ಸಂಘ ಸಂಸ್ಥೆಗಳ ಲೆಕ್ಕಪತ್ರ ದಾಖಲೆ ಸಲ್ಲಿಸಲು ಮತ್ತೊಂದು ಅವಕಾಶ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಮಾ.12:
ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960 ರಡಿಯಲ್ಲಿ ನೊಂದಣಿಯಾದ ಪ್ರತಿಯೊಂದು ಸಂಘ- ಸಂಸ್ಥೆಯು ಕಲಂ 13ರಂತೆ ಸಂಬಂಧಿಸಿದ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯಬೇಕಾಗಿರುತ್ತದೆ.
ಆದರೆ, ಅನೇಕ ಸಂಘ- ಸಂಸ್ಥೆಗಳು ಐದು ವರ್ಷಗಳಿಗೂ ಮೇಲ್ಪಟ್ಟು ದಾಖಲಾತಿಗಳನ್ನು ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯಲು ಬಾಕಿ ಇದ್ದು, ಈ ಸಂಘ-ಸಂಸ್ಥೆಗಳ ಸದಸ್ಯರ ಹಿತದೃಷ್ಟಿಯಿಂದ ಮತ್ತೊಂದು ಬಾರಿ ಅವಕಾಶ ನೀಡಿ, ಪ್ರತಿ ವರ್ಷಕ್ಕೆ ಹೆಚ್ಚುವರಿ ರೂ.3000/-ಗಳ ದಂಡ ವಿಧಿಸಿ 2024ರ ಜೂನ್ 30 ರವರಗೆ ಸೀಕೃತಿ ಪಡೆಯಲು ಅವಕಾಶ ನೀಡಲಾಗಿದೆ ಎಂದು ಸಂಘಗಳ ಜಿಲ್ಲಾ ನೊಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ಸ್ಯವಾಹಿನಿ” ಇ-ತ್ರಿಚಕ್ರ ವಾಹನ ಪರವಾನಿಗೆಗಾಗಿ ಅರ್ಜಿ ಆಹ್ವಾನ

[t4b-ticker]

You May Also Like

More From Author

+ There are no comments

Add yours