ಹೊಸದುರ್ಗ ಸಾಮಾನ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ?

 

 

 

ಶಾಸಕ ಗೂಳಿಹಟ್ಟಿ ಶೇಖರ್, ಎಸ್.ಲಿಂಗಮೂರ್ತಿ, ಹೆಬ್ಬಳಿ ಓಂಕಾರಪ್ಪ ನಡುವೆ ಟಿಕೆಟ್ ಫೈಟ್ (ಕಿಕ್ಕರ್)

ವಿಶೇಷ ವರದಿ: ಎನ್ ಗಂಗಾಧರ್ ಕಂಚೀಪುರ
ಹೊಸದುರ್ಗ:
ಮುಂದಿನ ವಿಧಾನಸಭಾ ಚುನಾವಣಾ ಅಧಿಸೂಚನೆ ಹೊರಬೀಳುವ ಮುನ್ನವೇ ಬಿಜೆಪಿಯಲ್ಲಿ ಟಿಕೆಟ್ ಫೈಟ್ ರಂಗೇರಿದೆ.
ಬಿಜೆಪಿ ಪಕ್ಷದ ಟಿಕೆಟ್ ಯಾರು ಪಡೆಯುತ್ತಾರೆ ಎನ್ನುವ ಕುತೂಹಲ ಮತ್ತಷ್ಟು ಕಗ್ಗಂಟಾಗುವ ಲಕ್ಷಣಗಳು ಕಾಣುತ್ತಿವೆ. ಹೊಸದುರ್ಗ ವಿಧಾನಸಭೆ ಸಾಮಾನ್ಯ ಕ್ಷೇತ್ರವಾಗಿದ್ದು, ಕಳೆದ 2018 ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಗೂಳಿಹಟ್ಟಿ ಶೇಖರ್ ಅವರನ್ನು ಕರೆತಂದು ಕ್ಷೇತ್ರವನ್ನು ಬಿಜೆಪಿ ವಶಪಡಿಸಿಕೊಂಡಿತ್ತು. ಈ ಬಾರಿ ಇದುವರೆಗೂ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಬಿಜೆಪಿಯಿಂದ ಗೆದ್ದು ಶಾಸಕರಾಗಿರುವ ಕಾರಣ ಸಹಜವಾಗಿ ಅವರೇ ಮುಂದಿನ ಅಭ್ಯರ್ಥಿ ಎನ್ನುವ ವಾತಾರಣವಿತ್ತು. ಶಾಸಕರೂ ಸಹ ಪಕ್ಷದಲ್ಲಿ ಸಕ್ರಿಯವಾಗಿದ್ದರು. ಕಳೆದ 2018 ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್ ಲಿಂಗಮೂರ್ತಿ ತಾವೇ ಬಿಜೆಪಿ ಅಭ್ಯರ್ಥಿ, ನಾನು ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದು ಸುಳ್ಳಲ್ಲ.
ಎಸ್. ಲಿಂಗಮೂರ್ತಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಖಚಿತ, ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಹಾಲಿ ಶಾಸಕರಿಗೆ ನಾನು ಪಕ್ಷದ ಟಿಕೆಟ್ ತ್ಯಾಗ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹಾಲಿ ಶಾಸಕರು ಯಾರೋ ಒಬ್ಬರ ತ್ಯಾಗ ಅಲ್ಲ, ಪಕ್ಷದ ಪ್ರತಿಯೊಬ್ಬರಿಗೆ ಟಿಕೆಟ್ ಕೇಳುವ ಹಕ್ಕಿದೆ ಎನ್ನುವ ಹೇಳಿಕೆ ಹೊರ ಹಾಕಿದ್ದರು.
ನಂತರ ಶಾಸಕ ಗೂಳಿಹಟ್ಟಿ ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಗೆ ದಿಢೀರ್ ಹಾಜರಾಗಿದ್ದರು. ಆಗ ಶಾಸಕರು ನಿಗಮ ಅಧ್ಯಕ್ಷರಿಗೆ ಯಾರು ಆಹ್ವಾನ ನೀಡಿದ್ದಾರೆ. ಪ್ರೋಟೋಕಾಲ್ ಪ್ರಕಾರ ಅವರ ಬರಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಲಿಂಗಮೂರ್ತಿ ಇಒ ಕರೆದಿದ್ದರು. ಕರೆದು ಅವಮಾನ ಮಾಡಿದ್ದೀರಿ ಎಂದು ಆರೋಪಿಸಿ ಹೊರ ನಡೆದಿದ್ದರು. ನಂತರ ಇಬ್ಬರ ನಡುವೆ ಆರೋಪ ಪ್ರತ್ಯಾರೋಪ ನಡೆದಿದ್ದು ಕ್ಷೇತ್ರದಲ್ಲಿ ಜಗಜಾಹೀರಾಗಿತ್ತು. ಈ ನಡುವೆ ಬಿಜೆಪಿಯಲ್ಲಿ ಹೆಬ್ಬಳಿ ಓಂಕಾರಪ್ಪ ಎನ್ನುವ ಮತ್ತೊಬ್ಬ ಲಿಂಗಾಯತ ಸಮುದಾಯದ ಆಕಾಂಕ್ಷಿ ಉದಯವಾಗಿದ್ದು, ಇದೀಗ ಹೊಸದುರ್ಗ ಸಾಮಾನ್ಯ ಕ್ಷೇತ್ರವಾದ ಹಿನ್ನೆಲೆಯಲ್ಲಿ ಓಂಕಾರಪ್ಪ ಸಹ ಲಿಂಗಾಯತ ಸಮುದಾಯ, ಸಮುದಾಯದ ಮಠ ಸಹಿತ ಕ್ಷೇತ್ರದಲ್ಲಿ ಸಕ್ರಿಯವಾಗಿರುವುದು. ದೇವಾಂಗ ಸಮುದಾಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಉದ್ದೇಶದಿಂದ ಕ್ಷೇತ್ರಾದ್ಯಂತ ಸಕ್ರಿಯವಾಗಿರುವ ಟಿ. ಮಂಜುನಾಥ್ ಸಹ ಅಲ್ಲಲ್ಲಿ ಬಿಜೆಪಿ ನಾಯಕರ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಅಂತು ಇದೀಗ ಹೊಸದುರ್ಗದಲ್ಲಿ ಬಿಜೆಪಿಯ ಟಿಕೆಟ್ ಯಾರಿಗೆ ಎನ್ನುವ ಗೊಂದಲ ಕಾರ್ಯಕರ್ತರು, ಮುಖಂಡರಲ್ಲಿರುವುದು ಸುಳ್ಳಲ್ಲ.

ಬಾಕ್ಸ್…
ಗೋವಿಂದಪ್ಪಗೆ ಕೈ ಟಿಕೆಟ್ ಪಕ್ಕ
ಮಾಜಿ ಶಾಸಕ ಬಿಜಿ ಗೋವಿಂದಪ್ಪ ಹಿರಿಯ ಅನುಭವಿ ರಾಜಕಾರಣಿ. ಇತ್ತೀಚೆಗೆ ನಡೆದ ಬಿಜಿ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡು ಪಕ್ಷದ ಅಭ್ಯರ್ಥಿ ಗೋವಿಂದಪ್ಪ ಎಂದು ಘೋಷಣೆ ಮಾಡಿದ್ದರು. ಬಿಜಿ ಡಿಕೆ ಶಿವಕುಮಾರ್ ಅವರೊಂದಿಗೂ ಉತ್ತಮ ಸಂಬಂಧವಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಅರ್ಜಿ ಸಲ್ಲಿರುವ ಡಾ.ಕೆ.ಅನಂತ್, ಕಾರೇಹಳ್ಳಿ ಉಲ್ಲಾಸ್, ಕೃಷ್ಣಮೂರ್ತಿ ಅವರು ಬಿಜಿ ಅಪ್ತವಲಯದವರೇ ಆಗಿದ್ದು, ಗೋವಿಂದಪ್ಪ ಅವರೇ ಅರ್ಜಿ ಹಾಕಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

೨ ಪಕ್ಷೇತರರ ಅಭ್ಯರ್ಥಿಗಳು ಫಿಕ್ಸ್
ಕ್ಷೇತ್ರದಲ್ಲಿ ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಪಾಂಡುರಂಗಪ್ಪ ಗರಗ, ದೇವಾಂಗ ಸಮುದಾಯದ ಯುವ ಮುಖಂಡ ಟಿ.ಮಂಜುನಾಥ್ ತಮ್ಮದೇ ನೆಲೆಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರೂ ಪಕ್ಷೇತರರು ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡೋದು ಖಚಿತ.

[t4b-ticker]

You May Also Like

More From Author

+ There are no comments

Add yours