ನನ್ನ ಮಣ್ಣು ನನ್ನ ದೇಶ ಅಭಿಯಾನ ಪ್ರತಿಯೊಬ್ಬರಲ್ಲಿ ದೇಶಾಭಿಮಾನ ಮೂಡಿಸಿದೆ : ಟಿ.ರಘುಮೂರ್ತಿ

 

ಚಳ್ಳಕೆರೆ:  ರಾಷ್ಟ್ರದ  ಪ್ರತಿಯೊಬ್ಬ ನಾಗರೀಕನೂ ದೇಶ ಪ್ರೇಮಿಯಾಗಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ  ತ್ಯಾಗಬಲಿದಾನಗೈದ ಮಹಾನೀಯರನ್ನು ಸ್ಮರಿಸಬೇಕು. ತಮ್ಮ ಪ್ರಾಣದ ಹಂಗುತೊರೆದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಸೈನಿಕರನ್ನು ಸದಾ ಸ್ಮರಿಸಬೇಕು. ಸ್ವಾತಂತ್ರ್ಯೋತ್ಸವದ  ಅಮೃತಮಹೋತ್ಸವ ಶುಭ ಸಂದರ್ಭದಲ್ಲಿ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಕಾರ್ಯಕ್ರಮ ದೇಶದಲ್ಲಿ ಹೊಸ ಅಲೆಯನ್ನು ಸೃಷ್ಠಿ ಮಾಡಿದೆ ಎಂದು ಶಾಸಕರಾದ (MLA) ಟಿ.ರಘುಮೂರ್ತಿ ತಿಳಿಸಿದರು.
ಅವರು, ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದ ಬಯಲು ರಂಗಮಂದಿರ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನೆಹರೂ ಯುವ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ನನ್ನ ಮಣ್ಣು ನನ್ನ ದೇಶ, ಮಣ್ಣಿಗೆ ನಮನ, ವೀರಯೋಧರಿಗೆ ವಂದನೆ ಕಾರ್ಯಕ್ರಮ ಅಮೃತ ಕಳಸ ಸಮರ್ಪಣಾ ಸಮಾರಂಭವನ್ನು ರಾಷ್ಟçಧ್ವಜಾರೋಹಣದೊಂದಿಗೆ ಮತ್ತು ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದಂತಾಗುತ್ತದೆ. ಸೈನಿಕರ ಕಾರ್ಯ ನಮ್ಮೆಲ್ಲರಿಗೂ ಸ್ಪೂರ್ತಿ ಎಂದರು. ಗ್ರಾಮ ಪಂಚಾಯಿತಿ ಮತ್ತು ಸಾರ್ವಜನಿಕರಿಂದ ಸಂಗ್ರಹಿಸಿದ್ದ ಮಣ್ಣನ್ನು ನವದೆಹಲಿಯಲ್ಲಿ ನಿರ್ಮಾಣ ಮಾಡುವ ಸೈನಿಕ ಸ್ಮಾರಕ ಭವನಕ್ಕೆ ಶಾಸಕ ಟಿ.ರಘುಮೂರ್ತಿ ನೆಹರೂ ಯುವ ಕೇಂದ್ರಕ್ಕೆ ಹಸ್ತಾಂತರ ಮಾಡಿದರು.
 ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೆ.ಕೆ.ಹೊನ್ನಯ್ಯ, ಕಳೆದ ಸುಮಾರು ಎರಡು ತಿಂಗಳಿನಿAದ ಈ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ತಾಲ್ಲೂಕಿನ ೪೦ ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕರಿಂದ ಮಣ್ಣನ್ನು ಮಡಿಕೆಯಲ್ಲಿ ಸಂಗ್ರಹಿಸಿ ನೆಹರೂ ಯುವ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿದೆ. ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಪ್ರತಿಯೊಬ್ಬ ವ್ಯಕ್ತಿಯಲ್ಲೂ ರಾಷ್ಟಿçÃಯ ಭಾವನೆಯನ್ನು ಹುಟ್ಟುಹಾಕುವುದಾಗಿದೆ ಎಂದರು.
ಮಾಜಿ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಗೋಪಾಲರೆಡ್ಡಿ ಮಾತನಾಡಿ, ಈ ರಾಷ್ಟçದ ಸೈನಿಕನಾಗಿ ಸೇನೆಯಲ್ಲಿ ಕಾರ್ಯಮಾಡುವುದು ಪೂರ್ವಜನ್ಮದ ಪುಣ್ಯ ಎಂದು ನನ್ನ ಭಾವನೆ. ದೇಶದಲ್ಲಿ ಯಾವುದೇ ವ್ಯಕ್ತಿಗೂ ಸಿಗದ ಮಾನ್ಯತೆ, ಗೌರವ ಸೈನಿಕರಿಗೆ ಸಿಗುತ್ತದೆ ಎಂದರೆ ಅದು ನಮ್ಮ ಪುಣ್ಯ. ಸೇನೆಯಲ್ಲಿ ಕಾರ್ಯನಿರ್ವಹಿಸಿದ ತೃಪ್ತಿ ಎಲ್ಲಾ ಮಾಜಿ ಸೈನಿಕರಿಗೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಪ್ರವೀಣ್, ಮಂಜುನಾಥರೆಡ್ಡಿ, ಮುಕ್ತಿಯಾರ್ ರೇಹಮಾನ್, ತಿಮ್ಮಣ್ಣ, ವೆಂಕಟೇಶ್‌ರೆಡ್ಡಿ, ಶಿವಮೂರ್ತಿ, ಎಸ್.ಪಿ.ಮಹದೇವಣ್ಣ, ದಿವಂಗರ ಸುಬ್ಬಯ್ಯರೆಡ್ಡಿ ಕುಟುಂಬ ಧನಲಕ್ಷಿö್ಮಯವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಸ್ವಾಗತಿಸಿದರು. ತಹಶೀಲ್ದಾರ್ ರೇಹಾನ್ ಪಾಷ, ಪೌರಾಯುಕ್ತ ಸಿ.ಚಂದ್ರಪ್ಪ, ಸಿಡಿಪಿಒ ಹರಿಪ್ರಸಾದ್, ಎಸ್ಟಿ ಅಧಿಕಾರಿ ಶಿವರಾಜ್,  ಬಿಸಿಎಂ ಅಧಿಕಾರಿ ದಿವಾಕರ್, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಟಿಎಚ್‌ಒ ಡಾ.ಕಾಶಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎನ್.ಕಾವ್ಯ, ದಯಾನಂದ, ವಿಜಯಭಾಸ್ಕರ, ರೇವಣ್ಣ, ಅಕ್ಷರ ದಾಸೋಹ ತಿಪ್ಪೇಸ್ವಾಮಿ, ಆರೋಗ್ಯ ಇಲಾಖೆಯ ಎಸ್.ಬಿ.ತಿಪ್ಪೇಸ್ವಾಮಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
[t4b-ticker]

You May Also Like

More From Author

+ There are no comments

Add yours