ಈ ಬಾರಿ ಚಿತ್ರದುರ್ಗಕ್ಕೆ ಮಹಿಳಾ ಅಭ್ಯರ್ಥಿಗೆ ಬೆಂಬಲ ನೀಡಿ:ಸೌಭಾಗ್ಯ ಬಸವರಾಜನ್

 

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯಾಗಿ ಏಕೈಕ ಬಾರಿಗೆ ಸ್ಪರ್ಧೆ ಮಾಡಿದ್ದೇನೆ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯನಿರ್ವಹಿಸಲು ಕ್ಷೇತ್ರದ ಜನತೆ ಅವಕಾಶ ಮಾಡಿಕೊಡಬೇಕೆಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದರು.

ತಾಲೂಕಿನ ಸೊಲ್ಲಾಪುರ, ನಾಯಕರ ಸೋಲಾಪುರ, ಜಾನುಕೊಂಡ, ದೇವಪುರದಹಟ್ಟಿ,ಗಂಜ್ಜಿಗಟ್ಟೆ ಪಂಡರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ಭರ್ಜರಿ ಪ್ರಚಾರವನ್ನು ನಡೆಸಿದರೆ.

ಸೊಲ್ಲಾಪುರ ಗ್ರಾಮದ ಯುವಕು ಜೆಸಿಬಿ ಮೂಲಕ ಬೃಹತ್ ಆಕಾರದ ಹೂವಿನ ಹಾರವನ್ಬು ಹಾಕಿ ಅದ್ಧೂರಿಯಾಗಿ ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ನನ್ನು ಗ್ರಾಮಕ್ಕೆ ಸ್ವಾಗತಿಸಿದರು.

ಗ್ರಾಮದ ಪ್ರಮುಖ ಬೀದಿಯಲ್ಲಿ ಪಟಾಕಿ ಸಿಡಿಸಿ ಮನೆ ಮನೆಗೆ ಭೇಟಿಯಾಗಿ ತೆಂಗಿನ ತೋಟದ ಗುರುತಿಗೆ ಮತವನ್ನು ನೀಡಬೇಕು ಎಂದು ಹೇಳಿದರು.

ಕ್ಷೇತ್ರವನ್ನು ಬರೀ ರಾಷ್ಟ್ರೀಯ ಪಕ್ಷಗಳಿಂದಲೇ ಅಭಿವೃದ್ಧಿ ಮಾಡಬೇಕೆನ್ನುವ ಪರಿಕಲ್ಪನೆ ಯಾವ ಇತಿಹಾಸದಲ್ಲೂ ಇಲ್ಲ, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಕೂಡ ಕ್ಷೇತ್ರದ ಅಭಿವೃದ್ಧಿ ಕೆಲಸವನ್ನು ಮಾಡಬಹುದು ಹಾಗಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸಬೇಕೆಂದು ತಿಳಿಸಿದರು.

ಮಾಜಿ ಶಾಸಕರಾದ ಎಸ್ ಕೆ ಬಸವರಾಜ್ ರವರು ಶಾಸಕರಾದಂತಹ ಸಂದರ್ಭದಲ್ಲಿ ಪ್ರತಿ ಹಳ್ಳಿಯಲ್ಲೂ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅದೇ ರೀತಿ ಅವರ ಪತ್ನಿಯಾಗಿ ಚಿತ್ರದುರ್ಗ ಕ್ಷೇತ್ರಕ್ಕೆ ಪಾದರಪಣೆಯನ್ನು ಮಾಡಿದ್ದೇನೆ. ಮತದಾರರು ನನ್ನ ಮೇಲೆ ಭರವಸೆ ನಂಬಿಕೆ ಇಟ್ಟು ಈ ಬಾರಿಯ ವಿಧಾನಸಭಾ ಚುನಾವಣೆಯ ಚಿತ್ರದುರ್ಗದ ಕ್ಷೇತ್ರದ ಅಭಿವೃದ್ಧಿಯ ಕೆಲಸ ಮಾಡುವುದಕ್ಕೆ ನನ್ನನ್ನು ಗೆಲ್ಲಿಸಿ ಕೊಡಬೇಕೆಂದು ಮತದಾರರಿಗೆ ತಿಳಿಸಿದರು.

[t4b-ticker]

You May Also Like

More From Author

+ There are no comments

Add yours