿ ಭಾವ ಪರವಶರಾಗಿ ಈ ಉಮಾಮಹೇಶ್ವರನ ಕಾರ್ತಿಕೋತ್ಸವದ ಪೂಜೆ ಮತ್ತು ಕೈ ಕರಿಯಗಳನ್ನು ನೆರವೇರಿಸಬೇಕಾಗಿದ್ದು ಗ್ರಾಮದ ಪ್ರತಿಯೊಬ್ಬರ ಕರ್ತವ್ಯ ಗ್ರಾಮದಲ್ಲಿ ಸಾಮರಸ್ಯ ಸಹಬಾಳ್ವೆ ಮತ್ತು ಸಹೋದರತ್ವವನ್ನು ಮೈಗೂಡಿಸಿಕೊಳ್ಳಬೇಕು.

ಯಾವುದೇ ವಿವಾದಗಳನ್ನು ಸೃಷ್ಟಿಸಬಾರದು ನನ್ನೊಳಗೊಂಡಂತೆ ಪೊಲೀಸ್ ಇಲಾಖೆ ಈ ಜಾತ್ರಾ ಮಹೋತ್ಸವದಲ್ಲಿ ಖುದ್ದಾಗಿ ಹಾಜರಿರುತ್ತೇವೆ. ಈ ಸಮಯದಲ್ಲಿ ಒಂದು ಸಣ್ಣ ಪ್ರಮಾದವಾದರೂ ಸಂಬಂಧಪಟ್ಟವರು ಬೆಲೆ ತೆರಬೇಕಾಗುತ್ತದೆ ಇದೇ ತಿಂಗಳು 16ನೇ ತಾರೀಕು ನೀವು ನಡೆಸುವ ಜಾತ್ರೆ ಇಡೀ ತಾಲೂಕಿಗೆ ಒಂದು ಸ್ಪಷ್ಟ ಸಂದೇಶವನ್ನು ನೀಡಿ ನಿಮ್ಮ ಗ್ರಾಮ ಮಾದರಿಯಾಗಬೇಕಾಗುತ್ತದೆ ಎಂದು ಜನರಿಗೆ ಮನವರಿಕೆ ಮಾಡಿದರು.

ಗ್ರಾಮಸ್ಥರು ಒಗ್ಗಟ್ಟಿನಿಂದ  ಯಾವುದೇ ವಿವಾದಗಳಿಲ್ಲದೆ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಳ್ಳುತವೆಂದು ತಹಸಿಲ್ದಾರ್ ಅವರಿಗೆ ಒಪ್ಪಿಗೆ ಸೂಸಿದರು. ಈ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮಹದೇವಪುರ ತಿಪ್ಪೇಸ್ವಾಮಿ ದೇವಸ್ಥಾನದ ಸಮಿತಿಯ ತಿಪ್ಪೇಸ್ವಾಮಿ, ಭೋಗೇಶಪ್ಪ ಮತ್ತು ತಾರಕೇಶ್ ರಾಜೇಶ್ವವೀಕ್ಷಕರಾದ ಚೇತನ್ ಕುಮಾರ್ ಗ್ರಾಮ ಲೆಕ್ಕಾಧಿಕಾರಿ ಪುಷ್ಪಲತಾ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours