ನನ್ನ ಅಭಿವೃದ್ದಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆ: ಶಾಸಕ ಟಿ.ರಘುಮೂರ್ತಿ

 

ಚಿತ್ರದುರ್ಗ: ಕ್ಷೇತ್ರದಲ್ಲಿ  ನಾನು ಮಾತಡಲ್ಲ ನನ್ನ ಅಭಿವೃದ್ಧಿ ಕೆಲಸಗಳು ಮಾತಡುತ್ತಿದ್ದು ಜನರ ಆಶೀರ್ವಾದ ನನ್ನ ಮೇಲಿದೆ ಸಮಾಜದ ಬದಲಾವಣೆ ಬಡವರ ಏಳ್ಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ  ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.‌
ತಾಲೂಕಿನ ತುರುವನೂರು ಹೋಬಳಿಯ ಸಿದ್ದೇಶ್ವರನದುರ್ಗ, ಚಿಕ್ಕ ಕಬ್ಬಿಗೆರೆ, ಹಿರೇಕಬ್ಬಿಗೆರೆ, ಚಿಕ್ಕಕಬ್ಬಿಗೆರೆ ಗೊಲ್ಲರಹಟ್ಟಿ, ಹೊಸಹಟ್ಟಿ, ಮುದ್ದಾಪುರ, ಸೂರನಹಳ್ಳಿ, ಮ್ಯಾಸರಹಟ್ಟಿ  ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಪ್ರತಿ ಹಳ್ಳಿಯಲ್ಲಿ ಶಕ್ತಿ ಮೀರಿ ಜನರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇನೆ‌. ಕೋವಿಡ್ ಸಮಯದಲ್ಲಿ ಈಗ ಮತ ಕೇಳುತ್ತಿರುವವರು ಎಲ್ಲಿದ್ದರು ಪ್ರಶ್ನಿಸಿದರು. ನಾನು ಜನರ ಜೊತೆಗಿದ್ದು ಕೋವಿಡ್  ಲಸಿಕೆ ಹಾಕಿಸುವ ಮೂಲಕ ಜನರ ಪ್ರಾಣವನ್ನು ರಕ್ಷಣೆ ಮಾಡಿದ್ದೇನೆ. ಕಷ್ಟದಲ್ಲಿ ಆದ ನನ್ನನ್ನು ಜನ ಎಂದು ಮರೆಯಲ್ಲ ಎಂದರು.
ಚಳ್ಳಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಜಾತ್ಯತೀತವಾಗಿ ಪಕ್ಷಾತೀತವಾಗಿ ಶ್ರಮಿಸಿದ್ದೇನೆ. ನಿಮ್ಮ  ಪ್ರೀತಿ ಆಶೀರ್ವಾದದಿಂದ ಎರಡು ಬಾರಿ ಶಾಸಕನಾಗಿದ್ದೇನೆ. ನಮ್ಮ ಸರ್ಕಾರದ ಅವಧಿಯಲ್ಲಿ  ಚಳ್ಳಕೆರೆ ಇತಿಹಾಸದಲ್ಲಿ ಯಾರು ತರದಷ್ಟು  ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ.
ಪ್ರತಿ ವರ್ಷ ರೈತರು  ಲಕ್ಷಾಂತರ ಹಣ ಖರ್ಚು ಮಾಡಿ ಬೊರವೆಲ್ ಕೊರೆಸಿದರು ಸಹ ನೀರು ಬರುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರ ಮತ್ತು ನಾನು ರೈತರ ಬದುಕು ಅಸನು ಮಾಡಬೇಕು ಎಂಬ ದೃಷ್ಟಿಯಿಂದ ಬೊಂಬೇರಹಳ್ಳಿ, ಚೌಳೂರು ಬ್ರಿಡ್ಜ್ ಕಂ ಬ್ಯಾರೇಜ್, ಪರಶುರಾಂಪುರ , ಸುಲ್ತಾನಿಪುರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ  ಮಾಡಿ ಶಾಶ್ಚತ  ಪರಿಹಾರ ಒದಗಿಸಿ ನೀರಾವರಿಗೆ ಒತ್ತು ನೀಡಲಾಗಿದೆ. ಭದ್ರ ಜಲಾಶಯದಿಂದ ವೇದಾವತಿ ನದಿಗೆ ೦.25 ನೀರು ಹರಿಸುವ ಕೆಲಸ ಮಾಡಿ ಲಕ್ಷಾಂತರ ಎಕರೆ ಕೃಷಿ ಅಭಿವೃದ್ಧಿ ಆಗಿದ್ದು ನನಗೆ ಸಂತಸ ತಂದಿದೆ.
ತುಂಗಾ ಭದ್ರಾ ಹಿನ್ನೀರಿನ ಮೂಲಕ ನನ್ನ ಕ್ಷೇತ್ರದ ಎಲ್ಲಾ ಹಳ್ಳಿಗಳ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿ ನಡೆಯುತ್ತಿದ್ದು 3-4 ತಿಂಗಳಲ್ಲಿ ಕೆಲಸ ಪೂರ್ಣವಾಗಿ ನೀರು ಹರಿಯಲಿದೆ‌ ಎಂದರು.
ನಮ್ಮ ಕ್ಷೇತ್ರದಲ್ಲಿ  ಸಾಲ ಮನ್ನಾ ಕುಮಾರಸ್ವಾಮಿ ಮಾಡಿದ್ದು ಎಂದು ಹೇಳುತ್ತಿದ್ದು  ಮೊದಲು ನಿಲ್ಲಿಸಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾಲ ಮನ್ನಾ ಮಾಡಲಾಗಿದೆ. ಕಾಂಗ್ರೆಸ್ ಬೆಂಬಲ ಕೊಟ್ಟಿದ್ದರಿಂದ  ಸಾಲ ಮನ್ನ ಮಾಡಿದ್ದು ಎಂದು  ನೆನಪಿರಲಿ. ಸರ್ಕಾರ ನಿರ್ಮಾಣದಲ್ಲಿ ನನ್ನ ಮತ ಸಹ ಇದೆ.
ಸಿದ್ದರಾಮಯ್ಯ ಅವರ  ಕಾಲದಲ್ಲಿ 50 ಸಾವಿರ ರೂಪಾಯಿ  ಎಲ್ಲಾ ಕೃಷಿ ಸಹಕಾರಿ ಪತ್ತಿನ, ಸೊಸೈಟಿಗಳ ಸಾಲ , ಬ್ಯಾಂಕ್ ಗಳ ಸಾಲ‌ ಮನ್ನಾ ನಾವು ಮಾಡಿ ರೈತರ ಹಿತ ಕಾಯುವ ಕೆಲಸ ಮಾಡಿದ್ದೇನೆ.
ಎಲ್ಲಾ ಕಡೆ ಜನರು ಜನರಿಂದ ಉತ್ತಮ ಸ್ಪಂದನೆ ಇದ್ದು ಜನರು ಮನೆ ಮಗನಂತೆ ಪ್ರೀತಿಯಿಂದ ಬರ ಮಾಡಿಕೊಂಡು ನನ್ನ ಜೊತೆ ನಿಲ್ಲುತ್ತಿದ್ದು ವಿರೋಧಿಗಳ ಅಪಪ್ರಚಾರಕ್ಕೆ ನಾನು ಉತ್ತರ ಕೊಡಲ್ಲ. ಜನರೇ ಉತ್ತರ ನೀಡುತ್ತಾರೆ ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಜಿ.ಟಿ. ಶಶಿಧರ್, ವೀರಭದ್ರಪ್ಪ, ಮಾಜಿ ಜಿ.ಪಂ.ಸದಸ್ಯ ಬಾಬುರೆಡ್ಡಿ, ಪ್ರಕಾಶ್ ಮೂರ್ತಿ, ಹೊಸಹಟ್ಟಿ ರಾಜಪ್ಪ,ಮಂಜು, ತಿಮ್ಮರಾಜ್, ನಾಗರಾಜ್, ವೆಂಕಟೇಶ್,ರವಿ ಮತ್ತು  ಗ್ರಾಮಗಳ ಮುಖಂಡರು ,ನೂರಾರು ಯುವಕರು ಇದ್ದರು.
[t4b-ticker]

You May Also Like

More From Author

+ There are no comments

Add yours