ಮತ್ಸ್ಯವಾಹಿನಿ” ಇ-ತ್ರಿಚಕ್ರ ವಾಹನ ಪರವಾನಿಗೆಗಾಗಿ ಅರ್ಜಿ ಆಹ್ವಾನ

 

ಚಿತ್ರದುರ್ಗ (ಕರ್ನಾಟಕ ವಾರ್ತೆ)ಮಾ.12:
ಚಿತ್ರದುರ್ಗ ಜಿಲ್ಲೆಯ ಮೀನುಗಾರಿಕೆ ಇಲಾಖಾ ವತಿಯಿಂದ 2023-24ನೇ ಸಾಲಿಗೆ ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ, ಸ್ಥಳೀಯವಾಗಿ ಮೀನು ಸೇವೆಯನ್ನು ಪ್ರೋತ್ಸಾಹಿಸಲು,  ಪರಿಸರ  ಸ್ನೇಹಿ ಸುಸಜ್ಜಿತ ಕಿಯೋಸ್ಕ್ ಮಾದರಿಯ ಇ-ತ್ರಿಚಕ್ರ ವಾಹನಗಳಲ್ಲಿ ತಾಜಾ ಮೀನು ಉತ್ಪನ್ನ ಮಾರಾಟಕ್ಕಾಗಿ ಸಾರ್ವಜನಿಕ ಸಹಭಾಗಿತ್ವದ ಮೂಲಕ ಇ-ವಾಹನಗಳನ್ನು ಪರವಾನಗಿ ಆಧಾರದಲ್ಲಿ ಪಡೆಯಲು ಮೀನುಗಾರಿಕೆಯಲ್ಲಿ ತೊಡಗಿರುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 25 ಅರ್ಜಿ ಸಲ್ಲಿಸಲು ಕೊನೆಯ ದಿನ.

ಜಿಲ್ಲೆಗೆ 3 ಭೌತಿಕ ಗುರಿ ನಿಗದಿಪಡಿಸಲಾಗಿದ್ದು, ಸಾಮಾನ್ಯ ವರ್ಗದವರಿಗೆ ಭದ್ರತಾ ಠೇವಣಿ ರೂ.1 ಲಕ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರಿಗೆ ಭದ್ರತಾ ಠೇವಣಿ ರೂ.0.50 ಲಕ್ಷ ನಿಗದಿಪಡಿಸಲಾಗಿದೆ. ಪರವಾನಿಗೆದಾರರು ಮಾಹೆಯಾನ ರೂ. 3000/- ಮಾಸಿಕ ಶುಲ್ಕ ಭರಿಸಬೇಕಾಗುತ್ತದೆ.

ಆಸಕ್ತರು ಮಾ.25 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕ ಕಚೇರಿ, ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ಮೀನಿಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours